Vande Bharat Sleeper Train: ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ
India's First Vande Bharat Sleeper Train launch: ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ಕೋಚ್ ರೈಲನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಈ ರೈಲು ಹೌರಾ ಮತ್ತು ಗುವಾಹಟಿ ನಡುವೆ ಸಂಚರಿಸಲಿದ್ದು, ರಾತ್ರಿ ಪ್ರಯಾಣದ ವಿಶಿಷ್ಟ ಅನುಭವ ನೀಡಲಿದೆ.
ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ಕೋಚ್ ರೈಲಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಚಾಲನೆ ನೀಡುತ್ತಿದ್ದಾರೆ. ಈ ರೈಲು ಹೌರಾ ಮತ್ತು ಗುವಾಹಟಿ ನಡುವೆ ಸಂಚರಿಸಲಿದೆ. ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ರಾತ್ರಿ ಪ್ರಯಾಣಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸಂಪೂರ್ಣ ಹವಾನಿಯಂತ್ರಿತ ರೈಲು ಆಗಿದೆ. ಅಸ್ತಿತ್ವದಲ್ಲಿರುವ ವಂದೇ ಭಾರತ್ ಚೇರ್ ಕಾರ್ ಸೇವೆಗಳಿಗಿಂತ ಭಿನ್ನವಾಗಿ, ಈ ಆವೃತ್ತಿಯು ದೀರ್ಘ ಪ್ರಯಾಣದ ಸಮಯಕ್ಕೆ ಅಗತ್ಯವಾದ ಸೌಕರ್ಯವನ್ನು ಕೇಂದ್ರೀಕರಿಸುತ್ತದೆ. ಮೆತ್ತನೆಯ ಬರ್ತ್‌ಗಳು, ಸೌಂಡ್ ಪ್ರೂಫ್ ಬರ್ತ್ನೊಂದಿಗೆ 11 ಎಸಿ 3-ಟೈರ್ ಕೋಚ್‌ಗಳು, 4 ಎಸಿ 2-ಟೈರ್ ಕೋಚ್‌ಗಳು, 1 ಎಸಿ 1ಟೈರ್ ಕೋಚ್ ಅನ್ನು ಈ ರೈಲು ಒಳಗೊಂಡಿರಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
