ನೀವು ಇಷ್ಟಪಡುವವರನ್ನು ಒಲಿಸಿಕೊಳ್ಳುವುದು ಕಷ್ಟವಾಗುತ್ತಿದೆಯೇ? ಡಾ ಸೌಜನ್ಯ ವಶಿಷ್ಠ ಕೆಲ ಟಿಪ್ಸ್ ನೀಡಿದ್ದಾರೆ, ಓದಿಕೊಳ್ಳಿ!

ಮಹಿಳೆಯರು ಕೆಂಪು ಉಡುಗೆ ತೊಟ್ಟರೆ ಅದು ಪ್ರೀತಿಯ ಸಂಕೇತ, ಯಾಕೆಂದರೆ ಲವ್ ಅನ್ನು ಪ್ರತಿನಿಧಿಸುವ ಬಣ್ಣವೇ ಕೆಂಪು. ನಿಮಗೆ ಇಷ್ಟವಾದವರನ್ನು ಇಂಪ್ರೆಸ್ ಮಾಡಲು ಕೆಂಪುಡುಗೆ ಸಹಾಯ ಮಾಡುತ್ತದೆ ಎಂದು ಡಾ ಸೌಜನ್ಯ ಹೇಳುತ್ತಾರೆ.

TV9kannada Web Team

| Edited By: shivaprasad.hs

Dec 14, 2021 | 7:21 AM

ಗಂಡು ಹೆಣ್ಣಿನ ನಡುವಿನ ಆಕರ್ಷಣೆ ಸ್ವಾಭಾವಿಕ ಮತ್ತು ನೈಸರ್ಗಿಕ. ನಮಗೆ ಇಷ್ಟವಾಗುವವರನ್ನು ಮೆಚ್ಚಿಸಲು ನಾವು ಪ್ರಯತ್ನಿಸುತ್ತೇವೆ. ಕೆಲವು ಸಲ ಈಕ್ವೇಶನ್ಗಳು ಸರಿಯಾಗಿರುವುದಿಲ್ಲ, ನಾವೇ ಎಷ್ಟೇ ಪ್ರಯತ್ನಪಟ್ಟರೂ ನಮಗೆ ಇಷ್ಟವಾಗುವವರು ಸೊಪ್ಪು ಹಾಕುವುದಿಲ್ಲ. ಹಾಗಾದರೆ ಅಂಥವರನ್ನು ಹೇಗೆ ಒಲಿಸಿಕೊಳ್ಳಬೇಕು ಅನ್ನೋದನ್ನು ಡಾ ಸೌಜನ್ಯ ವಶಿಷ್ಠ ಅವರು ಮನಶಾಸ್ತ್ರದ ಆಧಾರದಲ್ಲಿ ಕೆಲವು ಟಿಪ್ಸ್ ನೀಡಿದ್ದಾರೆ. ಪ್ರೀತಿಗೆ ಹಲವು ರೂಪಗಳಿರುತ್ತವೆ. ನಮ್ಮ ದೇಹದಲ್ಲಿ ಸೃಷ್ಟಿಯಾಗುವ ವಾಸನೆ (ಫೆರೊಮೋನ್ಸ್) ಬೇರೆಯವರಿಗೆ ನಮ್ಮ ಬಗ್ಗೆ ಪ್ರೀತಿ ಹುಟ್ಟಲು ನೆರವಾಗುತ್ತವೆ ಎಂದು ಸೌಜನ್ಯ ಹೇಳುತ್ತಾರೆ. ಹಾಗಾಗೇ, ನಾವು ಯಾವಾಗಲೂ ಸ್ವಚ್ಛವಾಗಿರುವುದು ಬಹಳ ಮುಖ್ಯ ಎಂದು ಅವರು ಹೇಳುತ್ತಾರೆ. ದಿನಕ್ಕೆರಡು ಬಾರಿ ಸ್ನಾನ ಮಾಡುವುದು ಒಳ್ಳೆಯದು. ದಿನವಿಡೀ ದುಡಿದ ನಂತರ ಮೈಯೆಲ್ಲ ಬೆವತು, ನಾವು ಮನೆ ಸೇರುವ ಹೊತ್ತಿಗೆ ಹೊರಗಿನ ಧೂಳು ನಮ್ಮ ದೇಹದ ಮೇಲೆ ಶೇಖರಣೆಗೊಂಡಿರುತ್ತದೆ. ಹಾಗಾಗಿ ಕೆಲಸ ಮುಗಿಸಿಕೊಂಡು ಮನೆಗೆ ಬಂದ ನಂತರ ಸ್ನಾನ ಮಾಡಿದರೆ, ನಮ್ಮ ದೇಹ ಹಗುರವಾಗಿ ಮನಸ್ಸು ಪ್ರಫುಲ್ಲಗೊಳ್ಳುತ್ತದೆ ಹಾಗೂ ನಮ್ಮಲ್ಲಿನ ತಾಜಾತನ ಬೇರೆಯವರನ್ನು ಆಕರ್ಷಿಸಿತ್ತದೆ ಎಂದು ಡಾ ಸೌಜನ್ಯ ಹೇಳುತ್ತಾರೆ.

