Operation Sindoor: ಬಹಾವಲ್ಪುರ ನಗರದಲ್ಲಿದ್ದ ಉಗ್ರರ ಸೆಮಿನಾರ್ ಹಾಲ್ ಭಾರತದ ಕ್ಷಿಪಣಿ ದಾಳಿಗೆ ಧ್ವಂಸ!

Updated on: May 07, 2025 | 11:31 AM

ಧ್ವಂಸಗೊಂಡಿರುವ ಸೆಮಿನಾರ್ ಹಾಲ್ ಕಟ್ಟಡದ ಅವಶೇಷಗಳನ್ನು ಪಾಕಿಸ್ತಾನೀಯರು ನಿಂತು ನೋಡುತ್ತಿದ್ದಾರೆ. ಕಟ್ಟಡ ನಗರದ ಹೊರವಲಯದಲ್ಲಿರುವುದು ಮತ್ತು ಹೆದ್ದಾರಿಯೊಂದು ಹಾದು ಹೋಗಿರುವುದನ್ನು ನೋಡಬಹುದು. ರಸ್ತೆಯ ಮೇಲೆ ವಾಹನಗಳು ನಿಶ್ಚಲ ಸ್ಥಿತಿಯಲ್ಲಿವೆ. ಪುನಃ ಕ್ಷಿಪಣಿ ದಾಳಿ ನಡೆದರೆ ಹೇಗೆ ಅಂತ ಅವರು ಯೋಚಿಸುತ್ತಿರಬಹುದು. ಇಲ್ಲಿ ಕಾಣುವ ಜನ ಮಾತ್ರ ಅಲ್ಲ ಇಡೀ ಪಾಕಿಸ್ತಾನವನ್ನು ಭೀತಿ ಆವರಿಸಿದೆ.

ಬೆಂಗಳೂರು, ಮೇ 7: ತಂಟೆಗೆ ಬಂದರೆ, ಕಾಲು ಕೆದರಿ ಜಗಳಕ್ಕೆ ಬಂದರೆ ಜೋಕೆ ಅಂತ ಭಾರತ ಹೇಳುತ್ತಲೇ ಇತ್ತು. ಆದರೆ ಭಾರತದ ಎಚ್ಚರಿಕೆಯನ್ನು ಪಾಪಿ ಪಾಕಿಸ್ತಾನ ಗಂಭೀರವಾಗಿ ಪರಿಗಣಿಸಲಿಲ್ಲ, ತನ್ನ ಹೇಯ ಕೃತ್ಯಗಳನ್ನು ಮುಂದುವರಿಸಿತು. ಪಹಲ್ಗಾಮ್ ನಲ್ಲಿ ಅಮಾಯಕ ಮತ್ತು ನಿಶಸ್ತ್ರ ಹಿಂದೂ ಪ್ರವಾಸಿಗರ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರು (Pakistan sponsored terrorists) ದಾಳಿ ಮಾಡಿದಾಗ ಭಾರತದ ಸಹನೆ ಕಟ್ಟೆಯೊಡೆದಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೇನಾ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಮೇಲೆ ಭಾರತ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸುವುದು ಖಚಿತವಾಗಿತ್ತು. ಅದರ ಫಲಿತಾಂಶವೇ ಇಲ್ಲಿ ಕಾಣುತ್ತಿರುವ ದೃಶ್ಯ, ಪಾಕಿಸ್ತಾನದ ಬಹಾವಲ್ಪುರ ನಗರದಲ್ಲಿದ್ದ ಉಗ್ರರ ಸೆಮಿನಾರ್ ಹಾಲ್ ಅನ್ನು ಭಾರತದ ಕ್ಷಿಪಣಿಗಳು ಅಕ್ಷರಶಃ ಧ್ವಂಸ ಮಾಡಿವೆ.

ಇದನ್ನೂ ಓದಿ:  Operation Sindoor: ಉಗ್ರರ ನೆಲೆಗಳ ಮೇಲೆ ಭಾರತ ದಾಳಿ, ಬೆಳಗಾವಿಯಲ್ಲಿ ಸಂಭ್ರಮ ಆಚರಿಸಿದ ಮಾಜಿ ಸೈನಿಕರು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