AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನ್-ವೆಜ್ ಶಾವಿಗೆ ಪಾಯಸ ತಿನ್ನಬೇಕಿದ್ದರೆ ಗದಗಿನ ಪರಿಶಿಷ್ಟ ಪಂಗಡ ಬಾಲಕರ ಹಾಸ್ಟೆಲ್​ಗೆ ಭೇಟಿ ನೀಡಿ!

ನಾನ್-ವೆಜ್ ಶಾವಿಗೆ ಪಾಯಸ ತಿನ್ನಬೇಕಿದ್ದರೆ ಗದಗಿನ ಪರಿಶಿಷ್ಟ ಪಂಗಡ ಬಾಲಕರ ಹಾಸ್ಟೆಲ್​ಗೆ ಭೇಟಿ ನೀಡಿ!

TV9 Web
| Edited By: |

Updated on: Jan 29, 2022 | 10:09 PM

Share

ಈ ವಿದ್ಯಾರ್ಥಿಗಳು ಒಂದು ಮಾಡಬಹುದಿತ್ತು. ಅದಿಷ್ಟೂ ಶಾವಿಗೆ ಪಾಯಸವನ್ನು  ಒಂದು ದೊಡ್ಡ ಡಬ್ಬದಲ್ಲಿ ಹಾಕಿಕೊಂಡು ವಾರ್ಡನ್ ಮನೆಗೆ ಒಯ್ದು ಮೊದಲು ಅವನಿಗೆ ನಂತರ ಅವನ ಹೆಂಡತಿ ಮಕ್ಕಳಿಗೆ ತಿನ್ನಿಸಬೇಕಿತ್ತು.

ಗದಗ ಪಟ್ಟಣದ ಪರಿಶಿಷ್ಟ ಪಂಗಡದ ಬಾಲಕರ ವಸತಿ ನಿಲಯದಲ್ಲಿ (Scheduled Tribe hostel) ವಿದ್ಯಾರ್ಥಿಗಳ ಪಾಡು ಪಶುಗಳಿಗಿಂತ ಕೀಳಾಗಿದೆ ಅಂದರೆ ಉತ್ಪ್ರೇಕ್ಷೆ ಅನಿಸದು. ಸದರಿ ಹಾಸ್ಟೆಲ್ನಲ್ಲಿರವ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬೇರೆ ಬೇರೆ ಊರುಗಳಿಂದ ಬಂದಿದ್ದಾರೆ. ಪರಿಶಿಷ್ಟ ಜಾತಿ (Scheduled Caste) ಮತ್ತು ಪರಿಶಿಷ್ಟ ಪಂಗಡ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಸಮುದಾಯಗಳ (community) ಜನರಿಗೆ ಹಲವಾರು ಯೋಜನೆಗಳಿವೆ ಮತ್ತು ಪ್ರತಿಯೊಂದು ಸ್ಕೀಮಿಗೆ ಸರ್ಕಾರದಿಂದ ಬೇಕಾದಷ್ಟು ಅನುದಾನವೂ ಸಿಗುತ್ತದೆ. ಸಮುದಾಯದ ವಿದ್ಯಾರ್ಥಿಗಳಿಗೆ ವಸತಿ ನಿಲಯ, ವಸತಿ ಶಾಲೆಗಳು ಯೋಜನೆಗಳ ಭಾಗ ಆಗಿವೆ. ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವಾರ್ಡನ್ (ಸೂಪರಿಂಟೆಂಡ್ ಅಂತಲೂ ಕರೆಯುತ್ತಾರೆ) (hostel warden) ತನ್ನ ಮನೆಯಿಂದ ಊಟ ಒದಗಿಸುವುದಿಲ್ಲ. ಸರ್ಕಾರವೇ ಎಲ್ಲವನ್ನೂ ಭರಿಸುತ್ತದೆ. ಹೀಗೆ ಹುಳುಗಳಿಂದ ತುಂಬಿರುವ ಪಾಯಸ ವಿದ್ಯಾರ್ಥಿಗಳಿಗೆ ನೀಡಿ ಅಂತ ಯಾವುದಾದರೂ ಸರ್ಕಾರ ಹೇಳುತ್ತದೆಯೇ?

