AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೃತದೇಹ ಸಾಗಿಸೋಲ್ಲ ಎಂದ ಮ್ಯಾಕ್ಸಿ ಕ್ಯಾಬ್ ಚಾಲಕ, ದಂಡ ಹಾಕಿ ಲಂಚ ಪಡೆದ ಪಿಎಸ್ಐ; ಗುಬ್ಬಿ ಚಾಲಕರ ಮಿಂಚಿನ ಪ್ರತಿಭಟನೆ

ಬೇರೆ ದಾರಿ ಇಲ್ಲದೇ ನನ್ನ ಅಕೌಂಟ್​ನಿಂದ ಜೀಪ್ ಡ್ರೈವರ್​ಗೆ ಹಣ ಸಂದಾಯ ಮಾಡಿದ್ದೇನೆ. ಹಣ ಸಂದಾಯ ಆದ್ರೂ ಕ್ಯಾಬ್ ರಿಲೀಸ್ ಮಾಡದ ಪಿಎಸ್​ಐ ಸಂಜೆ ವರೆಗೆ ವಾಹನ ಬಿಡದೇ ಸತಾಯಿಸಿದ್ದಾರೆ ಎಂದು ಚಾಲಕ ಶಕೀಲ್ ಆರೋಪಿಸಿದ್ದಾರೆ.

ಮೃತದೇಹ ಸಾಗಿಸೋಲ್ಲ ಎಂದ ಮ್ಯಾಕ್ಸಿ ಕ್ಯಾಬ್ ಚಾಲಕ, ದಂಡ ಹಾಕಿ ಲಂಚ ಪಡೆದ ಪಿಎಸ್ಐ; ಗುಬ್ಬಿ ಚಾಲಕರ ಮಿಂಚಿನ ಪ್ರತಿಭಟನೆ
ಗುಬ್ಬಿ: ಫೋನ್​​ ಪೇ ಮೂಲಕ ಲಂಚ ಪಡೆದಿದ್ದ ಪಿಎಸ್‌ಐ ಜ್ಞಾನಮೂರ್ತಿ ಗಣೇಶನ ಹಬ್ಬದ ದಿನ ಸಸ್ಪೆಂಡ್​!
TV9 Web
| Updated By: preethi shettigar|

Updated on:Sep 04, 2021 | 11:01 AM

Share

ತುಮಕೂರು: ಮೃತ ದೇಹ ಸಾಗಿಸಲು ಆಗಲ್ಲ ಎಂದ ಮ್ಯಾಕ್ಸಿ ಕ್ಯಾಬ್ ಚಾಲಕನ ಮೇಲೆ ಇಲ್ಲಸಲ್ಲದ ಕೇಸ್ ದಾಖಲಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪಿಎಸ್ಐ ಕ್ಯಾಬ್ ಚಾಲಕನ ಮೇಲೆ ಪ್ರಕರಣ ದಾಖಲಿಸಿದ್ದು, ಚಾಲಕನ ಬಳಿಯೇ ತನ್ನ ಜೀಪ್ ಡ್ರೈವರ್ ಖಾತೆಗೆ ಲಂಚದ ಹಣವನ್ನು ಫೋನ್ ಪೇ ಮಾಡಿಸಿಕೊಂಡಿರುವ ಆರೋಪ ತುಮಕೂರು ಜಿಲ್ಲೆ ಗುಬ್ಬಿ ಪೊಲೀಸರ ಮೇಲೆ ಕೇಳಿ ಬಂದಿದೆ.

ಗುಬ್ಬಿಯ ಎಂ.ಹೆಚ್.ಪಟ್ಟಣದ ಬಳಿ ನಿನ್ನೆ ಅಪಘಾತವಾಗಿ ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಬಳಿಕ ಸ್ಥಳಕ್ಕೆ ತೆರಳಿದ್ದ ಗುಬ್ಬಿ ಪೊಲೀಸ್ ಸಬ್ ಇನ್ಸ್​ಪೆಕ್ಟರ್​ ಜ್ಞಾನಮೂರ್ತಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ನಂತರ ಮೃತದೇಹವನ್ನು ಸಾಗಿಸಲು ಮುಂದಾದ ಪಿಎಸ್​ಐ ಬೆಂಗಳೂರಿನಿಂದ ಚಿಕ್ಕಮಗಳೂರು ಜಿಲ್ಲೆ ತರೀಕೆರೆಗೆ ಹೋಗುತ್ತಿದ್ದ ತರಕಾರಿ ಸಾಗಿಸುವ ಮ್ಯಾಕ್ಸಿ ಕ್ಯಾಬ್​ನ ಚಾಲಕ ಶಕೀಲ್ನ​ನ್ನು ತಡೆದು ಶವವನ್ನು ಸಾಗಿಸುವಂತೆ ತಿಳಿಸಿದ್ದಾರೆ.

