ಜಮೀರ್ಗೆ ತಾಕತ್ತಿದ್ರೆ ರಾಜಕೀಯದ ಬಗ್ಗೆ ಮಾತಾಡಲಿ, ಕರಿಯ, ಬಿಳಿಯ ಬೇಡ: ಬಸನಗೌಡ ಯತ್ನಾಳ್
ಚನ್ನಪಟ್ಟಣದ ಉಪ ಚುನಾವಣೆಯ ಬಗ್ಗೆ ಮಾತಾಡಲಿಚ್ಛಿಸದ ಯತ್ನಾಳ್, ಯೋಗೇಶ್ವರ್ ಬಿಜೆಪಿಯಲ್ಲಿದ್ದಾಗ ಟಿಕೆಟ್ ನೀಡಬೇಕೆಂದು ಹೇಳಿದ್ದು ಸತ್ಯ, ತಾನು ಪ್ರಚಾರಕ್ಕೆ ಹೋಗಿಲ್ಲ, ತಾನು ಸ್ಟಾರ್ ಪ್ರಚಾರಕ ಅಲ್ಲ, ಯಡಿಯೂರಪ್ಪ ಮತ್ತು ವಿಜಯೇಂದ್ರ ಪ್ರಚಾರ ಮಾಡಿದ್ದಾರೆ, ಫಲಿತಾಂಶದ ಬಗ್ಗೆ ಅವರನ್ನೇ ಕೇಳಿ ಎಂದು ಹೇಳಿದರು.
ಹುಬ್ಬಳ್ಳಿ: ಕುಮಾರಸ್ವಾಮಿ ವಿರುದ್ಧ ಜನಾಂಗೀಯ ನಿಂದನೆ ಮಾಡಿದ ಜಮೀರ್ ಅಹ್ಮದ್ರನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತರಾಟೆಗೆ ತೆಗೆದುಕೊಂಡರು. ರಾಜಕೀಯದಲ್ಲಿ ವೈಯಕ್ತಿಕ ಟೀಕೆ ಮಾಡಬಾರದು, ಯಾರನ್ನೇ ಆಗಲಿ ಕರಿಯ ಬಿಳಿಯ ಅಂತ ಕರೆಯೋದು ಸರಿಯಲ್ಲ, ಜಮೀರ್ಗೆ ಧಮ್ಮಿದ್ರೆ ತಾನು ವಕ್ಫ್ ಭೂಮಿ ಹೆಸರಲ್ಲಿ 2 ಲಕ್ಷ ಎಕರೆ ಭೂಮಿಯನ್ನು ಲೂಟಿ ಹೊಡೆಯುತ್ತಿರುವ ವಿಷಯದ ಬಗ್ಗೆ ಮಾತಾಡಲಿ, ಇಡೀ ರಾಜ್ಯಕ್ಕೆ ಅವನು ಬೆಂಕಿ ಹಚ್ಚಿದ್ದಾನೆ ಎಂದು ಯತ್ನಾಳ್ ಹೇಳಿದರು.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷನನ್ನು ಬದಲಾಯಿಸುವ ಚರ್ಚೆ ಮುಂದೆ ಶುರುವಾಗಲಿದೆ: ಬಸನಗೌಡ ಪಾಟೀಲ್ ಯತ್ನಾಳ್
Latest Videos