‘ನಾನು ಯಾವ ವಿಷಯದಲ್ಲೂ ಚೀಟ್ ಮಾಡಿಲ್ಲ’; ಯಶ್ ಹೀಗೆ ಹೇಳಿದ್ದು ಏಕೆ?

‘ನಾನು ಯಾವ ವಿಷಯದಲ್ಲೂ ಚೀಟ್ ಮಾಡಿಲ್ಲ’; ಯಶ್ ಹೀಗೆ ಹೇಳಿದ್ದು ಏಕೆ?

ರಾಜೇಶ್ ದುಗ್ಗುಮನೆ
|

Updated on: Feb 15, 2024 | 8:13 AM

ಯಶ್ ಅವರು ಇತ್ತೀಚೆಗೆ ತಮ್ಮ ಜಿಮ್ ಟ್ರೇನರ್ ಕಿಟ್ಟಿ ಹೊಸ ಜಿಮ್ ಉದ್ಘಾಟನೆಗೆ ಆಗಮಿಸಿದರು. ಆಗ ಯಶ್ ಮಾಧ್ಯಮದ ಜೊತೆ ಮಾತಾನಡಿದ್ದಾರೆ. ಆಗ ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ. ಯಶ್ ಅವರು ಸ್ಟ್ರಿಕ್ಟ್ ಡಯಟ್ ಫಾಲೋ ಮಾಡುತ್ತಾರೆ. ಈಗಲೂ ಅದು ಮುಂದುವರಿದಿದೆ.

ಯಶ್ ಅವರು ಸಖತ್ ಬ್ಯುಸಿ ಇದ್ದಾರೆ. ಇದಕ್ಕೆ ಕಾರಣ ಆಗಿದ್ದು ‘ಟಾಕ್ಸಿಕ್’ ಸಿನಿಮಾದ (Toxic Movie) ಕೆಲಸಗಳು. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಶೂಟಿಂಗ್ ಶೀಘ್ರವೇ ಆರಂಭ ಆಗಲಿದೆ. ಇತ್ತೀಚೆಗೆ ಅವರು ತಮ್ಮ ಜಿಮ್ ಟ್ರೇನರ್ ಕಿಟ್ಟಿ ಅವರ ಹೊಸ ಜಿಮ್ ಉದ್ಘಾಟನೆಗೆ ಆಗಮಿಸಿದರು. ಆಗ ಯಶ್ ಮಾಧ್ಯಮದ ಜೊತೆ ಮಾತಿಗೆ ಸಿಕ್ಕರು. ಆಗ ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ. ಯಶ್ ಅವರು ಸ್ಟ್ರಿಕ್ಟ್ ಡಯಟ್ ಫಾಲೋ ಮಾಡುತ್ತಾರೆ. ಈಗಲೂ ಅದು ಮುಂದುವರಿದಿದೆಯೇ ಅಥವಾ ಚೀಟ್ ಡೇ ಇರುತ್ತದೆಯೇ ಎಂದು ಕೇಳಲಾಯಿತು. ಇದಕ್ಕೆ ಅವರು ಉತ್ತರಿಸಿದ್ದಾರೆ. ‘ನಾನು ಯಾವುದೇ ವಿಷಯದಲ್ಲೂ ಚೀಟ್ ಮಾಡಲ್ಲ. ಮಾಡೋದಾದರೆ ಹೇಳಿಯೇ ಮಾಡೋದು’ ಎಂದರು ಯಶ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