ಇಂಡಿಗೋ ವಿಮಾನ ರದ್ದಾಗಿದ್ದರಿಂದ ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

Updated By: Ganapathi Sharma

Updated on: Dec 05, 2025 | 12:04 PM

ಇಂಡಿಗೋ ವಿಮಾನ ರದ್ದಾದ ಕಾರಣ ನವೆಂಬರ್ 23ರಂದು ವಿವಾಹವಾದ ವಧು-ವರರು ಭುವನೇಶ್ವರದಿಂದ ಹುಬ್ಬಳ್ಳಿಗೆ ಬರಲಾಗದೆ ಪರದಾಡಿದರು. ನಿಗದಿಯಾಗಿದ್ದ ಆರತಕ್ಷತೆಗೆ ಬರಲಾಗದಿದ್ದಾಗ, ಕುಟುಂಬದವರು ಅನಿವಾರ್ಯವಾಗಿ ಆನ್ಲೈನ್ ಮೂಲಕ ಆರತಕ್ಷತೆ ನಡೆಸಿದರು. ಈ ಬಗ್ಗೆ ವಧುವಿನ ತಂದೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ವಧುವಿನ ತಂದೆ ಹೇಳಿದ್ದೇನು? ವಿಡಿಯೋ ನೋಡಿ.

ಹುಬ್ಬಳ್ಳಿ, ಡಿಸೆಂಬರ್ 5: ಇಂಡಿಗೋ ವಿಮಾನಗಳಲ್ಲಿ ತಾಂತ್ರಿಕ ತೊಂದರೆ ಹಾಗೂ ಪೈಲಟ್‌ಗಳ ಕೊರತೆಯಿಂದ ದೇಶದಾದ್ಯಂತ ಹಲವು ವಿಮಾನಗಳು ರದ್ದಾಗುತ್ತಿವೆ. ಇದೇ ರೀತಿ ಭುವನೇಶ್ವರದಿಂದ ಹುಬ್ಬಳ್ಳಿಗೆ ಪ್ರಯಾಣಿಸಬೇಕಿದ್ದ ವಧು-ವರರು ವಿಮಾನ ರದ್ದಾದ ಕಾರಣ ಆರತಕ್ಷತೆಗೆ ಬರಲಾಗದೆ ಪರದಾಡುವಂತಾಯಿತು. ಕೊನೆಗೆ ವಧುವಿನ ತಂದೆ-ತಾಯಿಯೇ ನವ ವಿವಾಹಿತರು ಕೂರಬೇಕಿದ್ದ ಕುರ್ಚಿಯಲ್ಲಿ ಕುಳಿತು ಬಂಧುಗಳ ಶುಭಹಾರೈಕೆಗಳನ್ನು ಸ್ವೀಕರಿಸಿದರು. ಅಲ್ಲದೆ, ವಧು ವರರು ಆನ್​ಲೈನ್ ಮೂಲಕ ಭಾಗವಹಿಸಿದರು.

ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ಬುಧವಾರ ವಧು ಮೇಧಾ ಕ್ಷೀರಸಾಗರ ಹಾಗೂ ವರ ಸಂಗಮ ದಾಸ್ ಅವರ ಆರತಕ್ಷತೆ ನಡೆದಿದ್ದು, ವಧು ವರರ ಕುರ್ಚಿಯಲ್ಲಿ ಕುಳಿತ ಬಗ್ಗೆ ವಧುವಿನ ತಂದೆ ಮಾತನಾಡಿದ್ದಾರೆ. ಅವರು ಏನಂದರು ಎಂಬುದು ಇಲ್ಲಿದೆ.

ವಿವರಗಳಿಗೆ ಓದಿ: ವಧು ವರರ ಕುರ್ಚಿಯಲ್ಲಿ ಕುಳಿತ ತಂದೆ-ತಾಯಿ! ಮಧುಮಕ್ಕಳಿಲ್ಲದೇ ಹುಬ್ಬಳ್ಳಿಯಲ್ಲಿ ನಡೆಯಿತು ಆರತಕ್ಷತೆ: ಇಂಡಿಗೋ ವಿಮಾನ ರದ್ದು ಕಾರಣ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