ಯಾವ ರಾಶಿಯವರಿಗೆ ಯಾವ ಬಣ್ಣ ಇಷ್ಟ? ಅದು ಸೂಚಿಸುವುದೇನು?

ಜ್ಯೋತಿಷ್ಯವು ವ್ಯಕ್ತಿಯ ಹಿತಾಸಕ್ತಿಗಳು ಮತ್ತು ಆದ್ಯತೆಗಳನ್ನು ವ್ಯಾಖ್ಯಾನಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಕೆಲವು ವಿಚಾರದಲ್ಲಿ ಬಣ್ಣಗಳೂ ವ್ಯಕ್ತಿಗಳ ಆದ್ಯತೆಗಳನ್ನು ನಿರ್ಧರಿಸುವ ಮಾರ್ಗಗಳಾಗಿ ಕೆಲಸ ಮಾಡುತ್ತವೆ. ಇಂದಿನ ಲೇಖನದಲ್ಲಿ ವೃಷಭ, ಕನ್ಯಾ ಮತ್ತು ಧನು ರಾಶಿಯವರಿಗೆ ನೆಚ್ಚಿನ ಬಣ್ಣಗಳು ಯಾವುವು ಎನ್ನುವುದನ್ನು ನೋಡಬಹುದು.

ಯಾವ ರಾಶಿಯವರಿಗೆ ಯಾವ ಬಣ್ಣ ಇಷ್ಟ? ಅದು ಸೂಚಿಸುವುದೇನು?
ಸಾಂಕೇತಿಕ ಚಿತ್ರ
Follow us
TV9 Web
| Updated By: Skanda

Updated on: Sep 11, 2021 | 6:35 AM

ಬಣ್ಣಗಳೆಂದರೆ ಲವಲವಿಕೆಯ ಸಂಕೇತ. ಬಣ್ಣಗಳನ್ನು ನೋಡುವುದೆಂದರೆ ನಿಜಕ್ಕೂ ಖುಷಿಯಾಗುತ್ತದೆ. ಬಣ್ಣದ ಲೋಕ ಎಷ್ಟೋ ವಿಷಯಗಳನ್ನು ಜೀವಂತಗೊಳಿಸುತ್ತದೆ ಹೀಗಾಗಿಯೇ ಬಣ್ಣಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಬಣ್ಣಗಳನ್ನು ಇಷ್ಟಪಡುವ ಆಧಾರದ ಮೇಲೆ ಆ ವ್ಯಕ್ತಿಯ ಇಷ್ಟ ಕಷ್ಟಗಳನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಸಾಧಾರಣವಾಗಿ ಎಲ್ಲರಿಗೂ ಎಲ್ಲಾ ಬಣ್ಣಗಳು ಇಷ್ಟವಾಗುವುದಿಲ್ಲ. ಒಬ್ಬೊಬ್ಬರು ಅತೀವವಾಗಿ ಪ್ರೀತಿಸುವ ಬಣ್ಣಗಳು ಬೇರೆಯವರಿಗೆ ಏನೆಂದರೇನೂ ಇಷ್ಟವಾಗದೇ ಇರಬಹುದು. ಇದು ಅವರವರ ಆಯ್ಕೆ ಹೌದಾದರೂ ಅದಕ್ಕೂ ರಾಶಿ ಚಕ್ರಕ್ಕೂ ಸಂಬಂಧವಿದೆ ಎಂಬ ನಂಬಿಕೆ ಇದೆ.

ಪ್ರತಿ ರಾಶಿಯೂ, ರಾಶಿಯ ಜನರಿಗೂ ವಿಭಿನ್ನವಾದ ಆದ್ಯತೆಗಳು ಇರುತ್ತವೆ. ಆ ಆಯ್ಕೆ ಆದ್ಯತೆಗಳನ್ನು ಜ್ಯೋತಿಷ್ಯದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಯಾವ ರಾಶಿಯ ಜನರಿಗೆ ಯಾವ ಬಣ್ಣ ಹೆಚ್ಚು ಪ್ರಿಯ ಅದರ ಹಿಂದೆ ಇರುವ ಕಾರಣಗಳೇನು ಎನ್ನುವುದನ್ನು ವಿವರಿಸಲಾಗುತ್ತದೆ. ಈ ವಿಚಾರದಲ್ಲಿ ನಿಮಗೂ ನಂಬಿಕೆ ಇದ್ದರೆ ನಿಮ್ಮ ರಾಶಿ ಹಾಗೂ ನಿಮಗೆ ಸರಿಹೊಂದುವ ಬಣ್ಣದ ಬಗೆಗಿನ ಮಾಹಿತಿಯನ್ನು ಇಲ್ಲಿ ಪಡೆಯಬಹುದು.

