AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ, 11,718 ಕೋಟಿ ರೂ.ಮೀಸಲು

ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ, 11,718 ಕೋಟಿ ರೂ.ಮೀಸಲು

ಅಕ್ಷಯ್​ ಪಲ್ಲಮಜಲು​​
|

Updated on: Dec 12, 2025 | 5:21 PM

Share

ಕೇಂದ್ರ ಸಚಿವ ಸಂಪುಟವು 2027ರ ಮೊದಲ ಡಿಜಿಟಲ್ ಜನಗಣತಿಗಾಗಿ 11,718 ಕೋಟಿ ರೂ. ಅನುಮೋದಿಸಿದೆ. ಈ ಜನಗಣತಿಯು ಎರಡು ಹಂತಗಳಲ್ಲಿ ನಡೆಯಲಿದೆ. ಮನೆ ಪಟ್ಟಿ ಮತ್ತು ವಸತಿ ಗಣತಿ 2026ರಲ್ಲಿ, ಜನಸಂಖ್ಯಾ ಗಣತಿ 2027ರಲ್ಲಿ ಜರುಗಲಿದೆ. ದತ್ತಾಂಶ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, 3 ಲಕ್ಷ ಉದ್ಯೋಗಿಗಳನ್ನು ನೇಮಿಸಲಾಗುವುದು ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ದೆಹಲಿ, ಡಿ.12: ಕೇಂದ್ರ ಸಚಿವ ಸಂಪುಟವು 2027ರ ಜನಗಣತಿಗಾಗಿ 11,718 ಕೋಟಿ ರೂ, ಬಜೆಟ್​​ನ್ನು ಅನುಮೋದಿಸಿದೆ. ಇದೇ ಮೊದಲ ಬಾರಿಗೆ ರಾಷ್ಟ್ರವ್ಯಾಪಿ ಡಿಜಿಟಲ್ ಜನಗಣತಿಯನ್ನು ನಡೆಸಲಾಗುವುದು. ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಮತ್ತು ದತ್ತಾಂಶ ರಕ್ಷಣೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಇದಕ್ಕಾಗಿ ಮೂರು ಲಕ್ಷ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು. ಮೊದಲ ಹಂತದಲ್ಲಿ, ಮನೆ ಪಟ್ಟಿ ಮತ್ತು ವಸತಿ ಗಣತಿ ನಡೆಯಲಿದೆ, ಇದನ್ನು ಏಪ್ರಿಲ್ ನಿಂದ ಸೆಪ್ಟೆಂಬರ್ 2026 ರವರೆಗೆ ನಡೆಸಲಾಗುವುದು, ಎರಡನೇ ಹಂತದಲ್ಲಿ, ಜನಸಂಖ್ಯಾ ಗಣತಿ ನಡೆಯಲಿದೆ, ಇದನ್ನು ಫೆಬ್ರವರಿ 2027 ರಿಂದ ನಡೆಸಲಾಗುವುದು ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