‘ಮಿಜೋರಾಂ ಪೊಲೀಸರು ಸಮಸ್ಯೆ ಉಲ್ಬಣವಾಗುವಂತೆ ಮಾಡಿದ್ದಾರೆ’: ಗಡಿ ಸಂಘರ್ಷದ ನಡುವೆಯೇ  ವಿಡಿಯೊ ಟ್ವೀಟ್ ಮಾಡಿದ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ

Himanta Biswa Sarma: ವಿಡಿಯೊದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ನೆಲದ ಮೇಲೆ ವಿಶ್ರಾಂತಿ ಪಡೆಯುವುದನ್ನು ಕಾಣಬಹುದು ಮತ್ತು ಅವರಲ್ಲಿ ಒಬ್ಬರು ಧೂಮಪಾನ ಮಾಡುತ್ತಿದ್ದಾರೆ. "ಮಿಜೋರಾಂ ಪೊಲೀಸ್ ಸಿಬ್ಬಂದಿ ಹೇಗೆ ವರ್ತಿಸಿದ್ದಾರೆ ಮತ್ತು ಸಮಸ್ಯೆಯನ್ನು ಹೆಚ್ಚಿಸಿದ್ದಾರೆಂದು ತಿಳಿಯಲು ಈ ವಿಡಿಯೊವನ್ನು ನೋಡಿ ಎಂದಿದ್ದಾರೆ ಶರ್ಮಾ

'ಮಿಜೋರಾಂ ಪೊಲೀಸರು ಸಮಸ್ಯೆ ಉಲ್ಬಣವಾಗುವಂತೆ ಮಾಡಿದ್ದಾರೆ’: ಗಡಿ ಸಂಘರ್ಷದ ನಡುವೆಯೇ  ವಿಡಿಯೊ ಟ್ವೀಟ್ ಮಾಡಿದ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ
ಹಿಮಂತ ಬಿಸ್ವ ಶರ್ಮಾ

ಗುವಾಹಟಿ: ಎರಡು ಈಶಾನ್ಯ ರಾಜ್ಯಗಳ ನಡುವೆ ಗಡಿ ಉದ್ವಿಗ್ನತೆ ಹೆಚ್ಚುತ್ತಿರುವುದರ ನಡುವೆಯೇ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮಂಗಳವಾರ ಮಿಜೋರಾಂ ಪೊಲೀಸ ನಡವಳಿಕೆಯನ್ನು ಟೀಕಿಸುವ ವಿಡಿಯೊವೊಂದನ್ನು ಟ್ವೀಟಿಸಿದ್ದಾರೆ.

ವಿಡಿಯೊದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ನೆಲದ ಮೇಲೆ ವಿಶ್ರಾಂತಿ ಪಡೆಯುವುದನ್ನು ಕಾಣಬಹುದು ಮತ್ತು ಅವರಲ್ಲಿ ಒಬ್ಬರು ಧೂಮಪಾನ ಮಾಡುತ್ತಿದ್ದಾರೆ. “ಮಿಜೋರಾಂ ಪೊಲೀಸ್ ಸಿಬ್ಬಂದಿ ಹೇಗೆ ವರ್ತಿಸಿದ್ದಾರೆ ಮತ್ತು ಸಮಸ್ಯೆಯನ್ನು ಹೆಚ್ಚಿಸಿದ್ದಾರೆಂದು ತಿಳಿಯಲು ಈ ವಿಡಿಯೊವನ್ನು ನೋಡಿ” ಎಂದು ಶರ್ಮಾ ಟ್ವೀಟ್ ಮಾಡಿ, ಇದನ್ನು “ಬೇಸರದ ಮತ್ತು ಭಯಾನಕ” ಸಂಗತಿ ಎಂದು ಕರೆದಿದ್ದಾರೆ.

ಮಿಜೋರಾಂ ಪೊಲೀಸರೊಂದಿಗೆ ಹಿಂಸಾತ್ಮಕ ಘರ್ಷಣೆಯಲ್ಲಿ ಸಬ್-ಇನ್ಸ್‌ಪೆಕ್ಟರ್ ಸ್ವಪನ್ ರಾಯ್ ಮತ್ತು ಕಾನ್‌ಸ್ಟೆಬಲ್‌ಗಳಾದ ಲಿಟಾನ್ ಸುಕ್ಲಾಬೈದ್ಯಾ, ಎಂ.ಎಚ್.ಬರ್ಹುಯಾ,ಎನ್ ಹುಸೇನ್ ಮತ್ತು ಎಸ್.ಬರ್ದುರಿಯಾ ಸಾವಿಗೀಡಾಗಿದ್ದು, 50 ಪೊಲೀಸರಿಗೆ ಗಾಯಗಳಾದ ಘಟನೆಯ ಬೆನ್ನಲ್ಲೇ ಶರ್ಮಾ ಈ ಟ್ವೀಟ್ ಮಾಡಿದ್ದಾರೆ.


