Ganesha Chaturthi 2021: ಗಣೇಶೋತ್ಸವದ 10 ದಿನಗಳಲ್ಲಿ ಈ 4 ರಾಶಿಯ ಜನರಿಗೆ ಭಾಗ್ಯದ ಬಾಗಿಲು ತೆರೆದುಕೊಳ್ಳುತ್ತದೆ!
ಗಣೇಶೋತ್ಸವದ 10 ದಿನಗಳಲ್ಲಿ ನಾಲ್ಕು ರಾಶಿಯ ಜನರಿಗೆ ತುಂಬಾ ಅದೃಷ್ಟವಿರುತ್ತದೆ ಅನ್ನುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಬನ್ನೀ ಹಾಗದರೆ ಆ 4 ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
ಭಾದ್ರಪದ ಮಾಸದ ಶುಕ್ಲ ಪಕ್ಷ ಚತುರ್ಥಿ ದಿನವಾದ ನಿನ್ನೆ ಅಂದರೆ ಸೆಪ್ಟೆಂಬರ್ 10 ರಂದು ಗಣೇಶನ ಹಬ್ಬವನ್ನು ಭಕ್ತಿ ಭಾವದಿಂದ ಜನ ಎಲ್ಲೆಡೆ ಆಚರಿಸಿದ್ದಾರೆ. ಗಣೇಶ ಹಬ್ಬ ಸೆಪ್ಟೆಂಬರ್ 19ರಂದು ಪರಿಸಮಾಪ್ತಿಯಾಗುತ್ತದೆ. ಈ 10 ದಿನಗಳಲ್ಲಿ ಗಣೇಶನಿಗೆ ದಿನವೂ ವಿಶಿಷ್ಟವಾಗಿ ಪೂಜಾ ಅರ್ಚನೆಗಳು ನೆರವೇರುತ್ತವೆ. ಭಕ್ತರು ಗಣಪನನ್ನು ಆರಾಧಿಸುತ್ತಾ ತಮ್ಮ ಮನೋಕಾಮನೆಗಳನ್ನು ನೆರವೇರಿಸಿಕೊಳ್ಳುತ್ತಾರೆ. ಈ ಮಧ್ಯೆ, ಈ 10 ದಿನಗಳಲ್ಲಿ ನಾಲ್ಕು ರಾಶಿಯ ಜನರಿಗೆ ತುಂಬಾ ಅದೃಷ್ಟವಿರುತ್ತದೆ ಅನ್ನುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಬನ್ನೀ ಹಾಗದರೆ ಆ 4 ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
1. ವೃಷಭ ರಾಶಿ Taurus: ವೃಷಭ ರಾಶಿಯ ಜನ ತುಂಬಾ ಪರಿಶ್ರಮ ಜೀವಿಗಳು. ಆದರೆ ಇವರಿಗೆ ಸಾಮಾನ್ಯವಾಗಿ ತಮ್ಮ ಶ್ರಮದ ಪ್ರತಿಫಲ ತಕ್ಷಣಕ್ಕೆ ಸಿಗುವುದಿಲ್ಲ. ಆದರೆ ಜಾತಕದ ಪ್ರಕಾರ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ವೃಷಭ ರಾಶಿಯವರಿಗೆ ಪ್ರತಿಫಲಗಳು ರಾಶಿರಾಶಿಯಾಗಿ ಬಂದು ಬೀಳುತ್ತವೆ. ಹಾಗಾಗಿ ವಿಘ್ನನಿವಾರಕ ಗಣಪನ ಹೆಸರಿನಲ್ಲಿ ಈ ರಾಶಿಯವರು ಯಾವುದೇ ಶುಭ ಕೆಲಸಕ್ಕೆ ಕೈಹಾಕಿದರೆ ಅದು ಯಶಸ್ವಿಯಾಗುತ್ತದೆ. ವಿನಾಯಕನ ಕೃಪೆಯಿಂದ ಇವರ ಗ್ರಹಗತಿಗಳು ಇವರಿಗೆ ಪೂರಕವಾಗಿ ಕೆಲಸ ಮಾಡಲಿದ್ದು, ಅದೃಷ್ಟ ಲಕ್ಷ್ಮಿ ಇವರ ಕೈಹಿಡಿಯಲಿದೆ. ವೃಷಭ ರಾಶಿಯವರು ಈ 10 ದಿನ ಯಶೋಮಾರ್ಗದಲ್ಲಿ ಸಾಗಿ, ಭಾರೀ ಯಶಸ್ಸನ್ನು ಕಾಣುವರು.