ಗುಬ್ಬಿ ಪಿಎಸ್​ಐ ಜ್ಞಾನಮೂರ್ತಿ ಹೇಳಿದ್ದನ್ನು ಒಪ್ಪದ ಶಕೀಲ್, ಗಾಯಾಳು ಗಂಭೀರ ಸ್ಥಿತಿಯಲ್ಲಿ ಇದ್ದಿದರೆ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದೆ. ಆದರೆ, ಶವವನ್ನು ನಾನು ಸಾಗಿಸುವುದಕ್ಕೆ ಆಗಲ್ಲ ಎಂದಿದ್ದಾರೆ. ಕೂಡಲೇ ದರ್ಪ ತೋರಿದ ಪಿಎಸ್​ಐ ಜ್ಞಾನಮೂರ್ತಿ ಮ್ಯಾಕ್ಸಿ ಕ್ಯಾಬ್​ ಅನ್ನು ವಶಕ್ಕೆ ಪಡೆದು ಇಲ್ಲಸಲ್ಲದ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿ, ವಾಹನವನ್ನು ಬಿಡಬೇಕು ಅಂದರೆ ನೂರು ರೂ. ರಶೀದಿ ಪಡೆದು 7 ಸಾವಿರ ರೂಗಳನ್ನು ನನ್ನ ಡ್ರೈವರ್ ಖಾತೆಗೆ ಜಮಾ ಮಾಡು ಎಂದು ಹೇಳಿದ್ದಾರೆ ಎಂದು ಚಾಲಕ ಶಕೀಲ್ ಆರೋಪಿಸಿದ್ದಾರೆ.

protest

ಪೊಲೀಸರ ವಿರುದ್ಧ ಮ್ಯಾಕ್ಸಿ ಕ್ಯಾಬ್ ಚಾಲಕರ ಪ್ರತಿಭಟನೆ

ಬೇರೆ ದಾರಿ ಇಲ್ಲದೇ ನನ್ನ ಅಕೌಂಟ್​ನಿಂದ ಜೀಪ್ ಡ್ರೈವರ್​ಗೆ ಹಣ ಸಂದಾಯ ಮಾಡಿದ್ದೇನೆ. ಹಣ ಸಂದಾಯ ಆದ್ರೂ ಕ್ಯಾಬ್ ರಿಲೀಸ್ ಮಾಡದ ಪಿಎಸ್​ಐ ಸಂಜೆ ವರೆಗೆ ವಾಹನ ಬಿಡದೇ ಸತಾಯಿಸಿದ್ದಾರೆ ಎಂದು ಚಾಲಕ ಶಕೀಲ್ ಆರೋಪಿಸಿದ್ದಾರೆ.

ಸದ್ಯ ಈ ಘಟನೆ ಖಂಡಿಸಿದ ಕ್ಯಾಬ್ ಚಾಲಕರು ಗುಬ್ಬಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ಪಿಎಸ್ಐ ಜ್ಞಾನಮೂರ್ತಿ ವಿರುದ್ಧ ಆರೋಪ ಮಾಡಿದ್ದಾರೆ. ಇನ್ನೂ ಇದೇ ಪಿಎಸ್​ಐ ವಿರುದ್ಧ ಆಗಾಗ ಈ ರೀತಿಯ ಆರೋಪಗಳು ಪದೇ ಪದೇ ಕೇಳಿ ಬರುತ್ತಿವೆ. ಸಾರ್ವಜನಿಕರು ಪಿಎಸ್​ಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ ಎನ್ನುವುದು ಈ ವೇಳೆ ತಿಳಿದುಬಂದಿದೆ.

ಇದನ್ನೂ ಓದಿ: ಸಿಬಿಎಸ್‌ಇ 10ನೇ ತರಗತಿ ಫಲಿತಾಂಶದಲ್ಲಿ ಅಕ್ರಮ ಆರೋಪ; ಶ್ರೀ ಚೈತನ್ಯ ಶಾಲೆ ಬಳಿ ಪೋಷಕರ ಪ್ರತಿಭಟನೆ‌

ಅಗತ್ಯವಸ್ತುಗಳ ಬೆಲೆ ಏರಿಕೆಗೆ ಕಾಂಗ್ರೆಸ್ ಖಂಡನೆ: ರೇಸ್​ಕೋರ್ಸ್​ ರಸ್ತೆ ಬಳಿ ಕಾಂಗ್ರೆಸ್ ಪ್ರತಿಭಟನೆ

Published On - 10:54 am, Sat, 4 September 21