Infinix Hot 30 5G: ಬಜೆಟ್ ದರಕ್ಕೆ ಬೆಸ್ಟ್ ಬ್ಯಾಟರಿ ಮತ್ತು ಕ್ಯಾಮೆರಾ ಇನ್ಫಿನಿಕ್ಸ್ ಫೋನ್

|

Updated on: Jul 18, 2023 | 8:48 AM

ಇನ್ಫಿನಿಕ್ಸ್ ಹಾಟ್ 30 5G ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ ಮೂಲಕ ಜುಲೈ 18 ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಸಿಗಲಿದೆ. ಹೆಚ್ಚಿನ ವಿವರ ಇಲ್ಲಿದೆ.

ಚೀನಾ ಮೂಲದ ಪ್ರಮುಖ ಗ್ಯಾಜೆಟ್ ಮತ್ತು ಟೆಕ್ ಕಂಪನಿ ಇನ್ಫಿನಿಕ್ಸ್ ದೇಶದಲ್ಲಿ ಹೊಸ ಇನ್ಫಿನಿಕ್ಸ್ ಹಾಟ್ 30 5G ಸ್ಮಾರ್ಟ್​ಫೋನ್ ರಿಲೀಸ್ ಮಾಡಿದೆ. ಬಜೆಟ್ ಬೆಲೆಯ ಫೋನಾಗಿದ್ದರೂ ಬಲಿಷ್ಠ ಬ್ಯಾಟರಿ, ಆಕರ್ಷಕ ಕ್ಯಾಮೆರಾ, ಪ್ರೊಸೆಸರ್ ನೀಡಲಾಗಿದೆ. ಇನ್ಫಿನಿಕ್ಸ್ ಹಾಟ್ 30 5G ಸ್ಮಾರ್ಟ್​ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇನ್ಫಿನಿಕ್ಸ್ ಹಾಟ್ 30 5G ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ ಮೂಲಕ ಜುಲೈ 18 ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಸಿಗಲಿದೆ. ಹೆಚ್ಚಿನ ವಿವರ ಇಲ್ಲಿದೆ.