‘ಮಗನಿಗೆ ಇಂದಲ್ಲ ನಾಳೆ ಯಶಸ್ಸು ಸಿಗುತ್ತದೆ’; ಇಂದ್ರಜಿತ್ ಲಂಕೇಶ್ ಭರವಸೆ

‘ಮಗನಿಗೆ ಇಂದಲ್ಲ ನಾಳೆ ಯಶಸ್ಸು ಸಿಗುತ್ತದೆ’; ಇಂದ್ರಜಿತ್ ಲಂಕೇಶ್ ಭರವಸೆ

ರಾಜೇಶ್ ದುಗ್ಗುಮನೆ
|

Updated on: Aug 07, 2024 | 7:58 AM

ಇಂದ್ರಿಜಿತ್ ಲಂಕೇಶ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು. ಈಗ ಅವರು ಮಗ ಸಮರ್ಜಿತ್​ನ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಈ ಸಿನಿಮಾಗೆ ‘ಗೌರಿ’ ಟೈಟಲ್ ಇಡಲಾಗಿದೆ. ಈ ಚಿತ್ರ ಆಗಸ್ಟ್ 15ರಂದು ರಿಲೀಸ್ ಆಗಲಿದೆ. ಮಗನ ಸಿನಿಮಾ ಬಗ್ಗೆ ಅವರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇಂದ್ರಿಜಿತ್ ಲಂಕೇಶ್ ಅವರು ‘ಗೌರಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರ ಮಗನನ್ನೇ ಪರಿಚಯ ಮಾಡುತ್ತಿದ್ದಾರೆ. ಸಾನ್ಯಾ ಅಯ್ಯರ್ ಈ ಚಿತ್ರಕ್ಕೆ ನಾಯಕಿ. ಮಗನ ನಟನೆ ಬಗ್ಗೆ ಅವರು ಮಾತನಾಡಿದ್ದಾರೆ. ‘ನಿರ್ದೇಶನ ಮಾಡುವಾಗ ಮಗ ಎಂದು ನಾನು ನೋಡಿಲ್ಲ. 6-7 ವರ್ಷ ಕಷ್ಟಪಟ್ಟಿದ್ದಾನೆ. ನಟನೆ ತರಬೇತಿ ಪಡೆದಿದ್ದಾರೆ. ನಾನು ನರ್ವಸ್ ಆಗಿದ್ದೇನೆ. ಇಂದಲ್ಲ ನಾಳೆ ಮಗನಿಗೆ ಯಶಸ್ಸು ಸಿಕ್ಕೇ ಸಿಗುತ್ತದೆ’ ಎಂದಿದ್ದಾರೆ ಇಂದ್ರಜಿತ್. ಸುದೀಪ್ ಅವರು ಈ ಚಿತ್ರಕ್ಕೆ ಸಪೋರ್ಟ್ ಮಾಡಿದ್ದಾರೆ. ಈ ಬಗ್ಗೆ ಇಂದ್ರಜಿತ್​ಗೆ ಖುಷಿ ಇದೆ. ‘ಸುದೀಪ್ ಅವರು ಅನೇಕರಿಗೆ ಮಾದರಿ. ನನ್ನ ಮಗನ ಬಗ್ಗೆ ವಿಶೇಷ ಪ್ರೀತಿ ಇದೆ. ಅದಕ್ಕೆ ನಾನು ಋಣಿ’ ಎಂದಿದ್ದಾರೆ ಇಂದ್ರಜಿತ್. ಆಗಸ್ಟ್ 15ರಂದು ‘ಗೌರಿ’ ಸಿನಿಮಾ ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.