ನೀವು ನಂಬಲಾರಿರಿ, ಆದರೆ ಭೂಮಂಡಲವನ್ನೇ ಹೊಸಕಿ ಹಾಕುವ ಸಾಮರ್ಥ್ಯ ಏಲಿಯನ್​ಗಳಿಗಿದೆಯಂತೆ!

ನೀವು ನಂಬಲಾರಿರಿ, ಆದರೆ ಭೂಮಂಡಲವನ್ನೇ ಹೊಸಕಿ ಹಾಕುವ ಸಾಮರ್ಥ್ಯ ಏಲಿಯನ್​ಗಳಿಗಿದೆಯಂತೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jul 30, 2021 | 5:24 PM

ಬೇರೆ ಗ್ರಹಗಳ ತಂತ್ರಜ್ಞಾನ ಮತ್ತು ಅಲ್ಲಿನ ಜೀವಿಗಳ ಬಳಿಯಿರುವ ಆಯಧಗಳು ಬಹಳಷ್ಟು ಶಕ್ತಿಶಾಲಿಯಾಗಿವೆಯಂತೆ. ಏಲಿಯನ್ಗಳು ಭೂಮಿಯನ್ನು ವಶಪಡಿಸಿಕೊಳ್ಳುವ ನಿರ್ಧಾರ ಮಾಡಿದರೆ, ಅಲ್ಪಾವಧಿಯಲ್ಲೇ ಆ ಕೆಲಸವನ್ನು ಮಾಡಿ ಮುಗಿಸುವ ಕ್ಷಮತೆ ಅವರಲ್ಲಿದೆ ಎಂದು ಪೋಪ್ ಹೇಳುತ್ತಾರೆ.

ನಿಕ್ ಪೋಪ್ ಬಗ್ಗೆ ಬಹಳಷ್ಟು ಜನಕ್ಕೆ ಗೊತ್ತಿರಲಾರದು. ಇವರು ಯುನೈಟೆಡ್ ಕಿಂಗ್ಡಮ್ ಭದ್ರತಾ ವಿಭಾಗದ ಮಾಜಿ ಅಧಿಕಾರಿ. ಆದರೆ ಅವರು ಪ್ರಸಿದ್ಧರಾಗಿರುವುದು ಅದಕ್ಕಲ್ಲ. ಯುಎಫ್ಓಗಳ ಬಗ್ಗೆ ನಿಮಗೆ ಗೊತ್ತಿದೆ-ಹಾರುವ ತಟ್ಟೆ ಅಥವಾ ಅನ್ಐಡೆಂಟಿಫೈಡ್ ಪ್ಲೈಯಿಂಗ್ ಆಬ್ಲೆಕ್ಟ್. ಈ ಯುಎಫ್ಓಗಳನ್ನು ಕುರಿತು ಅವರು ಸಮಾರು ಮೂರು ದಶಕಗಳಿಂದ ಅಧ್ಯಯನ ನಡೆಸಿದ್ದಾರೆ ಮತ್ತು ಅವರೇ ಬಹಿರಂಗಪಡಿಸುವ ಪ್ರಕಾರ ಇದುವರೆಗೆ 143 ಬಾರಿ ಯುಎಫ್ಓಗಳನ್ನು ಮತ್ತು ಏಲಿಯನ್ಗಳನ್ನು (ಬೇರೆ ಗ್ರಹದ ಜೀವಿಗಳು) ನೋಡಿದ್ದಾರೆ.

ನಾವು ಸಹ ಹಾರುವ ತಟ್ಟೆ ಮತ್ತು ಏಲಿಯನ್ಗಳ ಬಗ್ಗೆ ಕೇಳಿಸಿಕೊಳ್ಳುತ್ತಿರುತ್ತೇವೆ ಹೊರತು ಅವುಗಳ ಕುರಿತು ನಿಖರವಾದ ಮಾಹಿತಿ ನಿಕ್ ಪೋಪ್ ಬಿಟ್ಟರೆ ಬೇರೆ ಯಾರಲ್ಲೂ ಇಲ್ಲ. ಇತ್ತೀಚಿಗೆ ಮನುಕುಲವೇ ಗಾಬರಿಯಾಗುವಂಥ ಕೆಲ ಸಂಗತಿಗಳನ್ನು ಅವರು ಬಹಿರಂಗಪಡಿಸಿದ್ದಾರೆ. ಅವರು ಹೇಳುವ ಪ್ರಕಾರ ಇಡೀ ಭೂಮಿಯನ್ನು ಹೊಸಕಿ ಹಾಕುವಷ್ಟು ಬಲ ಮತ್ತು ಸಾಮರ್ಥ್ಯ ಏಲಿಯನ್ಗಳಲ್ಲಿದೆಯಂತೆ!

ಅಲ್ಲದೆ ಬೇರೆ ಗ್ರಹಗಳ ತಂತ್ರಜ್ಞಾನ ಮತ್ತು ಅಲ್ಲಿನ ಜೀವಿಗಳ ಬಳಿಯಿರುವ ಆಯಧಗಳು ಬಹಳಷ್ಟು ಶಕ್ತಿಶಾಲಿಯಾಗಿವೆಯಂತೆ. ಏಲಿಯನ್ಗಳು ಭೂಮಿಯನ್ನು ವಶಪಡಿಸಿಕೊಳ್ಳುವ ನಿರ್ಧಾರ ಮಾಡಿದರೆ, ಅಲ್ಪಾವಧಿಯಲ್ಲೇ ಆ ಕೆಲಸವನ್ನು ಮಾಡಿ ಮುಗಿಸುವ ಕ್ಷಮತೆ ಅವರಲ್ಲಿದೆ ಎಂದು ಪೋಪ್ ಹೇಳುತ್ತಾರೆ.

ಯುಎಫ್ಓಗಳನ್ನು ಕುರಿತು ಬೇರೆ ಬೇರೆ ದೇಶಗಳಲ್ಲಿ ಜನ ಅಧ್ಯಯನ ಮಾಡುತ್ತಿರುವರಾದರೂ, ಪೋಪ್ ಅವರು ನೀಡುವ ಮಾಹಿತಿಗೆ ಹೆಚ್ಚು ಪ್ರಾಧಾನ್ಯತೆ ಇದೆ. ಹಾಗಾಗಿ, ಅವರು ಹೇಳಿರುವನ್ನು ನಿರ್ಲಕ್ಷಿಸಿವುದು ಸಾಧ್ಯವಿಲ್ಲ.

ಇದನ್ನೂ ಓದಿ: UFO Over America: ಕಳೆದ ವರ್ಷ ಲಾಕ್​ಡೌನ್ ಸಮಯದಲ್ಲಿ ಅಮೇರಿಕನ್ನರು ಅತೀ ಹೆಚ್ಚು ಹಾರುವ ತಟ್ಟೆಗಳನ್ನು ನೋಡಿದ್ದಾರೆ !

Published on: Jul 30, 2021 04:20 PM