UFO Over America: ಕಳೆದ ವರ್ಷ ಲಾಕ್ಡೌನ್ ಸಮಯದಲ್ಲಿ ಅಮೇರಿಕನ್ನರು ಅತೀ ಹೆಚ್ಚು ಹಾರುವ ತಟ್ಟೆಗಳನ್ನು ನೋಡಿದ್ದಾರೆ !
ಅಮೇರಿಕದ ರಾಷ್ಟ್ರೀಯ ಯೂಎಫ್ಓ ವರದಿ ಕೇಂದ್ರ (National UFO Reporting Centre-NUFORC) ಬಿಡುಗಡೆ ಮಾಡಿದ ವರದಿ ಪ್ರಕಾರ, ಅಮೇರಿಕದ ಮೇಲೆ ಸಾವಿರಾರು ಯೂಎಫ್ಓಗಳು ಅಂದರೆ ಇನ್ನೂ ಗುರುತಿಸಿರದ ಹಾರುತ್ತಿರುವ ವಸ್ತು ಹಾರಾಡಿವೆ ಎಂದು ಹೇಳಿದೆ.
ಹಾರುವ ತಟ್ಟೆಗಳು, ಬೇರೆ ಲೋಕದ ಜೀವಿಗಳನ್ನು ಹೊತ್ತೊಯ್ಯುವ ವಾಹಕಗಳು.. ಇತ್ಯಾದಿ, ಇತ್ಯಾದಿ. ಇವೆಲ್ಲ ಹಾಲಿವುಡ್ ವೈಜ್ಞಾನಿಕ ಕಾದಂಬರಿಯಾಧಾರಿತ ಸಿನಿಮಾದಲ್ಲಿ ಬರುವ ಕಥಾ ವಸ್ತುಗಳು. ನಮಗೆ ಮೊದಲಿನಿಂದಲೂ ಕುತೂಹಲ ಏನೆಂದರೆ, ಬೇರೆ ಗೃಹದ ಮೇಲೆ ನಮ್ಮಂತೆ ಜೀವಿಗಳಿವೆಯಾ? ಇದ್ದರೆ ಅವುಗಳಿಗೆ ನಮಗಿಂತ ಬುದ್ದಿಮತ್ತೆ ಜಾಸ್ತಿ ಇದೆಯಾ? ಅಥವಾ ನಮಗಿಂತ ತುಂಬಾ ಹಿಂದೆ ಇವೆಯೋ? ಈ ಕುತೂಹಲ ಇಂದು ನಿನ್ನೆಯದಲ್ಲ. ಈಗ ಅಮೇರಿಕದ ರಕ್ಷಣಾ ಸಂಸ್ಥೆ ಪೆಂಟಗಾನ್ ಪ್ರಕಾರ ಇನ್ನೂ ಗುರುತಿಸಿರದ ಹಾರುತ್ತಿರುವ ವಸ್ತು (unidentified flying object) ಇವೆ. ಅವನ್ನು ಅಮೇರಿಕದ ಸೇನೆಯಲ್ಲಿ ಕೆಲಸ ಮಾಡುವವರು ನೋಡಿದ್ದಾರೆ. ಹಾಗಂತ ಅವರು ಇನ್ನೂ ಗುರುತಿಸಿರದ ಹಾರುತ್ತಿರುವ ವಸ್ತು (unidentified flying object) ಗಳನ್ನು ಬೇರೆ ಲೋಕದಿಂದ ಜೀವಿಗಳನ್ನು ಹೊತ್ತು ತಂದಿರುವ ವಾಹಕಗಳು ಎಂದೇನು ಹೇಳಿಲ್ಲ. ಆ ರೀತಿ ಹೇಳಲು ಯಾವ ಸಾಕ್ಷ್ಯಗಳು ಇನ್ನೂ ಸಿಕ್ಕಿಲ್ಲ. ಪೆಂಟಗಾನ್ ವರದಿ ಪ್ರಕಾರ, 2019 ರಲ್ಲಿ ಮೊದಲ ಬಾರಿಗೆ ಗುರುತಿಸಿರದ ಹಾರುತ್ತಿರುವ ವಸ್ತು (unidentified flying object) ಗಳನ್ನು ಕಂಡಿದ್ದು ನಿಜ ಮತ್ತು ಇದನ್ನು ನೋಡಿದವರು ಅಮೇರಿಕದ ಜಲ ಸೇನೆಯ ಅಧಿಕಾರಿಗಳು. ಆ ಯೂಎಫ್ಓಗಳ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಇವೇನು ಒಂದು ದಿನ ಕಂಡು ಅಮೇಲೆ ಮರೆಯಾಗಿಲ್ಲ. ಹಲವಾರು ದಿನ ಇವನ್ನು ಬಹಳ ಜನ ನೋಡಿದ್ದಾರೆ ಎಂದು ಆ ವರದಿ ಹೇಳಿದೆ. ಒಂದು ಪಿರಾಮಿಡ್ ಆಕಾರದಲ್ಲಿ ಇದ್ದರೆ, ಇನ್ನುಳಿದ ಎರಡರಲ್ಲಿ ಒಂದು ಬಲೂನಿನಾಕಾರದಲ್ಲಿಯೂ ಮತ್ತೊಂದು ದ್ರೋಣ್ ಆಕಾರದಲ್ಲಿಯೂ ಇದೆ ಎಂದು