ಬೆಸ್ಕಾಂ ಬೇಜವಾಬ್ದಾರಿಯಿಂದ ಬೆಂಗಳೂರು ರಾಮಮೂರ್ತಿನಗರದ ನಿವಾಸಿ ಪದೇಪದೆ ತೊಂದರೆ ಅನುಭವಿಸುತ್ತಿದ್ದಾರೆ

ಬೆಸ್ಕಾ ಒಂದು ಸೇವೆ ಒದಗಿಸುವ ಸಂಸ್ಥೆಯಾಗಿದೆ. ತಾನು ಒದಗಿಸುವ ಸೇವೆಗೆ ಶುಲ್ಕವನ್ನೂ ಪಡೆಯುತ್ತದೆ. ಹಾಗಾಗಿ ಬಳಕೆದಾರರ ದೂರುಗಳಿಗೆ ಸ್ಪಂದಿಸಬೇಕು ಮತ್ತು ಕೂಡಲೇ ಪರಿಹಾರ ಒದಗಿಸಬೇಕು.

ಪದೇಪದೆ ವಿದ್ಯುತ್ ಸರಬರಾಜು ನಿಂತು ಹೋಗೋದು, ವೋಲ್ಟೇಜ್ ಹೆಚ್ಚು ಕಡಿಮೆ ಆಗೋದು ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಆಗುತ್ತದೆ. ಆದರೆ ಈ ಸಮಸ್ಯೆ ಈಗ ನಗರ ಪ್ರದೇಶಗಳಿಗೂ ವ್ಯಾಪಿಸಿದೆ. ಇದಕ್ಕೆ ಸಾಕ್ಷಿಯೆಂದರೆ ಬೆಂಗಳೂರು ರಾಮಮೂರ್ತಿನಗರ ಬಡಾವಣೆಯೊಂದರ ನಿವಾಸಿಗಳು ತಮ್ಮ ಮನೆಯಲ್ಲಿದ್ದ ಇಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಹೊರಗಡೆ ತಂದು ಹೀಗೆ ಗುಡ್ಡೆ ಹಾಕಿರೋದು. ಆಫ್ಕೋರ್ಸ್ ಇವೆಲ್ಲ ಹಾಳಾಗಿವೆ, ಏಕಾಏಕಿ ವೋಲ್ಟೇಜ್ ಜಾಸ್ತಿಯಾಗಿದ್ದರಿಂದ ಫ್ರಿಜ್, ಟಿವಿ, ಫ್ಯಾನ್, ಆಡಿಯೋ ಸಿಸ್ಟಂ ಮೊದಲಾದವೆಲ್ಲ ಸುಟ್ಟು ಹೋಗಿವೆ.

ಈ ಕಾಲೋನಿಯ ಜನರಿಗೆ ಇದು ಹೊಸ ಅನುಭವೇನೂ ಅಲ್ಲ. ಟಿವಿ, ಪ್ರಿಜ್ಗಳು ಹಾಳಾಗುತ್ತಿರೋದು ಇದು ಮೂರನೇ ಬಾರಿ ಎಂದು ಅವರು ಹೇಳುತ್ತಾರೆ. ಪ್ರತಿಬಾರಿ ಹೀಗಾದಾಗಲೆಲ್ಲ ಬೆಸ್ಕಾಂನವರ ಗಮನಕ್ಕೆ ತಂದಿದ್ದಾರೆ ಮತ್ತು ಸಬ್-ಡಿವಿಜನ್ ಕಚೇರಿಗೆ ಲಿಖಿತ ದೂರನ್ನೂ ಸಲ್ಲಿಸಿದ್ದಾರೆ. ಬೆಸ್ಕಾಂ ಸಿಬ್ಬಂದಿ ಪ್ರತಿಸಲ ಒಂದೇ ಮಾತು ಹೇಳುತ್ತಾರಂತೆ-ವೋಲ್ಟೇಜ್ ಹೆಚ್ಚು ಕಡಿಮೆಯಾದರೆ ನಾವೇನೂ ಮಾಡಲಾಗದು.

ಇದು ಅವರ ಪ್ರತಿಕ್ರಿಯೆಯಾಗಬಾರದು. ಯಾಕೆಂದರೆ ಬೆಸ್ಕಾ ಒಂದು ಸೇವೆ ಒದಗಿಸುವ ಸಂಸ್ಥೆಯಾಗಿದೆ. ತಾನು ಒದಗಿಸುವ ಸೇವೆಗೆ ಶುಲ್ಕವನ್ನೂ ಪಡೆಯುತ್ತದೆ. ಹಾಗಾಗಿ ಬಳಕೆದಾರರ ದೂರುಗಳಿಗೆ ಸ್ಪಂದಿಸಬೇಕು ಮತ್ತು ಕೂಡಲೇ ಪರಿಹಾರ ಒದಗಿಸಬೇಕು. ವೋಲ್ಟೇಜ್ ಜಾಸ್ತಿಯಾದರೆ ನಾವೇನು ಮಾಡಲಾಗುತ್ತೆ, ಅನ್ನೋದು ಹಾರಿಕೆ ಮತ್ತು ಬೇಜವಾಬ್ದಾರಿತನದ ಮಾತು.

ಇಲ್ಲಿರುವ ಕುಟುಂಬಗಳು ಶ್ರೀಮಂತವಲ್ಲ. ಎಲ್ಲರೂ ಕಂತುಗಳಲ್ಲಿ ಹಣ ಕಟ್ಟಿ ಸಾಮಾನುಗಳನ್ನು ತೆಗೆದುಕೊಂಡಿದ್ದಾರೆ. ಕೆಲವರು ಈಗಲೂ ಈ ಎಮ್ ಐಗಳನ್ನು ಕಟ್ಟುತ್ತಿದ್ದಾರೆ. ಅವರಿಗಾಗಿರುವ ಹಾನಿಯನ್ನು ಯಾರು ಭರಿಸಬೇಕು?

ಇದನ್ನೂ ಓದಿ:  ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್​ಗೆ ದೃಷ್ಟಿ ತೆಗೆದು ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ ಜೋಗತಿ ಮಂಜಮ್ಮ; ವಿಡಿಯೋ ಫುಲ್ ವೈರಲ್

Click on your DTH Provider to Add TV9 Kannada