ಉದ್ಯಮಿಯೊಬ್ಬನಿಗೆ ಮುಡಾದಿಂದ ಒಂದೇ ವರ್ಷದಲ್ಲಿ 35 ಸೈಟುಗಳು ನಗಣ್ಯ ಮೊತ್ತದಲ್ಲಿ ನೋಂದಣಿ, ಲೋಕಾಯುಕ್ತಗೆ ದೂರು
ನಿವೇಶನಗಳ ನೋಂದಣಿ ಮಾಡಿಕೊಳ್ಳುವ ಸಮಯದಲ್ಲಿ ರಾಜ್ಯದ ಎಲ್ಲ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆಯುತ್ತದೆ, ಒಂದು ನಿವೇಶನದ ನೋಂದಣಿಗೆ ಸಬ್ ರಿಜಿಸ್ಟ್ರಾರ್ ₹ 50,000 ದಿಂದ ₹ 2 ಲಕ್ಷದವರೆಗೆ ಡಿಮ್ಯಾಂಡ್ ಮಾಡುತ್ತಾನೆ ಎಂದು ವಕೀಲ ಹೇಳುತ್ತಾರೆ. ರಾಜ್ಯದ ಕಂದಾಯ ಸಚಿವರಿಗೆ ಇದು ಗೊತ್ತಿಲ್ಲವೇ?
ಮೈಸೂರು: ಭ್ರಷ್ಟಾಚಾರ ನಡೆಸಲೆಂದೇ ಹುಟ್ಟಿಕೊಂಡಿರುವಂತಿದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ. ಉದ್ಯಮಯೊಬ್ಬರಿಗೆ ಒಂದೇ ವರ್ಷದಲ್ಲಿ 35 ಸೈಟುಗಳನ್ನು ನೋಂದಾಯಿಸಿ ಕೊಟ್ಟಿರುವ ಬಗ್ಗೆ ಕೃಷ್ಣ ಹೆಸರಿನ ಉದ್ಯಮಿಯೊಬ್ಬರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದು ಅವರ ಪರ ವಕೀಲ ರವಿಕುಮಾರ್ ಮಾಧ್ಯಮಗಳಿಗೆ ವಿವರ ನೀಡಿದರು. ವಕೀಲ ಹೇಳುವ ಪ್ರಕಾರ ಮಂಜುನಾಥ್ ಹೆಸರಿನ ಉದ್ಯಮಿಗೆ ನಗಣ್ಯವೆನಿಸುವ ದುಡ್ಡಿನಲ್ಲಿ ಕ್ರಯಪತ್ರಗಳನ್ನು ಮಾಡಿಕೊಡಲಾಗಿದೆ, ಈ ವ್ಯಕ್ತಿ ನಗರದಲ್ಲಿ ಏನಿಲ್ಲವೆಂದರೂ 100 ಸೈಟುಗಳನ್ನು ಹೊಂದಿದ್ದಾನೆ, ಪ್ರತಿಷ್ಠಿತ ಪ್ರದೇಶಗಳಲ್ಲಿರುವ ಕೋಟ್ಯಂತರ ರೂ. ಬೆಲೆ ಬಾಳುವ ಸೈಟುಗಳನ್ನು ಕೇವಲ 3-4 ಸಾವಿರ ರೂ. ಮೌಲ್ಯದ ದಾಖಲೆ ಪತ್ರಗಳೊಂದಿಗೆ ನೋಂದಣಿ ಮಾಡಿಕೊಡಲಾಗಿದೆ ಎಂದು ರವಿಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾದ ಮತ್ತೊಂದು ಅಕ್ರಮ ಬಯಲು: ಕ್ರಯ ಪತ್ರ ಆಗುವ ಮುನ್ನವೇ ಸೇಲ್ ಅಗ್ರಿಮೆಂಟ್!
Latest Videos