ಪೆಂಟಗಾನ್ ಹೇಳಿದೆ. ಯೂಎಫ್ಓ ಕುರಿತಾಗಿನ ವಿವರಗಳನ್ನು (declassified) ಪೆಂಟ್ಗಾನ್ ಹೊರ ಹಾಕಿರುವುದರಿಂದ ಈ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಅಧ್ಯಯನಕ್ಕೆ ಬೇರೆ ವಿಭಾಗ ಅಮೇರಿಕದಲ್ಲಿ ಈ ರೀತಿಯ ಇನ್ನೂ ಗುರುತಿಸಿರದ ಹಾರುತ್ತಿರುವ ವಸ್ತು (unidentified flying object) ಗಳ ಅಧ್ಯಯನಕ್ಕಾಗಿ ಒಂದು ಅಧ್ಯಯನ ಕೇಂದ್ರವೇ ಇದೆ. ಇದನ್ನು ರಾಷ್ಟ್ರೀಯ ಯೂಎಫ್ಓ ವರದಿ ಕೇಂದ್ರ (National UFO Reporting Centre-NUFORC). ಈ ಕೇಂದ್ರದ ಪ್ರಕಾರ 2019 ಕ್ಕೆ ಹೋಲಿಸಿದಾಗ 202 ರಲ್ಲಿ 1000 ಕ್ಕೂ ಹೆಚ್ಚು ಬಾರಿ ಈ ಯೂ ಎಫ್ಓಗಳು ಕಾಣಿಸಿವೆ. 2020 ರಲ್ಲಿ 7200 ಬಾರಿ ಈ ಯೂಎಫ್ಓಗಳು ಕಾಣಿಸಿಕೊಂಡಿವೆ. ಅದರಲ್ಲಿಯೂ ನ್ಯೂಯಾರ್ಕ್ ಪಟ್ಟಣದಲ್ಲಿಯೇ ಜಾಸ್ತಿ ಕಾಣಿಸಿಕೊಂಡಿದೆ. ಇನ್ನೊಂದು ವಿಚಿತ್ರವಾದ ಸುದ್ದಿ ಇದೆ. ಕಳೆದ ವರ್ಷ ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಯಾವಾಗ ದೇಶಾದ್ಯಂತ ಲಾಕ್ಡೌನ್ ಹಾಕಲಾಗಿತ್ತೋ ಆಗ ಈ ಯೂಎಫ್ಓಗಳು ಜಾಸ್ತಿ ಕಂಡಿವೆ. ಇಷ್ಟಾಗಿ, ಪೆಂಟಗಾನ್ ಯಾವುದೇ ಯೂಎಫ್ಓನ್ನೂ ವೈಜ್ಞಾನಿಕ ಕಾದಂಬರಿಗಳಲ್ಲಿ ಹೇಳುವಂತೆ ಜೀವಿಗಳು ನಮ್ಮ ಮೇಲೆ ಹೊಡೆದಾಡಲು ಬರುವ ವಾಹನ ಅಂತ ಹೇಳುತ್ತಿಲ್ಲ. ಆದರೆ 202 ರಲ್ಲಿ ಪೆಂಟಗಾನ್ ತನ್ನ ಸಂಸ್ಥೆಯೊಳಗೆ ಒಂದು ಟಾಸ್ಕ್ ಫೋರ್ಸ್ನ್ನು ಮಾಡಿಕೊಂಡಿತು. ಅದಕ್ಕೆ, ಇನ್ನೂ ಗುರುತಿಸಲಾಗದ ವಾಯುವಾಹಕ ವಿದ್ಯಮಾನಗಳ ತಾಸ್ಕ್ ಫೋರ್ಸ್ (Unidentified Aerial Phenomena Task Force) ಎಂದು ಹೆಸರಿಸಲಾಗಿದೆ. ಈ ಟಾಸ್ಕ್ ಫೋರ್ಸ್ನ ಕೆಲಸವೇನೆಂದರೆ, ಈ ರೀತಿ ಕಂಡ ಯೂಎಫ್ಓವನ್ನು ಗುರುತಿಸುವುದು, ಅವುಗಳ ಗುಣ ಲಕ್ಷಣಗಳ ವರದಿಯನ್ನು ತಯಾರಿಸುವುದು ಆಗಿದೆ. ಇದನ್ನು ಕಂಡ ಈ ಹಿಂದಿನ ಅಮೇರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೊರೋನಾ ವೈರಸ್ ಪ್ಯಾಕೇಜಿನಡಿ ಹಣ ಬಿಡುಗಡೆ ಮಾಡಿ ಇದರ ಅಧ್ಯಯನಕ್ಕೆ ಹಾದಿ ಮಾಡಿದ್ದಾರೆ ಎಂದು ವಿಯಾನ್ ಟಿವಿ ಸಂಸ್ಥೆ ವರದಿ ಮಾಡಿದೆ.
(Pentagon National UFO Reporting Centre-NUFORC confirms of UFO over America)