2. ಮಿಥುನ ರಾಶಿ Gemini: ಇನ್ನು ಮಿಥುನ ರಾಶಿಯವರಿಗೆ ಗಣೇಶೋತ್ಸವ ದಿನ ತುಂಬಾ ಮುಖ್ಯವಾಗಿರುತ್ತದೆ. ಏಕೆಂದರೆ ಗಣೇಶನ ಹಬ್ಬದ ದಿನದಂದು ಇವರ ಮೇಲೆ ಗಣೇಶನ ಕೃಪೆ ವಿಶೇಷವಾಗಿರುತ್ತದೆ. ಇದರ ಪ್ರಯೋಜನ ಪಡೆದುಕೊಂಡು ಯಾವುದೇ ಶುಭ ಕೆಲಸವನ್ನು ಕೈಗೆತ್ತಿಕೊಂಡರೂ ಸಲೀಸಾಗಿ ಅದು ನೆರವೇರುತ್ತದೆ.
3. ಸಿಂಹ ರಾಶಿ Leo: ಸಿಂಹ ರಾಶಿಯ ಜನರಿಗೆ ಗಣೇಶೋತ್ಸವವೆಂದರೆ ಏರಿಳಿತಗಳ ಕಾಲ ಮುಗಿದಿದೆ ಎಂದು ಅರ್ಥ. ಈ ಹತ್ತು ದಿನಗಳು ಸಿಂಹ ರಾಶಿಯವರಿಗೆ ಸುಖ, ನೆಮ್ಮದಿ, ಆರ್ಥಿಕ ಲಾಭಗಳ ಅವಧಿಯಾಗಿರುತ್ತದೆ. ದೀರ್ಘ ಕಾಲದಿಂದಲೂ ಆಗದೇ ಬಾಕಿಯಿರುವ ಕೆಲಸ ಈ ಅವಧಿಯಲ್ಲಿ ಕೈಗೂಡುತ್ತದೆ. ಪರಿಶ್ರಮದ ಪೂರ್ಣ ಫಲ ಪ್ರಾಪ್ತಿಯಾಗುತ್ತದೆ. ಆರ್ಥಿಕ ಸಂಕಷ್ಟಗಳೂ ದೂರವಾಗುತ್ತವೆ.
4. ಕನ್ಯಾ ರಾಶಿ Virgo: ಕೊನೆಯದಾಗಿ ಕನ್ಯಾ ರಾಶಿಯವರಿಗೆ ಈ ಸಮಯದಲ್ಲಿ ಭಾಗ್ಯದ ಬಾಗಿಲು ತೆರೆದುಕೊಳ್ಳುತ್ತದೆ. ಇದರಿಂದ ನಿಮ್ಮ ಮನೋಭೀಷ್ಟೆಗಳೆಲ್ಲವೂ ಪೂರೈಸಲಿದೆ. ಪರೀಕ್ಷೆಗಳನ್ನು ಬರೆಯುವವರಿಗೆ ಈ ಅವಧಿಯಲ್ಲಿ ಹೆಚ್ಚಿನ ಫಲ ಸಿಗುತ್ತದೆ. ಅದೃಷ್ಟವೆಂಬುದು ಇವರ ಕೈಹಿಡಿಯಲಿದೆ. ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ.
Also Read: ಮೃತದೇಹ ಸಾಗಿಸೋಲ್ಲ ಎಂದ ಮ್ಯಾಕ್ಸಿ ಕ್ಯಾಬ್ ಚಾಲಕ, ದಂಡ ಹಾಕಿ ಲಂಚ ಪಡೆದ ಪಿಎಸ್ಐ; ಗುಬ್ಬಿ ಚಾಲಕರ ಮಿಂಚಿನ ಪ್ರತಿಭಟನೆ Also Read: ತುಮಕೂರು ಸಂಸದ ಮತ್ತು ಗುಬ್ಬಿ ಶಾಸಕರ ನಡುವೆ ವಾಕ್ಸಮರ; ಎಂಎಸ್ಎಸ್ ಸ್ಟೇಷನ್ ಉದ್ಘಾಟನೆ ಕಾರ್ಯಕ್ರಮಲ್ಲೇ ಪರಸ್ಪರ ಜಗಳ
(ganesha chaturthi 2021 Trivia luck of 4 zodiac signs will shine 10 days of Ganesha Chaturthi know about yours)