ಮೊಘಲ್ ಕಾಲದ ಸನ್​ಗ್ಲಾಸಸ್​ ಧರಿಸಿ ‘ಕಸ್ಟಮ್-ಡಿಸೈಸ್ಡ್’ ಎಂದ ಫಾರೆಲ್ ವಿಲಿಯಮ್ಸ್ ಮತ್ತು ಟಿಫಾನಿಗೆ ಭಾರತೀಯರಿಂದ ಮಂಗಳಾರತಿ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 26, 2022 | 5:26 PM

ಭಾರತದ ಫ್ಯಾಶನ್ ಜಗತ್ತಿನ ಕಾವಲುಗಾರ ಎಂದು ಹೇಳಲಾಗುವ ಡಯೆಟ್ ಸಬ್ಯಾ ತಮ್ಮ ಕಾಮೆಂಟ್ ವಿಭಾಗದಲ್ಲಿ ಹೀಗೆ ಬರೆದಿದ್ದಾರೆ: ‘ಮೊಘಲ್ ಸಾಮ್ರಾಜ್ಯದ ಆಭರಣವನ್ನು ನಕಲು ಮಾಡುವಷ್ಟು ಭಂಡ ಧೈರ್ಯವನ್ನು ಟಿಫಾನೀ ಮತ್ತು ಫಾರೆಲ್ ವಿಲಿಯಮ್ಸ್ ತೋರಿದ್ದಾರೆ. ಇದು ಇದು ಕಸ್ಟಮ್-ಡಿಸೈನ್ಡ್ ಅಥವಾ ಕಸ್ಟಮ್-ಕಾಪೀಡ್?’

ಅಮೆರಿಕಾದ 48-ವರ್ಷ ವಯಸ್ಸಿನ ಱಪರ್ (rapper), ಗೀತ ರಚನೆಕಾರ, ಉದ್ಯಮಿ, ಮತ್ತು ಹಿಪ್-ಹಾಪ್ ಸಂಗೀತ ಜನಪ್ರಿಯಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಫಾರೆಲ್ ವಿಲಿಯಮ್ಸ್ (Pharrell Williams) ಭಾರತೀಯರಿಂದ ಉಗುಸಿಕೊಳ್ಳುತ್ತಿದ್ದಾರೆ. ಕಾರಣ ನಿಮಗೆ ವಿಡಿಯೋನಲ್ಲಿ ಕಾಣುತ್ತಿದೆ. ಅವರು ತೊಟ್ಟಿರುವ ಸನ್ ಗ್ಲಾಸ್ ನೋಡಿ. ಟಿಫಾನಿ ಅಂಡ್ ಕಂಪನಿ (Tiffany and Co.) ಸನ್ ಗ್ಲಾಸಸ್ ವಿನ್ಯಾಸಗೊಳಿಸಿದೆ. ಅದನ್ನು ಯಾರಾದರೂ ವಿನ್ಯಾಸಗೊಳಿಸಲಿ ಪ್ರಶ್ನೆ ಅದಲ್ಲ. ಭಾರತೀಯರಿಗೆ ಕೋಪ ಬಂದಿರೋದು ಯಾಕೆ ಗೊತ್ತಾ? ಕಿವಿಯೋಲೆಯ ಹಾಗೆ ಕಾಣುವ ತಂಪು-ಕನ್ನಡಕ ಮೊಘಲ್ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಬಳಸಲಾಗುತ್ತಿದ್ದ ತಂಪು ಕನ್ನಡಕದ ಯಥಾವತ್ ನಕಲು ಆಗಿದೆ! ಮೊಘಲರ ಜಮಾನಾದಲ್ಲಿ ತೊಡುತ್ತಿದ್ದ ಕನ್ನಡಕದ ವಿನ್ಯಾಸವನ್ನೇ ಟಿಫಾನಿ ಅಂಡ್ ಕಂಪನಿ ನಕಲು ಮಾಡಿ ಅದನ್ನು ಕಸ್ಟಮ್-ಡಿಸೈನ್ಡ್ ಅಂತ ಹೇಳಿಕೊಳ್ಳುತ್ತಿದೆ. ಇದು ಕಸ್ಟಮ್-ಡಿಸೈನ್ಡ್ ಅಲ್ಲ ಕಸ್ಟಮ್-ಕಾಪೀಡ್ ಅಂತ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಫಾರೆಲ್ ವಿಲಿಯಮ್ಸ್ ಮತ್ತು ಟಿಫಾನಿ ಅಂಡ್ ಕಂಪನಿಯನ್ನು ಉಗಿಯುತ್ತಿದ್ದಾರೆ.

ಟಿಫಾನಿಯ ಅಧಿಕೃತ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಆಗಿರುವ ಫಾರೆಲ್ ವಿಲಿಯಮ್ಸ್ ತೊಟ್ಟಿರುವ ಸನ್ ಗ್ಲಾಸಸ್ 18-ಕ್ಯಾರಟ್ ಚಿನ್ನ, 61 ವಜ್ರಗಳು ಮತ್ತು 2 ಎಮೆರಾಲ್ಡ್-ಕಟ್ ಎಮೆರಾಲ್ಡ್​ಗಳಿಂದ ಮಾಡಲಾಗಿದೆ. ಇದರ ತಯಾರಿಕೆಯಲ್ಲಿ ಬಳಸಲಾಗಿರುವ ವಜ್ರಗಳು 25 ಕ್ಯಾರಟ್ ನವು ಎಂದು ಹೇಳಲಾಗಿದೆ.

ಭಾರತದ ಫ್ಯಾಶನ್ ಜಗತ್ತಿನ ಕಾವಲುಗಾರ ಎಂದು ಹೇಳಲಾಗುವ ಡಯೆಟ್ ಸಬ್ಯಾ ತಮ್ಮ ಕಾಮೆಂಟ್ ವಿಭಾಗದಲ್ಲಿ ಹೀಗೆ ಬರೆದಿದ್ದಾರೆ: ‘ಮೊಘಲ್ ಸಾಮ್ರಾಜ್ಯದ ಆಭರಣವನ್ನು ನಕಲು ಮಾಡುವಷ್ಟು ಭಂಡ ಧೈರ್ಯವನ್ನು ಟಿಫಾನೀ ಮತ್ತು ಫಾರೆಲ್ ವಿಲಿಯಮ್ಸ್ ತೋರಿದ್ದಾರೆ. ಇದು ಇದು ಕಸ್ಟಮ್-ಡಿಸೈನ್ಡ್ ಅಥವಾ ಕಸ್ಟಮ್-ಕಾಪೀಡ್?’

ಟಿಫಾನೀಯಿಂದಾಗಲೀ, ಫಾರೆಲ್​ನಿಂದಾಗಲೀ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಇದನ್ನೂ ಓದಿ:   Hardik Pandya: ಅಜ್ಜಿ ಜತೆ ಶ್ರೀವಲ್ಲಿ ಹಾಡಿಗೆ ಮಸ್ತ್ ಹೆಜ್ಜೆ ಹಾಕಿದ ಹಾರ್ದಿಕ್ ಪಾಂಡ್ಯ; ಫ್ಯಾನ್ಸ್ ಮನಗೆದ್ದ ವಿಡಿಯೋ ಇಲ್ಲಿದೆ