ಸದರಿ ಹಾಸ್ಟೆಲ್ ವಾರ್ಡನ್ ಗೆ ವಿದ್ಯಾರ್ಥಿಗಳೆಂದರೆ ಇಷ್ಟು ಕೇವಲವೇ? ಹುಳುಗಳಿಂದ ತುಂಬಿರುವ ಪಾಯಸ? ವಿದ್ಯಾರ್ಥಿಗಳು ಊಟಕ್ಕಾಗಿ ಪರದಾಡುವ ಸ್ಥಿತಿ ಹಾಸ್ಟೆಲ್ ನಲ್ಲಿದೆ. ಸಮಯಕ್ಕೆ ಸರಿಯಾಗಿ ಊಟ ಅವರಿಗೆ ಸಿಗುವುದಿಲ್ಲ. ಸಿಕ್ಕರೂ ಹೀಗೆ, ನಾಯಿಗಳು ಸಹ ಮುಖ ಸಿಂಡರಿಸಿಕೊಂಡು ದೂರ ಓಡುವ ಶಾವಿಗೆ ಪಾಯಸ.

ಈ ವಿದ್ಯಾರ್ಥಿಗಳು ಒಂದು ಮಾಡಬಹುದಿತ್ತು. ಅದಿಷ್ಟೂ ಶಾವಿಗೆ ಪಾಯಸವನ್ನು  ಒಂದು ದೊಡ್ಡ ಡಬ್ಬದಲ್ಲಿ ಹಾಕಿಕೊಂಡು ವಾರ್ಡನ್ ಮನೆಗೆ ಒಯ್ದು ಮೊದಲು ಅವನಿಗೆ ನಂತರ ಅವನ ಹೆಂಡತಿ ಮಕ್ಕಳಿಗೆ ತಿನ್ನಿಸಬೇಕಿತ್ತು.

ನಿಮಗೆ ಗೊತ್ತಿರಬಹುದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಗಳ ಅಭಿವೃದ್ಧಿ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಹಾಸ್ಟೆಲ್ ವಾರ್ಡನ್ಗಳು ಬಂಗ್ಲೆಗಳನ್ನು ಕಟ್ಟಿಕೊಂಡಿದ್ದಾರೆ! ಹಾಸ್ಟೆಲ್ ಗಳಿಗೆ ಮಂಜೂರಾಗುವ ಕಿರಾಣಾ ಸಾಮಗ್ರಿ, ಹಾಲು-ಮೊಟ್ಟೆ ಮೊದಲಾದವುಗಳ ಕೇವಲ ಅರ್ಧಭಾಗದಷ್ಟು ಮಾತ್ರ ಹಾಸ್ಟೆಲ್ ಸೇರುತ್ತವೆ. ಉಳಿದರ್ಧ ಭಾಗವನ್ನು ವಾರ್ಡನ್ ಗಳು ಮಾರಿಕೊಳ್ಳುತ್ತಾರೆ. ಉತ್ತಮ ಗುಣಮಟ್ಟದ ಅಕ್ಕಿ ಮಾರಿ ಅದರ ಬದಲಿಗೆ ಪಡಿತರ ಯೋಜನೆಯ ಅಕ್ಕಿ ಹಾಸ್ಟೆಲ್ ಗೆ ಒಯ್ಯುವ ವಾರ್ಡನ್ಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

ಹಾಸ್ಟೆಲ್​ಗಳಲಿದ್ದು ಓದುವ ಮಕ್ಕಳ ವಿದ್ಯಾರ್ಥಿ ಜೀವನದಲ್ಲಿ ಆಹಾರದ ಸಮಸ್ಯೆಯಾಗಬಾರದು ಅನ್ನುವ ಕಾಳಜಿ ಸರ್ಕಾರಕ್ಕಿದ್ದರೆ ಕೂಡಲೇ ಈ ದಿಶೆಯಲ್ಲಿ ಕೆಲ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.

ಇದನ್ನೂ ಓದಿ:   ಪ್ರವಾಸಿಗನನ್ನು ಪ್ರೀತಿಯಿಂದ ಅಪ್ಪಿಕೊಂಡ ಕೋತಿ; ಮೆಕ್ಸಿಕೋದಲ್ಲೊಂದು ಹೃದಯಸ್ಪರ್ಶಿ ಘಟನೆ : ವಿಡಿಯೋ ವೈರಲ್​