AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MeToo Movement: ಲೈಂಗಿಕ ಕಿರುಕುಳ ಕೇಸ್ ವಿಚಾರಣೆ, ಹಾರ್ವಿ ವೇನ್​ಸ್ಟೋನ್​ ಕ್ಯಾಲಿಫೋರ್ನಿಯಾ ಹಸ್ತಾಂತರಕ್ಕೆ ಕೊವಿಡ್​ ತಡೆ!

Harvey weinstein: ಹಾರ್ವಿ ವೇನ್​ಸ್ಟೋನ್​ ಮೇಲೆ ಕ್ಯಾಲಿಫೋರ್ನಿಯಾದಲ್ಲಿ ಕೂಡ ಲೈಂಗಿಕ ಕಿರುಕುಳ ಕೊಟ್ಟ ಆರೋಪದಲ್ಲಿ ಅಲ್ಲಿಗೆ ವಿಚಾರಣೆಗೆ ಹೇಗಬೇಕಿತ್ತು. ಕೊವಿಡ್​ ಕಾರಣಕ್ಕಾಗಿ ನ್ಯೂಯಾರ್ಕ್​ ಕೋರ್ಟ್​ ಅಲ್ಲಿಗೆ ಹಸ್ತಾಂತರ ಮಾಡಲು ಒಪ್ಪಿಕೊಂಡಿಲ್ಲ.

MeToo Movement: ಲೈಂಗಿಕ ಕಿರುಕುಳ ಕೇಸ್ ವಿಚಾರಣೆ, ಹಾರ್ವಿ ವೇನ್​ಸ್ಟೋನ್​ ಕ್ಯಾಲಿಫೋರ್ನಿಯಾ ಹಸ್ತಾಂತರಕ್ಕೆ ಕೊವಿಡ್​ ತಡೆ!
Harvey weinstein
ಡಾ. ಭಾಸ್ಕರ ಹೆಗಡೆ
|