ಶರ್ಮಾ ಈ ಹಿಂದೆ ಸಿಬ್ಬಂದಿಗಳ ಸಾವಿಗೆ ಸಂತಾಪ ಸೂಚಿಸಿದ್ದರು ಮತ್ತು “ಸ್ಪಷ್ಟ ಪುರಾವೆಗಳು” ಹೊರಹೊಮ್ಮುತ್ತಿವೆ ಎಂದು ಹೇಳಿದ್ದರು. “ದುರದೃಷ್ಟವಶಾತ್ ಮಿಜೋರಾಂ ಪೊಲೀಸರು ಅಸ್ಸಾಂ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಲೈಟ್ ಮೆಷಿನ್ ಗನ್ಸ್ (ಎಲ್ಎಂಜಿ) ಬಳಸಿದ್ದಾರೆಂದು ತೋರಿಸುತ್ತದೆ. ಪರಿಸ್ಥಿತಿಯ ಉದ್ದೇಶ ಮತ್ತು ತೀವ್ರತೆ ಬಗ್ಗೆ ಇಷ್ಟೊಂದು ಹೇಳುವುದು ದುಃಖಕರ ಮತ್ತು ದುರದೃಷ್ಟಕರ ಎಂದಿದ್ದಾರೆ.

ಗಡಿ ಪ್ರದೇಶದಲ್ಲಿ ಮಿಜೋರಾಂ ತನ್ನ ಭೂಮಿಯನ್ನು ಅತಿಕ್ರಮಿಸಿದೆ ಎಂದು ಅಸ್ಸಾಂ ಆರೋಪಿಸಿದೆ. ಇದಕ್ಕೂ ಮೊದಲು ಧೋಲಖಲ್ ಖುಲಿಚೆರಾದಲ್ಲಿ ಮಿಜೋರಾಂನಿಂದ ಶಂಕಿತ ದುಷ್ಕರ್ಮಿಗಳು ಅಸ್ಸಾಂ ಸರ್ಕಾರಿ ಅಧಿಕಾರಿಗಳ ತಂಡಕ್ಕೆ ಗ್ರೆನೇಡ್ ಎಸೆಯಲಾಯಿತು. ಜುಲೈ 11 ರಂದು, ಮಿಜೋರಾಂ ಬದಿಯಲ್ಲಿ ಅಂತರರಾಜ್ಯ ಗಡಿಯಲ್ಲಿ ಎರಡು ಒಂದರ ಹಿಂದೆ ಒಂದರಂತೆ ಸ್ಫೋಟಗಳು ನಡೆದವು.

ಮಿಜೋರಾಂನ ವೈರೆಂಗ್ಟೆ ಪೊಲೀಸ್ ಠಾಣೆಯಲ್ಲಿ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಅಸ್ಸಾಂನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಜುಲೈ 10 ರಂದು ಮಿಜೋರಾಂನಿಂದ ಸುಮಾರು 25-30 ಜನರು ಖುಲಿಚೆರಾ ಸಿಆರ್ಪಿಎಫ್ ಶಿಬಿರಕ್ಕಿಂತ 25 ಮೀಟರ್ ಮುಂದಕ್ಕೆ ಬಂದರು. ನಂತರ ಜನಸಮೂಹವು ಕನಿಷ್ಠ 50 ಕ್ಕೆ ಏರಿತು ಎಂದು ಹೇಳಿಕೊಂಡಿದ್ದಾರೆ. ಫಾರೆಸ್ಟ್ ಟ್ರ್ಯಾಕ್ ತೆರವುಗೊಳಿಸುವ ಕೆಲಸವನ್ನು ನಿಲ್ಲಿಸಲು ಮತ್ತು ಪಿಡಬ್ಲ್ಯುಡಿ ಅಧಿಕಾರಿಗಳು ರಸ್ತೆ ನಿರ್ಮಿಸುವುದನ್ನು ತಡೆಯಲು ಅವರು ಹೇಳಿದರು.

ಮಂಗಳವಾರ ಉಭಯ ರಾಜ್ಯಗಳ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿಗಳಾದ ಅಸ್ಸಾಂ ಮತ್ತು ಮಿಜೋರಾಂ ಅವರನ್ನು ಭೇಟಿಯಾಗಿ ಎರಡು ದಿನಗಳ ನಂತರ ಈ ಪ್ರದೇಶವನ್ನು ಬಾಧಿಸುತ್ತಿರುವ ಅಂತರರಾಜ್ಯ ಗಡಿ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ: Explainer ಅಸ್ಸಾಂ- ಮಿಜೋರಾಂ ಗಡಿ ಸಂಘರ್ಷದಲ್ಲಿ 6 ಪೊಲೀಸರು ಬಲಿ, 80ಕ್ಕೂ ಹೆಚ್ಚು ಮಂದಿಗೆ ಗಾಯ; ಏನಿದು ಗಡಿ ವಿವಾದ?

(Assam CM Himanta Biswa Sarma tweets a purported video of Mizoram Police criticising their behaviour)

Click on your DTH Provider to Add TV9 Kannada