ಬಳ್ಳಾರಿ ದೇವರಾಜ ಅರಸು ಹಿಂದುಳಿದ ವರ್ಗಗಳ ಹಾಸ್ಟೆಲ್​ನಲ್ಲಿ ಅರೆಬೆಂದ, ಅಶುಚಿ ಆಹಾರ; ರೊಚ್ಚಿಗೆದ್ದ ವಿದ್ಯಾರ್ಥಿಗಳು

|

Updated on: Feb 15, 2024 | 10:53 AM

ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್ ಸಿ ಮಹಾದೇವಪ್ಪನವರು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರಳಿನಂತೆ ಅವರ ಹಿಂದೆ ಸುತ್ತುವುದನ್ನು ಬಿಟ್ಟು ರಾಜ್ಯದ ಹಾಸ್ಟೆಲ್ ಗಳಲ್ಲಿ ಏನು ನಡೆಯುತ್ತಿದೆ, ಮಕ್ಕಳಿಗೆ ಊಟ-ತಿಂಡಿ ಸಿಗುತ್ತಿದೆಯಾ, ಶೌಚಾಲಯಗಳು ಓರಣವಾಗಿವೆಯಾ ಮೊದಲಾದ ಸಂಗತಿಗಳ ಕಡೆ ಗಮನ ಹರಿಸಬೇಕು. ಸಚಿವನಾಗಿ ಒಂದು ವರ್ಷ ಕಳೆಯುತ್ತಾ ಬಂದಿದೆ, ಈ ಅವಧಿಯಲ್ಲಿ ಅವರು ತಮ್ಮ ಇಲಾಖೆಗೆ ಸಂಬಂಧಿಸಿದ ಹೇಳಿಕೆಗಳನ್ನು ನೀಡಿರುವುದು ಕನ್ನಡಿಗರು ಗಮನಿಸಿಲ್ಲ.

ಬಳ್ಳಾರಿ: ನಗರದ ತಾಳೂರು ರಸ್ತೆಯಲ್ಲಿರುವ ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ (Devaraj Urs Backward classes hostel) ಮೆಟ್ರಿಕ್ ನಂತರ ಬಾಲಕರ ಹಾಸ್ಟೆಲ್ ನಲ್ಲಿರುವ ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಳೆದ ಹಲವಾರು ತಿಂಗಳುಗಳಿಂದ ಸರಿಯಾಗಿ ಬೆಂದ, ತಿನ್ನಲು ಯೋಗ್ಯ ಮತ್ತು ಶುಚಿರುಚಿಯಾದ ಊಟ (edible food) ಸಿಗುತ್ತಿಲ್ಲ. ಟಿವಿ9 ಕನ್ನಡ ವಾಹಿನಿಯೊಂದಿಗೆ ತಮ್ಮ ಸಮಸ್ಯೆ ಹೇಳಿಕೊಂಡಿರುವ ವಿದ್ಯಾರ್ಥಿಗಳು ಹಾಸ್ಟೆಲ್ ಅಡುಗೆ ಸಿಬ್ಬಂದಿಯ (cooking staff) ನಿರ್ಲಕ್ಷ್ಯ ಮತ್ತು ಉಡಾಫೆ ಮನೋಭಾವದಿಂದ ವಿದ್ಯಾರ್ಥಿಗಳು ಅರೆಬೆಂದ ಮತ್ತು ಆರೋಗ್ಯಕ್ಕೆ ಹಾನಿಯುಂಟು ಮಾಡುವ ಆಹಾರ ಸೇವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳುತ್ತಾರೆ. ವಿದ್ಯಾರ್ಥಿಗಳ ಪ್ರಕಾರ ವಿದ್ಯಾರ್ಥಿ ನಿಲಯಕ್ಕೆ ಆಹಾರ ಪದಾರ್ಥ, ದಿನಸಿಗಳ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಿಲ್ಲ ಅದರೆ ಇಲ್ಲಿರುವ ಅಡುಗೆ ಸಿಬ್ಬಂದಿಯಿಂದ ತೊಂದರೆ ಎದುರಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್ ಸಿ ಮಹಾದೇವಪ್ಪನವರು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರಳಿನಂತೆ ಅವರ ಹಿಂದೆ ಸುತ್ತುವುದನ್ನು ಬಿಟ್ಟು ರಾಜ್ಯದ ಹಾಸ್ಟೆಲ್ ಗಳಲ್ಲಿ ಏನು ನಡೆಯುತ್ತಿದೆ, ಮಕ್ಕಳಿಗೆ ಊಟ-ತಿಂಡಿ ಸಿಗುತ್ತಿದೆಯಾ, ಶೌಚಾಲಯಗಳು ಓರಣವಾಗಿವೆಯಾ ಮೊದಲಾದ ಸಂಗತಿಗಳ ಕಡೆ ಗಮನ ಹರಿಸಬೇಕು. ಸಚಿವನಾಗಿ ಒಂದು ವರ್ಷ ಕಳೆಯುತ್ತಾ ಬಂದಿದೆ, ಈ ಅವಧಿಯಲ್ಲಿ ಅವರು ತಮ್ಮ ಇಲಾಖೆಗೆ ಸಂಬಂಧಿಸಿದ ಹೇಳಿಕೆಗಳನ್ನು ನೀಡಿರುವುದು ಕನ್ನಡಿಗರು ಗಮನಿಸಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on