Updated on:Apr 13, 2021 | 7:06 PM

Share

ಹಾರ್ವಿ ವೇನ್ಸ್ಟೋನ್ ಹೆಸರು ನೆನಪಿದೆಯೇ? ಅಮೇರಿಕದ ಹಾಲಿವುಡ್ಡಿನಲ್ಲಿ ಮೊದಲ ಬಾರಿಗೆ ಬೀಸಿದ #MeToo ಮೀ ಟೂ ಅಂದರೆ ಲೈಂಗಿಕ ಕಿರುಕುಳದ ವಿರುದ್ಧದ ಚಳುವಳಿಗೆ ಬಲಿಯಾದ ಅತೀ ದೊಡ್ಡ ಸಿನಿಮಾ ನಿರ್ಮಾಪಕನೇ, ಹಾರ್ವಿ ವೇನ್ಸ್ಟೋನ್. ಈಗಾಗಲೇ ತನ್ನ ಮೇಲಿರುವ ಲೈಂಗಿಕ ಕಿರುಕುಳಕ್ಕೆ ಭಾರಿ ದಂಡ ತೆತ್ತು ನ್ಯೂಯಾರ್ಕ್ನಲ್ಲಿ ಜೈಲುವಾಸ ಎಣಿಸುತ್ತಿದ್ದಾರೆ. ಆ ರಾಜ್ಯದಲ್ಲಿ ಆತನ ಮೇಲಿರುವ ಲೈಂಗಿಕ ಕಿರುಕುಳದ ಆರೋಪ ಸಾಬೀತಾಗಿ 32-ವರ್ಷದ ಜೈಲು ವಾಸ ಅನುಭವಿಸುತ್ತಿದ್ದಾನೆ. ಈಗ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಕೂಡ ಆತನ ಮೇಲಿನ ಇಂತದೇ ಆರೋಪ ಬಂದಿದ್ದು, ಅಲ್ಲಿಯ ಕೋರ್ಟ್ ವಿಚಾರಣೆಗೆ ಹೋಗಲು ಕೊವಿಡ್ ಅಡ್ಡ ಬಂದಿದೆ. ಕ್ಯಾಲಿಫೋರ್ನಿಯಾಕ್ಕೆ ವೇನ್ಸ್ಟೋನ್ನನ್ನು ಹಸ್ತಾಂತರ ಮಾಡುವ ವಿಚಾರವನ್ನು ಕೊವಿಡ್ ಕಾರಣಕ್ಕಾಗಿ ಮುಂದೂಡಲಾಗಿದೆ , ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ. 2004 ರಿಂದ 2013 ರ ಒಳಗೆ 68-ವರ್ಷದ ವೇನ್ಸ್ಟೋನ್ ಕ್ಯಾಲಿಫೊರ್ನೀಯಾ ರಾಜ್ಯದ ಲಾಸ್ ಎಂಜಲೀಸ್​ನಲ್ಲಿರುವ ಬೆವರ್ಲಿ ಹಿಲ್ಸ್​ನಲ್ಲಿ ಕನಿಷ್ಠ ಐದು ಜನ ಹೆಂಗಸರಿಗೆ ಲೈಂಗಿಕ ಕಿರುಕುಳ ಕೊಟ್ಟಿರುವ ಆರೋಪದ ಕುರಿತಾಗಿ ಆತನನ್ನು ಕ್ಯಾಲಿಫೋರ್ನಿಯಕ್ಕೆ ಹಸ್ತಾಂತರಿಸಬೇಕೆಂಬ ಬೇಡಿಕೆ ಕೋರ್ಟಿನ ಮುಂದಿತ್ತು. ನ್ಯೂಯಾರ್ಕ್ ರಾಜ್ಯದ ಕೋರ್ಟನಿಂದ ಹಸ್ತಾಂತರದ ಆದೇಶ ಹೊರಬರದ ಹೊರತು, ಆತನನ್ನು ಕ್ಯಾಲಿಫೋರ್ನೀಯಾಕ್ಕೆ ಹಸ್ತಾಂತರಿಸಲಾಗದು. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿಯೇ ವೇನ್ಸ್ಟೋನ್​ನ ಹಸ್ತಾಂತರ ನಡೆಯಬೇಕಿತ್ತು. ಆಗಲೂ ಕೊವಿಡ್ ಕಾರಣದಿಂದ, ಕೋರ್ಟ್ ಹಸ್ತಾಂತರಕ್ಕೆ ಒಪ್ಪಿಕೊಂಡಿರಲಿಲ್ಲ. ಆಗ ವೇನ್ಸ್ಟೋನ್​ಗೆ ಕೊವಿಡ್ ಸೋಂಕು ತಗುಲಿತ್ತು ಎಂಬ ಸಂಶಯ ಇತ್ತು. ಆದರೆ, ಟೆಸ್ಟ್ನ ವರದಿ ನೆಗೆಟಿವ್ ಬಂದಿತ್ತು.

