ದರ್ಶನ್ ಬರ್ತ್​ಡೇ ಸಂದರ್ಭದಲ್ಲಿ ಬೆನ್ನಿಗೆ ‘ಕಾಟೇರ’ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ

ದರ್ಶನ್ ಬರ್ತ್​ಡೇ ಸಂದರ್ಭದಲ್ಲಿ ಬೆನ್ನಿಗೆ ‘ಕಾಟೇರ’ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ

ರಾಜೇಶ್ ದುಗ್ಗುಮನೆ
|

Updated on:Feb 15, 2024 | 2:48 PM

ಅಭಿಮಾನಿಗಳು ದರ್ಶನ್ ಬರ್ತ್​ಡೇನ ವಿಶೇಷವಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗ ದರ್ಶನ್ ಅಭಿಮಾನಿಯೋರ್ವ ‘ಕಾಟೇರ’ ಸಿನಿಮಾದಲ್ಲಿ ಬರೋ ದರ್ಶನ್ ಲುಕ್​ನ ಟ್ಯಾಟೂ ಆಗಿ ಹಾಕಿಸಿಕೊಂಡಿದ್ದಾರೆ. ಅಭಿಷೇಕ್ ಎಂಬುವವರು ಬೆನ್ನಿನ ಮೇಲೆ ಈ ಟ್ಯಾಟೂ ಬಿಡಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಫೆಬ್ರವರಿ 16ರರಂದು ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ದರ್ಶನ್ ಬರ್ತ್​ಡೇನ ವಿಶೇಷವಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗ ದರ್ಶನ್ ಅಭಿಮಾನಿಯೋರ್ವ ‘ಕಾಟೇರ’ ಸಿನಿಮಾದಲ್ಲಿ ಬರೋ ದರ್ಶನ್ (Darshan) ಲುಕ್​ನ ಟ್ಯಾಟೂ ಆಗಿ ಹಾಕಿಸಿಕೊಂಡಿದ್ದಾರೆ. ಅಭಿಷೇಕ್ ಎಂಬುವವರು ಬೆನ್ನಿನ ಮೇಲೆ ಈ ಟ್ಯಾಟೂ ಬಿಡಿಸಿಕೊಂಡಿದ್ದಾರೆ. ಸದ್ಯ ಈ ಟ್ಯಾಟೂ ಗಮನ ಸೆಳೆಯುತ್ತಿದೆ. ಇದು ದರ್ಶನ್ ಮೇಲಿನ ಪ್ರೀತಿಯನ್ನು ತೋರಿಸಿದೆ. ದರ್ಶನ್ ನಟನೆಯ ‘ಕಾಟೇರ’ ಚಿತ್ರ ಇತ್ತೀಚೆಗೆ ರಿಲೀಸ್ ಆಗಿ 200+ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈಗ ಸಿನಿಮಾ ಒಟಿಟಿಯಲ್ಲೂ ರಿಲೀಸ್ ಆಗಿದ್ದು, ಮೆಚ್ಚುಗೆ ಪಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Feb 15, 2024 11:12 AM