ಇಂಡೋನೇಷ್ಯಾಗೆ 2060ರ ಹೊತ್ತಿಗೆ ಪರಿಸರ-ಮಾಲಿನ್ಯ ಮುಕ್ತ ರಾಷ್ಟ್ರವೆನಿಸಿಕೊಳ್ಳುವ ಗುರಿ
ಇಂಡೋನೇಷ್ಯಾದ ಸರ್ಕಾರ ತಿಳಿಸಿರುವ ಹಾಗೆ 2060ರ ವೇಳೆಗೆ ಕಲ್ಲಿದ್ದಿಲು, ಅನಿಲಗಳ ಮೂಲಕ ನಡೆಯುವ ಎಲ್ಲ ಉದ್ದಿಮಗಳನ್ನು ಮುಚ್ಚಲಾಗುವುದು ಮತ್ತು ಮರುಬಳಕೆ ಪದ್ಧತಿ ಮೂಲಕ ತಯಾರಾಗುವ ವಸ್ತಗಳಿಗೆ ಆದ್ಯತೆ ನೀಡಲಾಗವುದು.
ಇಡೀ ಒಂದು ದೇಶವನ್ನೇ ಪರಿಸರ-ಮಾಲಿನ್ಯ ಮುಕ್ತ ದೇಶವನ್ನಾಗಿ ಮಾಡುವುದು ಸಾಧ್ಯವೇ? ವಿಶ್ವದ ಎಲ್ಲ ದೇಶಗಳಲ್ಲಿ ಪ್ರತಿವರ್ಷ ನೂರಾರು ಸಂಖ್ಯೆಯಲ್ಲಿ ಹೊಸ ಉದ್ದಿಮೆಗಳು ಸ್ಥಾಪಿತಗೊಳ್ಳುತ್ತಿರುವ ಈ ಯುಗದಲ್ಲಿ ಅಂಥದೊಂದು ಸಾಧನೆಯ ಬಗ್ಗೆ ಯೋಚಿಸಲೂ ಆಗದು ಅಂತ ನೀವಂದುಕೊಳ್ಳುತ್ತಿರಬಹುದು. ಆದರೆ ಸುಮಾರು 28 ಕೋಟಿ ಜನಸಂಖ್ಯೆ ಹೊಂದಿರುವ ಇಂಡೋನೇಶ್ಯಾಗೆ 2060 ರ ಹೊತ್ತಿಗೆ ಆ ಪಟ್ಟವನ್ನು ಮುಡಿಗೇರಿಸಿಕೊಳ್ಳುವ ಅವಕಾಶವಿದೆ.
ಅಂತರರಾಷ್ಟ್ರೀಯ ನೆರವಿನೊಂದಿಗೆ 2030 ರ ವೇಳೆಗೆ ಇಂಡೋನೇಷ್ಯಾ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು 41% ರಷ್ಟು ಕಡಿಮೆಗೊಳಿಸುವ ಗುರಿಯನ್ನು ಕಾಯ್ದುಕೊಂಡಿದೆ, ತನ್ನ ಹೊಂದಾಣಿಕೆಯ ಕ್ರಮಗಳನ್ನು ನವೀಕರಿಸಿದೆ ಮತ್ತು ಕಳೆದ ವಾರ ವಿಶ್ವಸಂಸ್ಥೆಗೆ ಸಲ್ಲಿಸಿರುವ ದಾಖಲೆಗಳಲ್ಲಿಕಡಿಮೆ ಇಂಗಾಲದ ಅಭಿವೃದ್ಧಿಗೆ ಹೊಸ ಮತ್ತು ದೀರ್ಘಕಾಲೀನ ಕಾರ್ಯತಂತ್ರವನ್ನೂ ಸೇರಿಸಿದೆ.
ಇಂಡೋನೇಷ್ಯಾದ ಸರ್ಕಾರ ತಿಳಿಸಿರುವ ಹಾಗೆ 2060ರ ವೇಳೆಗೆ ಕಲ್ಲಿದ್ದಿಲು, ಅನಿಲಗಳ ಮೂಲಕ ನಡೆಯುವ ಎಲ್ಲ ಉದ್ದಿಮಗಳನ್ನು ಮುಚ್ಚಲಾಗುವುದು ಮತ್ತು ಮರುಬಳಕೆ ಪದ್ಧತಿ ಮೂಲಕ ತಯಾರಾಗುವ ವಸ್ತಗಳಿಗೆ ಆದ್ಯತೆ ನೀಡಲಾಗವುದು. ಒಂದು ಹೊಸ ಬಗೆಯ ಹಸಿರು ಕ್ರಾಂತಿ ಮುಂದಿನ ನಾಲ್ಕು ದಶಕಗಳಲ್ಲಿ ಇಲ್ಲಿ ಆಗಲಿದೆ. ಇಂಡೋನೇಷ್ಯಾ ಸಂಕಲ್ಪ ಸಾಕಾರಗೊಂಡರೆ ವಿಶ್ವದ ಮೊಟ್ಟಮೊದಲ ಪರಿಸರ-ಮಾಲಿನ್ಯ ಮುಕ್ತ ದೇಶ ಎನಿಸಿಕೊಳ್ಳಲಿದೆ.