ಜ್ಯೋತಿಷ್ಯವು ವ್ಯಕ್ತಿಯ ಹಿತಾಸಕ್ತಿಗಳು ಮತ್ತು ಆದ್ಯತೆಗಳನ್ನು ವ್ಯಾಖ್ಯಾನಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಕೆಲವು ವಿಚಾರದಲ್ಲಿ ಬಣ್ಣಗಳೂ ವ್ಯಕ್ತಿಗಳ ಆದ್ಯತೆಗಳನ್ನು ನಿರ್ಧರಿಸುವ ಮಾರ್ಗಗಳಾಗಿ ಕೆಲಸ ಮಾಡುತ್ತವೆ. ಇಂದಿನ ಲೇಖನದಲ್ಲಿ ವೃಷಭ, ಕನ್ಯಾ ಮತ್ತು ಧನು ರಾಶಿಯವರಿಗೆ ನೆಚ್ಚಿನ ಬಣ್ಣಗಳು ಯಾವುವು ಎನ್ನುವುದನ್ನು ನೋಡಬಹುದು.

ವೃಷಭ ರಾಶಿ

ವೃಷಭ ರಾಶಿಯವರು ಶ್ರೀಮಂತಿಕೆಯನ್ನು ಇಷ್ಟಪಡುತ್ತಾರೆ. ಹೀಗಾಗಿ ಉಳಿದೆಲ್ಲಾ ಬಣ್ಣಗಳಿಗಿಂತ ಅವರನ್ನು ಹೆಚ್ಚು ಆಕರ್ಷಿಸುವುದು ಚಿನ್ನದ ಬಣ್ಣ. ಅವರು ಯಾವಾಗಲೂ ಐಷಾರಾಮಿತನವನ್ನು ಪ್ರೀತಿಸುತ್ತಾರೆ. ಹಾಗಂತ ಅವರು ಅದನ್ನು ತಮ್ಮ ನಡೆವಳಿಕೆಗಳಲ್ಲಾಗಲೀ, ಹಾವಭಾವದಲ್ಲಾಗಲೀ ತೋರಿಸುವುದಿಲ್ಲ.

ಕನ್ಯಾರಾಶಿ

ಕನ್ಯಾ ರಾಶಿಯ ಜನರು ವಸ್ತುಗಳನ್ನು ಸ್ವಚ್ಛವಾಗಿ ಮತ್ತು ಒಪ್ಪ ಓರಣವಾಗಿಡಲು ಬಯಸುತ್ತಾರೆ. ಅವರು ತುಸು ಗಾಢವಾದ ಬಣ್ಣಗಳಿಗೆ ಹೆಚ್ಚು ಆಕರ್ಷಿತರಾಗುವ ಸ್ವಭಾವ ಹೊಂದಿದ್ದು. ಕನ್ಯಾ ರಾಶಿಯ ಹೆಚ್ಚಿನ ಮಂದಿ ಕಪ್ಪು ಬಣ್ಣದ ಬಗ್ಗೆ ಸೆಳೆತ ಹೊಂದಿದವರಾಗಿರುತ್ತಾರೆ. ಹೀಗಾಗಿ ಅವರು ಯಾವಾಗಲೂ ಅದನ್ನು ಹೆಚ್ಚೆಚ್ಚು ಇಷ್ಟಪಡುತ್ತಾರೆ.

ಧನು ರಾಶಿ

ಧನು ರಾಶಿ ಜನರ ವ್ಯಕ್ತಿತ್ವ ಸರಳವಾಗಿರುತ್ತದೆ. ಅವರು ಆಡಂಬರದ ಜೀವನ ಶೈಲಿಯಿಂದ ಕೊಂಚ ದೂರವೇ ಉಳಿಯಲು ಬಯಸುವವರಾಗಿರುತ್ತಾರೆ. ಮುಕ್ತ ಮನೋಭಾವವನ್ನು ಹೊಂದಿದ ಈ ರಾಶಿಯ ಜನರನ್ನು ಹೆಚ್ಚು ಆಕರ್ಷಿಸುವ ಬಣ್ಣ ನೇರಳೆ.

ಇದನ್ನೂ ಓದಿ: ಈ ರಾಶಿಗಳ ಜನರು ವಿವಾಹವಾದರೆ ಹೊಂದಾಣಿಕೆ ಕೂಡಿ ಬರುವುದಿಲ್ಲ; ಯಾವುದು ರಾಶಿಗಳು?

(Taurus Virgo and Sagittarius people with these zodiac signs like these colors know why)

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