ತುಮಕೂರು: ಸಚಿವ ಸುಧಾಕರ್ ಸಮ್ಮುಖದಲ್ಲೇ ಕಿತ್ತಾಡಿದರು ಬಿಜೆಪಿ ಕಾರ್ಯಕರ್ತರು
ನಾಯಕ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಆ ಸಮುದಾಯದ ಮುಖಂಡರು ವೇದಿಕೆ ಬಳಿ ಹೋಗಿ ಗಲಾಟೆ ನಡೆಸಿದರು.
ತುಮಕೂರು ಜಿಲ್ಲೆ ಶಿರಾ ಪಟ್ಟಣದ ಕಲ್ಯಾಣ ಮಂಟಪವೊಂದರಲ್ಲಿ ಆರೋಗ್ಯ ಸಚಿವ ಕೆ ಸುಧಾಕರ್ (K Sudhakar) ನಾಯತ್ವದಲ್ಲಿ ನಡೆದ ಜನೋತ್ಸವ (Janotsava) ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರ (BJP workers) ನಡುವೆ ಅಸಮಾಧಾನ ಸ್ಫೋಟಗೊಂಡಿದ್ದು ತಡವಾಗಿ ವರದಿಯಾಗಿದೆ. ನಾಯಕ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಆ ಸಮುದಾಯದ ಮುಖಂಡರು ವೇದಿಕೆ ಬಳಿ ಹೋಗಿ ಗಲಾಟೆ ನಡೆಸಿದರು. ಕಲ್ಯಾಣ ಮಂಟಪದಲ್ಲಿ ಗದ್ದಲಮಯ ಸನ್ನಿವೇಶ ಸೃಷ್ಟಿಯಾಗಿರುವುದನ್ನು ವಿಡಿಯೋನಲ್ಲಿ ಕಾಣಬಹುದು.
Latest Videos