ಉದ್ಯಮಿಯೊಬ್ಬನಿಗೆ ಮುಡಾದಿಂದ ಒಂದೇ ವರ್ಷದಲ್ಲಿ 35 ಸೈಟುಗಳು ನಗಣ್ಯ ಮೊತ್ತದಲ್ಲಿ ನೋಂದಣಿ, ಲೋಕಾಯುಕ್ತಗೆ ದೂರು

|

Updated on: Dec 07, 2024 | 11:19 AM

ನಿವೇಶನಗಳ ನೋಂದಣಿ ಮಾಡಿಕೊಳ್ಳುವ ಸಮಯದಲ್ಲಿ ರಾಜ್ಯದ ಎಲ್ಲ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆಯುತ್ತದೆ, ಒಂದು ನಿವೇಶನದ ನೋಂದಣಿಗೆ ಸಬ್ ರಿಜಿಸ್ಟ್ರಾರ್ ₹ 50,000 ದಿಂದ ₹ 2 ಲಕ್ಷದವರೆಗೆ ಡಿಮ್ಯಾಂಡ್ ಮಾಡುತ್ತಾನೆ ಎಂದು ವಕೀಲ ಹೇಳುತ್ತಾರೆ. ರಾಜ್ಯದ ಕಂದಾಯ ಸಚಿವರಿಗೆ ಇದು ಗೊತ್ತಿಲ್ಲವೇ?

ಮೈಸೂರು: ಭ್ರಷ್ಟಾಚಾರ ನಡೆಸಲೆಂದೇ ಹುಟ್ಟಿಕೊಂಡಿರುವಂತಿದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ. ಉದ್ಯಮಯೊಬ್ಬರಿಗೆ ಒಂದೇ ವರ್ಷದಲ್ಲಿ 35 ಸೈಟುಗಳನ್ನು ನೋಂದಾಯಿಸಿ ಕೊಟ್ಟಿರುವ ಬಗ್ಗೆ ಕೃಷ್ಣ ಹೆಸರಿನ ಉದ್ಯಮಿಯೊಬ್ಬರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದು ಅವರ ಪರ ವಕೀಲ ರವಿಕುಮಾರ್​ ಮಾಧ್ಯಮಗಳಿಗೆ ವಿವರ ನೀಡಿದರು. ವಕೀಲ ಹೇಳುವ ಪ್ರಕಾರ ಮಂಜುನಾಥ್ ಹೆಸರಿನ ಉದ್ಯಮಿಗೆ ನಗಣ್ಯವೆನಿಸುವ ದುಡ್ಡಿನಲ್ಲಿ ಕ್ರಯಪತ್ರಗಳನ್ನು ಮಾಡಿಕೊಡಲಾಗಿದೆ, ಈ ವ್ಯಕ್ತಿ ನಗರದಲ್ಲಿ ಏನಿಲ್ಲವೆಂದರೂ 100 ಸೈಟುಗಳನ್ನು ಹೊಂದಿದ್ದಾನೆ, ಪ್ರತಿಷ್ಠಿತ ಪ್ರದೇಶಗಳಲ್ಲಿರುವ ಕೋಟ್ಯಂತರ ರೂ. ಬೆಲೆ ಬಾಳುವ ಸೈಟುಗಳನ್ನು ಕೇವಲ 3-4 ಸಾವಿರ ರೂ. ಮೌಲ್ಯದ ದಾಖಲೆ ಪತ್ರಗಳೊಂದಿಗೆ ನೋಂದಣಿ ಮಾಡಿಕೊಡಲಾಗಿದೆ ಎಂದು ರವಿಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮುಡಾದ ಮತ್ತೊಂದು ಅಕ್ರಮ ಬಯಲು: ಕ್ರಯ ಪತ್ರ ಆಗುವ ಮುನ್ನವೇ ಸೇಲ್​ ಅಗ್ರಿಮೆಂಟ್​!