VIDEO: ಕ್ರೀಸ್ಗೆ ತಲುಪಿದರೂ ರನೌಟ್ ಆದ ಹರ್ಲೀನ್ ಡಿಯೋಲ್
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 258 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 48.2 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 262 ರನ್ಗಳಿಸಿ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರ್ತಿ ಹರ್ಲೀನ್ ಡಿಯೋಲ್ ರನೌಟ್ ಆಗಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೀಗೆ ರನೌಟ್ ವಿಡಿಯೋ ವೈರಲ್ ಆಗಲು ಮುಖ್ಯ ಕಾರಣ ಹರ್ಲೀನ್ ಮಾಡಿದ ಸಣ್ಣ ತಪ್ಪು. ಒಂದು ಸಣ್ಣ ತಪ್ಪಿನಿಂದಾಗಿ ಟೀಮ್ ಇಂಡಿಯಾ ಆಟಗಾರ್ತಿ ಪೆವಿಲಿಯನ್ಗೆ ಮರಳಬೇಕಾಯಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಮಹಿಳಾ ತಂಡ 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 258 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 8ನೇ ಓವರ್ನ ಕೊನೆಯ ಎಸೆತದಲ್ಲಿ ಸ್ಮೃತಿ ಮಂಧಾನ (28) ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ಹರ್ಲೀನ್ ಡಿಯೋಲ್ 44 ಎಸೆತಗಳಲ್ಲಿ 27 ರನ್ ಬಾರಿಸಿದ್ದರು.
ಆದರೆ 22ನೇ ಓವರ್ನ 4ನೇ ಎಸೆತದಲ್ಲಿ ಮಿಡ್ ಆನ್ನತ್ತ ಬಾರಿಸಿದ ಹರ್ಲೀನ್ ಡಿಯೋಲ್ ಒಂದು ರನ್ಗಾಗಿ ಓಡಿದರು. ಅತ್ತ ಕಡೆಯಿಂದ ಫೀಲ್ಡರ್ ಚೆಂಡನ್ನು ವಿಕೆಟ್ನತ್ತ ಎಸೆದರು. ಈ ವೇಳೆಗೆ ಹರ್ಲೀನ್ ಡಿಯೋಲ್ ಕ್ರೀಸ್ ತಲುಪಿದ್ದರು.
ಆದರೆ ಚೆಂಡು ವಿಕೆಟ್ಗೆ ಬಡಿದ ವೇಳೆ ಹರ್ಲೀನ್ ತನ್ನ ಬ್ಯಾಟ್ ಅನ್ನು ಕ್ರೀಸ್ ಒಳಗೆ ಇಟ್ಟಿರಲಿಲ್ಲ. ಅಲ್ಲದೆ ಅವರ ಕಾಲು ಕೂಡ ಗಾಳಿಯಲ್ಲಿತ್ತು. ಪರಿಣಾಮ ಕ್ರೀಸ್ ಒಳಗೆ ತಲುಪಿದರೂ, ಬ್ಯಾಟ್ ಹಾಗೂ ಕಾಲು ಗಾಳಿಯಲ್ಲಿದ್ದ ಕಾರಣ ಹರ್ಲೀನ್ ಡಿಯೋಲ್ ರನೌಟ್ ಆದರು. ಹೀಗೆ ವಿಚಿತ್ರವಾಗಿ ರನೌಟ್ ಆಗುವುದರೊಂದಿಗೆ ಹರ್ಲೀನ್ 27 ರನ್ಗಳಿಗೆ ತನ್ನ ಇನಿಂಗ್ಸ್ ಅಂತ್ಯಗೊಳಿಸಿದರು.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 258 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 48.2 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 262 ರನ್ಗಳಿಸಿ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

