ಧಾರವಾಡ: ಧಾರ್ಮಿಕ ಧ್ವಜದ ಕೆಳಗೆ ರಾಷ್ಟ್ರಧ್ವಜ ಅಳವಡಿಕೆ ಮಾಡಿ ಅಪಮಾನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 02, 2024 | 4:39 PM

ಧಾರವಾಡದಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಲಾಗಿದ್ದು, ನಗರದ ರೀಗಲ್ ಸರ್ಕಲ್​ನಲ್ಲಿ ಈದ್ ಮಿಲಾದ್ ಧ್ಬಜದ ಕೆಳಗೆ ರಾಷ್ಟ್ರ ಧ್ವಜ ಅಳವಡಿಸಲಾಗಿದೆ. ಹೌದು, ಈದ್ ಮಿಲಾದ್ ವೇಳೆ ಹಾಕಲಾಗಿದ್ದ ಧಾರ್ಮಿಕ ಧ್ವಜ ಇದಾಗಿದ್ದು, ಅದರ ಕೆಳಗೆ ಇಂದು ರಾಷ್ಟ್ರ ಧ್ವಜ ಅಳವಡಿಸಿ ಗಾಂಧಿ ಜಯಂತಿ ಆಚರಿಸಲಾಗಿದೆ.

ಧಾರವಾಡ, ಅ.02: ಧಾರವಾಡದಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಲಾಗಿದ್ದು, ನಗರದ ರೀಗಲ್ ಸರ್ಕಲ್​ನಲ್ಲಿ ಈದ್ ಮಿಲಾದ್ ಧ್ಬಜದ ಕೆಳಗೆ ರಾಷ್ಟ್ರ ಧ್ವಜ ಅಳವಡಿಸಲಾಗಿದೆ. ಹೌದು, ಈದ್ ಮಿಲಾದ್ ವೇಳೆ ಹಾಕಲಾಗಿದ್ದ ಧಾರ್ಮಿಕ ಧ್ವಜ ಇದಾಗಿದ್ದು, ಅದರ ಕೆಳಗೆ ಇಂದು ರಾಷ್ಟ್ರ ಧ್ವಜ ಅಳವಡಿಸಿ ಗಾಂಧಿ ಜಯಂತಿ ಆಚರಿಸಲಾಗಿದೆ. ರಾಷ್ಟ್ರ ಧ್ವಜದ ಮೇಲೆ ಯಾವುದೇ ಧ್ವಜ ಇರಬಾರದೆಂಬ ನಿಯಮವಿದ್ದರೂ ನಿಯಮ ಪಾಲಿಸಿದೇ ಅಗೌರವ ತೋರಿದ ಆರೋಪ ಕೇಳಿಬಂದಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭಜರಂಗ ದಳ ಕಾರ್ಯಕರ್ತರು ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನಲೆ ಕೂಡಲೇ  ಧಾರ್ಮಿಕ ಧ್ವಜವನ್ನು ತೆರವು ಮಾಡಿದ್ದಾರೆ. ಇನ್ನು ಈ ಕುರಿತು ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ಭಜರಂಗ ದಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 02, 2024 04:04 PM