ಹುಬ್ಬಳ್ಳಿ ಸ್ಟೈಲ್ ಮೋದಕ ಮಾಡಲು ಈ ಸಾಮಾಗ್ರಿಗಳು ಬೇಕು
ನಾಲಿಗೆಗೆ ಹೆಚ್ಚು ರುಚಿ ನೀಡುವ ಮೋದಕ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಒಂದೊಂದು ಭಾಗದವರು ಒಂದೊಂದು ವಿಧದಲ್ಲಿ ಮೋದಕ ಮಾಡಿ ಸವಿಯುತ್ತಾರೆ.
ಗಣಪತಿಗೆ ಪ್ರಿಯವಾದ ಖಾದ್ಯ ಎಂದರೆ ಅದು ಮೋದಕ. ಹೀಗಾಗಿ ಗಣೇಶ ಚತುರ್ಥಿಯಂದು ಹಲವರ ಮನೆಯಲ್ಲಿ ಮೋದಕ ಮಾಡುತ್ತಾರೆ. ಮೋದಕ ಮಾಡಿ ಗಣಪನಿಗೆ ನೈವೇದ್ಯ ಮಾಡುತ್ತಾರೆ. ಆದರೆ ಕೆಲವರಿಗೆ ಮೋದಕ ಬಗ್ಗೆ ಗೊತ್ತಿಲ್ಲ. ಅದನ್ನು ಹೇಗೆ ತಯಾರು ಮಾಡುತ್ತಾರೆ ಎಂದು ತಿಳಿದಿಲ್ಲ. ನಾಲಿಗೆಗೆ ಹೆಚ್ಚು ರುಚಿ ನೀಡುವ ಮೋದಕ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಒಂದೊಂದು ಭಾಗದವರು ಒಂದೊಂದು ವಿಧದಲ್ಲಿ ಮೋದಕ ಮಾಡಿ ಸವಿಯುತ್ತಾರೆ. ಅದರಂತೆ ಹುಬ್ಬಳ್ಳಿಯಲ್ಲಿ ಮೋದಕವನ್ನು ಹೇಗೆ ಮಾಡುತ್ತಾರೆ ಎಂದು ಇಲ್ಲಿ ತಿಳಿಸಲಾಗಿದೆ.
ಮೋದಕ ಮಾಡಲು ಬೇಕಾಗುವ ಸಾಮಾಗ್ರಿಗಳು ಹೀಗಿವೆ: ಕಡಲೆ ಹಿಟ್ಟು, ತುಪ್ಪ, ಸಕ್ಕರೆ ಪುಡಿ, ದ್ರಾಕ್ಷಿ
ಮೊದಲು ಕಡಲೆ ಹಿಟ್ಟನ್ನು ತುಪ್ಪದೊಂದಿಗೆ ಚೆನ್ನಾಗಿ ಹುರಿಯಬೇಕು. ಹಿಟ್ಟು ಕೆಂಪು ಬಣ್ಣ ಬರುವವರೆಗೆ ಹುರಿಯಬೇಕು. ಹುರಿದ ಕಡಲೆ ಹಿಟ್ಟು ತಣ್ಣಗಾದ ಬಳಿಕ ಅದಕ್ಕೆ ಸಕ್ಕರೆ ಪುಡಿ ಸೇರಿಸಬೇಕು. ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಉಂಡೆ ಕಟ್ಟಬೇಕು. ತಕ್ಷಣ ಮೋದಕ ಮಾಡಬೇಕೆನ್ನುವವರಿಗೆ ಈ ವಿಧಾನ ತುಂಬಾ ಸುಲಭವಿದೆ. ವಿಡಿಯೋದಲ್ಲಿ ಮೋದಕ ಮಾಡುವ ವಿಧಾನವನ್ನು ತಿಳಿಸಲಾಗಿದೆ.
ಇದನ್ನೂ ಓದಿ
Ganesha Chaturthi 2021: ಗಣೇಶೋತ್ಸವದ 10 ದಿನಗಳಲ್ಲಿ ಈ 4 ರಾಶಿಯ ಜನರಿಗೆ ಭಾಗ್ಯದ ಬಾಗಿಲು ತೆರೆದುಕೊಳ್ಳುತ್ತದೆ!
Ganesh Chaturthi 2021 Recipe: ಗಣೇಶ ಹಬ್ಬಕ್ಕೆ ಹಾಸನ ಸ್ಟೈಲ್ ಮೋದಕ ಮಾಡಿ ರುಚಿ ಸವಿಯಿರಿ
(Ingredients of Hubli style Modaka for Ganesh Chaturthi)