ಕಾಂಗ್ರೆಸ್​ನಲ್ಲಿ ನಡೆಯುತ್ತಿರುವ ಒಳಜಗಳಗಳು ಬೀದಿಗೆ ಬರುವ ದಿನ ದೂರವಿಲ್ಲ: ಜಗದೀಶ್ ಶೆಟ್ಟರ್

|

Updated on: Jan 11, 2025 | 5:27 PM

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅನ್ಯಾಯವಾಗುತ್ತಿದೆ ಅಂತ ಚರ್ಚಿಸಲೂ ನಾವು ಸಭೆ ಸೇರಬಾರದೇ ಅಂತ ರಾಜಣ್ಣ ಹೇಳಿದ್ದು ಹಾಸ್ಯಾಸ್ಪದವಾಗಿದೆ, ಅವರ ಮಾತನ್ನು ಯಾರಾದರೂ ನಂಬಲಾದೀತೆ? ಆ ವಿಷಯವನ್ನು ಅವರು ಹೀಗೆ ಪ್ರತ್ಯೇಕವಾಗಿ ಅಲ್ಲ, ಸಂಪುಟ ಸಭೆಯಲ್ಲಿ ಚರ್ಚಿಸಬೇಕು, ಸಂಪುಟ ಸಭೆಯನ್ನು ಕರೆಯೋದೇ ಸಮಸ್ಯೆಗಳನ್ನು ಚರ್ಚೆ ಮಾಡಲು ಎಂದು ಶೆಟ್ಟರ್ ಹೇಳಿದರು.

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳಗಳಿವೆ, ಸಿದ್ದರಾಮಯ್ಯನವರದ್ದು ಒಂದು ಬಣ ಡಿಕೆ ಶಿವಕುಮಾರ್ ಅವರದ್ದೊಂದು ಬಣ ಅಂತ ಬಹಳ ಮೊದಲೇ ಹೇಳಿದ್ದೆ, ಈಗ ಅದು ಬಯಲಿಗೆ ಬರುತ್ತಿದೆ, ಇದು ಬೀದಿ ರಂಪಾಟಕ್ಕೆ ಹೋದರೂ ಅಚ್ಚರಿಯಿಲ್ಲ ಎಂದು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಹೇಳಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ತನ್ನ ವಿರುದ್ಧ ಏನೋ ಷಡ್ಯಂತ್ರ ನಡೆಯುತ್ತಿದೆ ಅಂತ ಶಿವಕುಮಾರ್​ಗೆ ಮನವರಿಕೆಯಾಗಿದೆ, ಹಾಗಾಗೇ ಅವರು ಜಿ ಪರಮೇಶ್ವರ್ ಕರೆದಿದ್ದ ಡಿನ್ನರ್ ಮೀಟಿಂಗ್ ಗೆ ಬ್ರೇಕ್ ಹಾಕಿದ್ದಾರೆ ಮತ್ತು ತಾವು ಶತ್ರು ಸಂಹಾರ ಯಾಗ ಮಾಡುತ್ತ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಶೆಟ್ಟರ್ ಹೇಳಿದರು. ಒಟ್ಟಿನಲ್ಲಿ ಸರ್ಕಾರದ ಅಂತ್ಯ ಹತ್ತಿರವಾಗಿದೆ ಎಂದು ಸಂಸದ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಭಂಡತನಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ: ಜಗದೀಶ್ ಶೆಟ್ಟರ್ ವಾಗ್ದಾಳಿ