AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರು ಸಂಸದ ಮತ್ತು ಗುಬ್ಬಿ ಶಾಸಕರ ನಡುವೆ ವಾಕ್ಸಮರ; ಎಂಎಸ್ಎಸ್ ಸ್ಟೇಷನ್ ಉದ್ಘಾಟನೆ ಕಾರ್ಯಕ್ರಮಲ್ಲೇ ಪರಸ್ಪರ ಜಗಳ

ನಿನ್ ಯೋಗ್ಯತೆಗಿಷ್ಟು ಬೆಂಕಿ ಹಾಕು. ಸುಳ್ಯಾಕೆ ಬೊಗಳ್ತೀಯಾ, ವಯಸ್ಸಾಗಿದೆ ಈಗಲಾದರೂ ಸುಳ್ಳು ಹೇಳುವುದನ್ನು ನಿಲ್ಲಿಸು ಎಂದು ಸಂಸದ ಬಸವರಾಜು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತುಮಕೂರು ಸಂಸದ ಮತ್ತು ಗುಬ್ಬಿ ಶಾಸಕರ ನಡುವೆ ವಾಕ್ಸಮರ; ಎಂಎಸ್ಎಸ್ ಸ್ಟೇಷನ್ ಉದ್ಘಾಟನೆ ಕಾರ್ಯಕ್ರಮಲ್ಲೇ ಪರಸ್ಪರ ಜಗಳ
ತುಮಕೂರು ಸಂಸದ ಮತ್ತು ಗುಬ್ಬಿ ಶಾಸಕರ ನಡುವೆ ವಾಕ್ಸಮರ
TV9 Web
| Updated By: preethi shettigar|

Updated on:Aug 14, 2021 | 2:03 PM

Share

ತುಮಕೂರು: ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಮತ್ತು ತುಮಕೂರು ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಪರಸ್ಪರ ಜಗಳಕ್ಕಿಳಿದಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಿ‌.ನಂದಿಹಳ್ಳಿಯಲ್ಲಿ ಇಂದು ಬೆಸ್ಕಾಂ(Bescom) ವಿದ್ಯುತ್ ಎಂಎಸ್ಎಸ್ (MSS) ಸ್ಟೇಷನ್ ಉದ್ಘಾಟನೆ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಇಬ್ಬರು ಪರಸ್ಪರ ಕೈ ಕೈ ತೋರಿಸಿಕೊಂಡು ಜಗಳಕ್ಕಿಳಿದಿದ್ದಾರೆ.

ಚೆಕ್ ಡ್ಯಾಂ ನಿರ್ಮಿಸಲು ಕೇಂದ್ರ 500 ಕೋಟಿ ಮೀಸಲಿಟ್ಟಿದೆ ಎಂದು ಕಾರ್ಯಕ್ರಮದಲ್ಲಿ ಸಂಸದ ಜಿ.ಎಸ್.ಬಸವರಾಜು ಹೇಳಿಕೆ ನೀಡಿದ್ದಾರೆ. ಈ ವೇಳೆ ರೊಚ್ಚಿಗೆದ್ದ ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ್ ರೈತರಿಗೆ ಸುಳ್ಳು ಹೇಳ್ತೀಯಾ. ನಿನ್ ಯೋಗ್ಯತೆಗಿಷ್ಟು ಬೆಂಕಿ ಹಾಕು. ಸುಳ್ಯಾಕೆ ಬೊಗಳ್ತೀಯಾ, ವಯಸ್ಸಾಗಿದೆ ಈಗಲಾದರೂ ಸುಳ್ಳು ಹೇಳುವುದನ್ನು ನಿಲ್ಲಿಸು ಎಂದು ಸಂಸದ ಬಸವರಾಜು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಲ್ಲದ ವಿಚಾರವನ್ನು ಮಾತನಾಡಬೇಡ ನೀನು.ಅಯೋಗ್ಯ ನನ್ಮಗ ಎಂದು ನಾಯಕರು ಪರಸ್ಪರ ಜಗಳವಾಡಿಕೊಂಡಿದ್ದಾರೆ. ಈ ವೇಳೆ ಸಂಸದ ಜಿ.ಎಸ್.ಬಸವರಾಜು 550 ಕೋಟಿ ರೂಪಾಯಿ ತಂದಿದ್ದೀವಿ ಎಂದು ಹೇಳಿದ್ದಕ್ಕೆ, ಶಾಸಕ ಎಸ್.ಆರ್.ಶ್ರೀನಿವಾಸ್ 550 ಕೋಟಿ ನಿನ್ನ ತಾತ ತಂದಿದ್ದಾನಾ. 550 ಕೋಟಿ ರೂಪಾಯಿ ಎಲ್ಲಿ ತಂದಿದ್ದೀರಿ ತೋರಿಸಿ ಎಂದು ರೇಗಿದ್ದಾರೆ.

ಇದನ್ನೂ ಓದಿ: ಸಿಟಿ ರವಿ ಕೊಲೆಗಡುಕ; ಕುಡಿದು ಕಾರು ಚಲಾಯಿಸಿ ಇಬ್ಬರನ್ನು ಕೊಂದು ತಲೆಮರೆಸಿಕೊಂಡಿದ್ದ: ಎಂ ಲಕ್ಷ್ಮಣ್ ವಾಗ್ದಾಳಿ

ಜವಾಬ್ದಾರಿ ಮರೆತ ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ವಿಜಯೋತ್ಸವದಲ್ಲಿ ಮುಳುಗಿದ್ದಾರೆ -ಹೆಚ್​ಡಿ ಕುಮಾರಸ್ವಾಮಿ ಟ್ವೀಟ್ ವಾಗ್ದಾಳಿ

Published On - 1:43 pm, Sat, 14 August 21