ಪ್ರತಾಪ್ ಸಿಂಹರನ್ನು ಕಡೆಗಣಿಸಿ ನಮ್ಮಲ್ಲಿ ಒಡಕು ತರುವ ಹುನ್ನಾರ ಅಪ್ಪ ಮತ್ತು ಮಗ ನಡೆಸಿದ್ದಾರೆ: ಯತ್ನಾಳ್
ಅಪ್ಪ ಮಗನಿಗೆ ವಕ್ಫ್ ಭೂವಿವಾದ ಬಗ್ಗೆ ಚಿಂತೆಯಿಲ್ಲ, ವಕ್ಫ್ ಕಾಯ್ದೆಗೆ ತಿದ್ದುಪಡಿಯಾಗದಿದ್ದರೆ ಇಡೀ ಭಾರತ ತಮ್ಮದು ಎಂದು ಮುಸಲ್ಮಾನರು ಹೇಳುತ್ತಾರೆ, ತಂದೆ ಮಗನ ಕುತಂತ್ರವಿಲ್ಲದೆ ಹೋಗಿದ್ದರೆ ರಾಜ್ಯದಲ್ಲಿ ಬಿಜೆಪಿಗೆ 25 ಸೀಟು ಸಿಗುತ್ತಿದ್ದವು ಮತ್ತು ಕಾಯ್ದೆ ಪಾಸ್ ಮಾಡಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಯಾವುದೇ ತೊಂದರೆಯಾಗುತ್ತಿರಲಿಲ್ಲ ಎಂದು ಯತ್ನಾಳ್ ಹೇಳಿದರು.
ಹುಬ್ಬಳ್ಳಿ: ನಗರದಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಪ್ರತ್ಯೇಕವಾಗಿ ಮಾತಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ , ತಮ್ಮ ತಂಡದಲ್ಲಿ ಒಡಕು ತರುವ ಹುನ್ನಾರವನ್ನು ಯಡಿಯೂರಪ್ಪ ಮತ್ತು ವಿಜಯೇಂದ್ರ ಮಾಡುತ್ತಿದ್ದಾರೆ, ಮೊದಲಿಗೆ ಇಬ್ಬರೂ ಸೇರಿ ಪ್ರತಾಪ್ ಅವರಿಗೆ ಟಿಕೆಟ್ ತಪ್ಪಿಸಿದರು, ದಾವಣಗೆರೆಯ ಜಿಎಂ ಸಿದ್ದೇಶ್ವರ್ ಅವರಿಂದ ಯಡಿಯೂರಪಪ್ಪ ಅಪಾರವಾಗಿ ಸಹಾಯ ಪಡೆದಿದ್ದರೂ ಅವರಿಗೆ ಟಿಕೆಟ್ ತಪ್ಪಿಸಿದರು, ವಿಜಯಪುರದಲ್ಲಿ ತನ್ನನ್ನು ಮತ್ತು ಧಾರವಾಡದಲ್ಲಿ ಪ್ರಲ್ಹ್ಹಾದ್ ಜೋಶಿಯವರನ್ನು ಸೋಲಿಸುವ ಪ್ರಯತ್ನ ಮಾಡಿದರು, ಜನರಿಗೆ ದ್ರೋಹ ಬಗೆಯುವುದು ವಿಜಯೇಂದ್ರಗೆ ರಕ್ತಗತವಾಗಿ ಬಂದಿದೆ ಎಂದರು.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜಮೀರ್ಗೆ ತಾಕತ್ತಿದ್ರೆ ರಾಜಕೀಯದ ಬಗ್ಗೆ ಮಾತಾಡಲಿ, ಕರಿಯ, ಬಿಳಿಯ ಬೇಡ: ಬಸನಗೌಡ ಯತ್ನಾಳ್
Latest Videos