ನಟ ಜ್ಯೂನಿಯರ್ ಎನ್​ಟಿಆರ್ ಮತ್ತು ನಿರ್ದೇಶಕ ರಾಜಮೌಳಿ ಆರ್​ ಆರ್​ ಆರ್ ಸಿನಿಮಾ ಸೆಟ್​ನಲ್ಲಿ ಹೊತ್ತುಗಳೆಯಲು ವಾಲಿಬಾಲ್ ಆಡಿದರು!

ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಜ್ಯೂನಿಯರ್ ಎನ್​ ಟಿ ಆರ್ ಮತ್ತು ರಾಜಾಮೌಳಿ ಅವರು ಸಿನಿಮಾದ ಸೆಟ್​ನಲ್ಲಿ ವಾಲಿಬಾಲ್ ಆಡಿರುವ ವಿಡಿಯೋ ವೈರಲ್ ಆಗಿದೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ವಾಲಿಬಾಲ್ ಆಡಿದ ಎರಡು ತಂಡಗಳಲ್ಲಿ ಒಂದಕ್ಕೆ ಎನ್​ ಟಿ ಆರ್ ನಾಯಕರಾಗಿದ್ದರೆ ಮತ್ತೊಂದಕ್ಕೆ ರಾಜಾಮೌಳಿ.

ಸಿನಿಮಾ ನಟ-ನಟಿಯರು, ನಿರ್ಮಾಪಕ-ನಿರ್ದೇಶಕರು ಮತ್ತು ಚಿತ್ರತಂಡವೊಂದಕ್ಕೆ ಸಂಬಂಧಿಸಿದ ಇತರ ಸಿಬ್ಬಂದಿ ಚಿತ್ರೀಕರಣ ಇಲ್ಲದ ಸಮಯದಲ್ಲಿ ಹೊತ್ತು ಕಳೆಯಲು ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ವಾಡಿಕೆ. ಕೆಲವರು ಪುಸ್ತಕಗಳನ್ನು ಓದಿದರೆ ಬೇರೆ ಕೆಲವರು ಒಳಾಂಗಣ ಇಲ್ಲವೇ ಹೊರಾಂಗಣ ಕ್ರೀಡೆಗಳನ್ನು ಆಡಿ ಸಮಯ ಕೊಲ್ಲುತ್ತಾರೆ. ಭಾರತದ ಸುಪ್ರಸಿದ್ಧ ನಿರ್ದೇಶಕ ಎಸ್ ಎಸ್​ ರಾಜಮೌಳಿ ಅವರ ಭಾರಿ ಬಜೆಟ್ ಮತ್ತು ಅದ್ದ್ದೂರಿ ತಾರಾಗಣದ ಆರ್​ಆರ್​ಆರ್ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಈ ಸಿನಿಮಾದ ಯೂನಿಟ್​ ಈಗ ಹೈದರಾಬಾದಿನ ಖ್ಯಾತ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್​ನಲ್ಲಿ ತೊಡಗಿದೆ.

ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಜ್ಯೂನಿಯರ್ ಎನ್​ ಟಿ ಆರ್ ಮತ್ತು ರಾಜಾಮೌಳಿ ಅವರು ಸಿನಿಮಾದ ಸೆಟ್​ನಲ್ಲಿ ವಾಲಿಬಾಲ್ ಆಡಿರುವ ವಿಡಿಯೋ ವೈರಲ್ ಆಗಿದೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ವಾಲಿಬಾಲ್ ಆಡಿದ ಎರಡು ತಂಡಗಳಲ್ಲಿ ಒಂದಕ್ಕೆ ಎನ್​ ಟಿ ಆರ್ ನಾಯಕರಾಗಿದ್ದರೆ ಮತ್ತೊಂದಕ್ಕೆ ರಾಜಾಮೌಳಿ. ಈ ಪಂದ್ಯವನ್ನು ಯಾರು ಗೆದ್ದರೆಂದು ವಿಡಿಯೋ ಮಾಡಿದವರು ಹೇಳಿಲ್ಲ, ಆದರೆ ಯೂನಿಟ್​ನವರು ಪಂದ್ಯವನ್ನು ಸಖತ್ ಎಂಜಾಯ್ ಮಾಡಿದರಂತೆ.

ಅಂದಹಾಗೆ ರೂ. 400 ಕೋಟಿ ಬಜೆಟ್ ಆರ್​ಆರ್​ಆರ್ ಚಿತ್ರದ ಭೂಮಿಕೆಯಲ್ಲಿ, ಎನ್​ ಟಿ ಆರ್ ಅಲ್ಲದೆ, ರಾಮ್ ಚರಣ್, ಬಾಲಿವುಡ್​ನ ಅಜಯ್ ದೇವಗನ್ ಮತ್ತು ಆಲಿಯ ಭಟ್ ಹಾಗೆಯೇ ಹಾಲಿವುಡ್​ ಮತ್ತು ಪಾಶ್ಚಾತ್ಯ ತಾರೆಯರಾಗಿರುವ ಒಲಿವಿಯಾ ಮೊರಿಸ್, ರೇ ಸ್ಟೀವೆನ್ಸನ್ ಮತ್ತು ಅಲಿಸನ್ ಡೂಡಿ ಅವರ ಜೊತೆ ತಮಿಳು ನಟ ಸಮುತೀರಕಣಿ ನಟಿಸುತ್ತಿದ್ದಾರೆ. ಮೂಲಗಳ ಪ್ರಕಾರ ಸಿನಿಮಾ ಅಕ್ಟೋಬರ್​ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: Dudhsagar waterfalls: ಧುಮ್ಮಿಕ್ಕುತ್ತಿರುವ ದೂಧ್​ಸಾಗರ್, ತೆರಳಲು ಸಾಧ್ಯವಾಗದೇ ಜಲಪಾತದೆದುರೇ ನಿಂತ ರೈಲು; ವಿಡಿಯೊ ನೋಡಿ

Click on your DTH Provider to Add TV9 Kannada