ಆ ಹುಡುಗಿ ಕತ್ತಲಲ್ಲಿ ಹೋಗಲೇ ಬಾರದಿತ್ತು ಎಂದವರಿಗೆ ಉತ್ತರಿಸಿದ ಇಂದ್ರಜಿತ್ ಲಂಕೇಶ್

| Updated By: ರಾಜೇಶ್ ದುಗ್ಗುಮನೆ

Updated on: Aug 27, 2021 | 4:09 PM

ಮೈಸೂರಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಅನೇಕರು ಹುಡುಗಿಯದ್ದೇ ತಪ್ಪು ಎಂಬಂತೆ ಮಾತನಾಡಿದ್ದಾರೆ. ಆಕೆಗೆ ಕತ್ತಲಲ್ಲಿ ಹೋಗುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ತಲೆ ಎತ್ತಿದ್ದ ಡ್ರಗ್ಸ್​ ಪ್ರಕರಣದಲ್ಲಿ ಹಲವು ಆರೋಪ ಮಾಡಿ ಸುದ್ದಿಯಾಗಿದ್ದ ಅವರು, ಇತ್ತೀಚಿಗಿನ ದರ್ಶನ್​ ಪ್ರಕರಣದಲ್ಲಿ ಕೆಲ ಆರೋಪ ಮಾಡಿ ಗಮನ ಸೆಳೆದಿದ್ದರು. ಈಗ ಮೈಸೂರಿನಲ್ಲಿ ನಡೆದ ಗ್ಯಾಂಗ್​ ರೇಪ್​ ವಿಚಾರವಾಗಿ ಅವರು ಮಾತನಾಡಿದ್ದಾರೆ.

ಮೈಸೂರಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಅನೇಕರು ಹುಡುಗಿಯದ್ದೇ ತಪ್ಪು ಎಂಬಂತೆ ಮಾತನಾಡಿದ್ದಾರೆ. ಆಕೆಗೆ ಕತ್ತಲಲ್ಲಿ ಹೋಗುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಇಂದ್ರಜಿತ್​, ‘ಕತ್ತಲಲ್ಲಿ ಹೋಗಬಾರದಿತ್ತು ಎಂದರೆ ಹೇಗೆ? ಆಕೆಗೆ ಎಲ್ಲ ಕಡೆ ಸುತ್ತಾಡುವ ಹಕ್ಕಿತ್ತು. ಹೀಗಿದ್ದಾಗ ಆಕೆಗೆ ರಕ್ಷಣೆಗೆ ಕೊಡೋದು ನಿಮ್ಮ (ಪೊಲೀಸರ) ಕರ್ತವ್ಯವಾಗಿತ್ತು’ ಎಂದಿದ್ದಾರೆ.

ಇದನ್ನೂ ಓದಿ: ಹೈದರಾಬಾದ್ ಫಾರ್ಮಸಿ ವಿದ್ಯಾರ್ಥಿನಿ ಗ್ಯಾಂಗ್‌ ರೇಪ್‌: ಸಿಸಿಟಿವಿ ಆಧರಿಸಿ 6 ಆರೋಪಿಗಳ ಬಂಧನ, ಮಾಧ್ಯಮಗಳ ಮುಂದೆ ಇಂದು‌ ಆರೋಪಿಗಳ ಹಾಜರು

ಗ್ಯಾಂಗ್​ ರೇಪ್​: ಹುಡುಗಿಯದ್ದೇ ತಪ್ಪು ಅನ್ನೋರಿಗೆ ರಮ್ಯಾ ಛೀಮಾರಿ; ಪರಿಸ್ಥಿತಿ ಬದಲಾಗ್ಬೇಕು ಎಂದ ನಟಿ