AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ದೋಸೆ ತಯಾರಿಸಿ ರಾಷ್ಟ್ರಾಭಿಮವನ್ನು ಮೆರೆದರು ಜೇವರ್ಗಿಯಲ್ಲಿ ಹೋಟೆಲ್ ನಡೆಸುವ ರವಿಸಿಂಗ್!

ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ದೋಸೆ ತಯಾರಿಸಿ ರಾಷ್ಟ್ರಾಭಿಮವನ್ನು ಮೆರೆದರು ಜೇವರ್ಗಿಯಲ್ಲಿ ಹೋಟೆಲ್ ನಡೆಸುವ ರವಿಸಿಂಗ್!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jan 26, 2022 | 4:01 PM

Share

ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಭಾರತೀಯರಿಗೆ ಅತಿದೊಡ್ಡ ಹಬ್ಬಗಳು. ಈ ಹಬ್ಬಗಳನ್ನು ಪ್ರತಿಯೊಬ್ಬ ಭಾರತೀಯ ಆಚರಿಸುತ್ತಾನೆ. ಈ ಹಬ್ಬಗಳ ಆಚರಣೆಗೆ ಧರ್ಮ, ಜಾತಿ ಯಾವುದೂ ಆಡ್ಡಿಯಾಗುವುದಿಲ್ಲ.

ಗಣರಾಜ್ಯೋತ್ಸವ ದಿನವನ್ನು (Republic Day) ಭಾರತದಲ್ಲಿಂದು ಸಡಗರ, ಸಂಭ್ರಮ ಮತ್ತು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಆಚರಿಸುವ ಉದ್ದೇಶ ಒಂದೇ ಆದರೂ ವಿಧಾನಗಳು ಬೇರೆ ಬೇರೆಯಾಗಿರುತ್ತವೆ ಅನ್ನೋದು ಸುಳ್ಳಲ್ಲ. ಈ ದಿನದಂದು ಭಾರತದೆಲ್ಲೆಡೆ ಸಾಂಸ್ಕೃತಿಕ ಚಟುವಟಿಕೆಗಳನ್ನು (cultural activities) ಹಮ್ಮಿಕೊಳ್ಳಲಾಗುತ್ತದೆ. ಆದರೆ ಪ್ರತಿ ಚಟುವಟಿಕೆಯಲ್ಲೂ ರಾಷ್ಟ್ರಪ್ರೇಮ (patriotism), ರಾಷ್ಟ್ರಾಭಿಮಾನದ ಕುರುಹು ಕಾಣುತ್ತದೆ. ನಮಗೆ ಕಲಬುರಗಿ ಜಿಲ್ಲೆಯ ಜೇವರ್ಗಿ (Jewargi) ಪಟ್ಟಣದಿಂದ ಈ ವಿಡಿಯೋ ಲಭ್ಯವಾಗಿದೆ. ಇದೊಂದು ಬೀದಿಬದಿಯ ಹೋಟೆಲ್. ಸಾಮಾನ್ಯವಾಗಿ ಈ ಭಾಗದಲ್ಲಿ ಇಂಥ ಹೋಟೆಲ್ಗಳನ್ನು ತಟ್ಟಿ ಹೋಟೆಲ್ ಅಂತ ಕರೆಯುತ್ತಾರೆ. ಹೋಟೆಲ್ ಮಾಲೀಕ ಇವರೇ, ದೋಸೆ ಹಾಕುತ್ತಿರುವ ರವಿಸಿಂಗ್. ತಮ್ಮ ರಾಷ್ಟ್ರಾಭಿಮಾನವನ್ನು ರವಿಸಿಂಗ್ ದೋಸೆ ಹಾಕುವುದರಲ್ಲಿ ತೋರುತ್ತಿದ್ದಾರೆ!

ನಿಮಗೆ ಕಾಣುತ್ತಿರುವ ಹಾಗೆ ಅವರು ನಮ್ಮ ರಾಷ್ಟ್ರಧ್ವಜ ಹೊಂದಿರುವ ಮೂರು ಬಣ್ಣ-ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಲ್ಲಿ ದೋಸೆ ಸಿದ್ಧಪಡಿಸಿ ತಮ್ಮ ಗ್ರಾಹಕರಿಗೆ ನೀಡುತ್ತಿದ್ದಾರೆ. ಗ್ರಾಹಕರು ಸಹ ಅಷ್ಟೇ ಅಭಿಮಾನದಿಂದ ತ್ರಿವರ್ಣದ ದೋಸೆಗಳನ್ನು ಇಷ್ಟಪಟ್ಟು ತಿನ್ನುತ್ತಿದ್ದಾರೆ.

ಅದಕ್ಕೇ ನಾವು ಹೇಳಿದ್ದು, ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಭಾರತೀಯರಿಗೆ ಅತಿದೊಡ್ಡ ಹಬ್ಬಗಳು. ಈ ಹಬ್ಬಗಳನ್ನು ಪ್ರತಿಯೊಬ್ಬ ಭಾರತೀಯ ಆಚರಿಸುತ್ತಾನೆ. ಈ ಹಬ್ಬಗಳ ಆಚರಣೆಗೆ ಧರ್ಮ, ಜಾತಿ ಯಾವುದೂ ಆಡ್ಡಿಯಾಗುವುದಿಲ್ಲ.

ಎಲ್ಲ ಸಮುದಾಯಗಳು ಒಟ್ಟಾಗಿ, ಶಾಲಾ-ಕಾಲೇಜುಗಳಲ್ಲಿ, ಕೋರ್ಟು-ಕಚೇರಿಗಳಲ್ಲಿ, ಕ್ರೀಡಾಂಗಣಗಳಲ್ಲಿ, ಪೌರಸೇವೆ ಒದಗಿಸುವ ಕಚೇರಿಗಳಲ್ಲಿ ಸಡಗರದಿಂದ ಆಚರಿಸಲಾಗುತ್ತೆ. ವೈವಿಧ್ಯತೆಯಲ್ಲಿ ಏಕತೆ ಅನ್ನೋದು ನಮ್ಮ ದೇಶಕ್ಕೆ ಮಾತ್ರ ಅನ್ವಯಿಸುವ ಉಕ್ತಿಯಾಗಿದೆ.

ಭಾರತ್ ಮಾತಾ ಕೀ ಜೈ, ಜೈ ಹಿಂದ್!!

ಇದನ್ನೂ ಓದಿ: ಮೊದಲ ಬಾರಿಗೆ ಸಮೋಸಾ ತಿಂದ ಇಟಾಲಿಯನ್ ವ್ಯಕ್ತಿ; ಆತನ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ..? ಇಲ್ಲಿದೆ ವೈರಲ್ ವಿಡಿಯೋ