ಆತನ ವಕೀಲರು ಹೇಳೋದೆ ಬೇರೆ ಆದರೆ, ಆತ ಮಾತ್ರ ಈ ಆರೋಪವನ್ನು ಒಪ್ಪಿಕೊಂಡಿಲ್ಲ. ಆತನ ವಕೀಲರ ಪ್ರಕಾರ, ವೇನ್ಸ್ಟೋನ್ ಯಾರ ಜೊತೆಗೂ ಒಪ್ಪಿಗೆ ಇಲ್ಲದ ಲೈಂಗಿಕ ಸಂಬಂಧ ಹೊಂದಿರಲಿಲ್ಲ. ನಾರ್ಮನ್ ಆಫ್ಮನ್ ಪ್ರಕಾರ ಆತನನ್ನು ಕ್ಯಾಲಿಫೋರ್ನಿಯಾಕ್ಕೆ ಹಸ್ತಾಂತರಿಸಬಾರದು. ಏಕೆಂದರೆ, ಆತನಿಗೆ ಕಣ್ಣು ಮತ್ತು ಹಲ್ಲಿನ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ. ಆಫ್ಮನ್ ಹೇಳುವಂತೆ, ಸಕ್ಕರೆ ಕಾಯಿಲೆಯಿಮದ ನರಳುತ್ತಿರುವ ವೇನ್ಸ್ಟೋನ್ ಈಗ ಹೆಚ್ಚು ಕಡಿಮೆ ಕುರುಡರಾಗಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಏನಾಗುತ್ತದೆ ಎಂಬುದನ್ನು ತಡೆಯಲು ಈ ರೀತಿಯ ತಂತ್ರವನ್ನು ಮಾಡುತ್ತಿಲ್ಲ, ಎಂದು ಹೇಳಿದ ಆಫ್ಮನ್, ತನ್ನ ಕಕ್ಷಿದಾರರ ಮೇಲಿರುವ ಎಲ್ಲಾ ಆರೋಪ ಸುಳ್ಳು. ನಮ್ಮ ಬಳಿ ತುಂಬ ಖಚಿತ ಸಾಕ್ಷ್ಯಾಧಾರ ಇದೆ. ನಮಗಂತೂ ನಂಬಿಕೆ ಇದೆ, ಈ ಎಲ್ಲಾ ಆರೋಪಗಳಿಂದ ಮುಕ್ತರಾಗುತ್ತೇವೆ ಎಂದು ಹೇಳಿದ್ದಾರೆ. ಕೋರ್ಟ್ ಏಪ್ರಿಲ್ 30 ಕ್ಕೆ ಈ ಕೇಸನ್ನು ಮತ್ತೆ ವಿಚಾರಣೆಗೆ ತೆಗೆದುಕೊಳ್ಳುವುದಾಗಿ ಹೇಳಿದೆ. ಒಂದೊಮ್ಮೆ ಕ್ಯಾಲಿಫೋರ್ನಿಯಾದಲ್ಲಿ ತನ್ನ ಮೇಲಿರುವ ಕೇಸನ್ನು ಗೆದ್ದರೂ, ನ್ಯೂಯಾರ್ಕ್​ನಲ್ಲಿ ಶಿಕ್ಷೆಗೆ ಒಳಗಾಗಿರುವ ಆತ ಇಡೀ ಜೀವಮಾನವಿಡೀ ಜೈಲಿನಲ್ಲಿ ಕಳೆಯಬೇಕಾಗಿದೆ.

ಹಾರ್ವಿ ವೇನ್ಸ್ಟೋನ್ ವಿರುದ್ಧದ ಹೋರಾಟ ವಿರಾಟ್ ಸ್ವರೂಪ ಪಡೆದು #MeToo ಮೀಟೂ ಚಳುವಳಿ ಇಡೀ ವಿಶ್ವದಾದ್ಯಂತ ಹಬ್ಬಿತ್ತು. ಭಾರತದಲ್ಲಿ ಕೂಡ ಈ ಚಳುವಳಿ ಹಬ್ಬಿ, ಅಂಕಣಕಾರ್ತಿ ಪ್ರಿಯಾ ರಮಣಿ ಅವರು ಖ್ಯಾತ ಪತ್ರಕರ್ತ ಎಮ್.ಜೆ. ಅಕ್ಬರ್ ಅವರ ವಿರುದ್ಧ ಇಂತದೇ ಆರೋಪ ಮಾಡಿದ್ದಳು. ಆದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದ ಅಕ್ಬರ್ ಇತ್ತೀಚೆಗೆ ಈ ಕೇಸಿನಲ್ಲಿ ಸೋತಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ:

ನಾನೆಂಬ ಪರಿಮಳದ ಹಾದಿಯಲಿ: ಪಾತರದವರಂಗ ಹಾಡ್ಕೊಂತ ಕುಣಕೊಂತ ಹೋಗಬೇಕಂತಿಯೇನು?

ಕಂಗನಾ ರಣಾವತ್​-ತಾಪ್ಸೀ ಪನ್ನು ಈಗ ಫ್ರೆಂಡ್ಸ್​! ಜಗಳ ಅಂತ್ಯ ಆಗಿದ್ದಕ್ಕೆ ಕಾರಣ ಏನು?

(Extradition of Harvey Weinstein in MeToo cases in California put off till month end)

Published On - 5:02 pm, Tue, 13 April 21

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