ನಾವು ಆಕರ್ಷಿಸಲು ಇಚ್ಛಿಸುವವರೊಂದಿಗೆ ಯಾವಾಗಲೂ ಐ ಕಂಟ್ಯಾಕ್ಟ್ ಇಟ್ಟುಕೊಂಡು ಮಾತಾಡಿದರೆ ಅದರಿಂದ ಸಲುಗೆ ಬೆಳೆದು ಅವರು ನಮಗೆ ಹತ್ತಿರವಾಗತೊಡಗುತ್ತಾರೆ. ಅವರೊಂದಿಗೆ ಮಾತಾಡುವಾಗ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಮಾತಾಡಿ ಎಂದು ಸೌಜನ್ಯ ಹೇಳುತ್ತಾರೆ.

ಮಹಿಳೆಯರು ಕೆಂಪು ಉಡುಗೆ ತೊಟ್ಟರೆ ಅದು ಪ್ರೀತಿಯ ಸಂಕೇತ, ಯಾಕೆಂದರೆ ಲವ್ ಅನ್ನು ಪ್ರತಿನಿಧಿಸುವ ಬಣ್ಣವೇ ಕೆಂಪು. ನಿಮಗೆ ಇಷ್ಟವಾದವರನ್ನು ಇಂಪ್ರೆಸ್ ಮಾಡಲು ಕೆಂಪುಡುಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳುತ್ತಾರೆ.

ಇಂಪ್ರೆಶನ್ ಜತಾಯಿಸುವ ಸಂದರ್ಭದಲ್ಲಿ ಬೇರೆಯವರ ಬಗ್ಗೆ ಕೆಟ್ಟ ಮಾತುಗಳನ್ನಾಡಬಾರದು, ಗಾಸಿಪ್ಪಿಂಗ್ ಮಾಡಲೇಬಾರದು. ಅದು ನಿಮ್ಮ ವ್ಯಕ್ತಿತ್ವವದ ಬಗ್ಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ. ಹಾಗೆಯೇ, ದಯಾಳುತನ ಬೇರೆಯವರಿಗೆ ಬಹಳ ಇಷ್ಟವಾಗುವ ಗುಣ, ಅದನ್ನು ಹೊಂದಿರುವುದು ಮುಖ್ಯ ಎಂದು ಡಾ ಸೌಜನ್ಯ ಹೇಳುತ್ತಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಬುದ್ಧಿವಂತಿಕೆ ಎಲ್ಲರನ್ನು ಇಂಪ್ರೆಸ್ ಮಾಡುತ್ತದೆ. ಸಾಧಾರಣ ರೂಪಿನವರ ಸೌಂದರ್ಯವನ್ನು ಅವರಲ್ಲಿರುವ ಬುದ್ಧಿವಂತಿಕೆ ಹೆಚ್ಚಿಸುತ್ತದೆ. ಬುದ್ಧಿವಂತಿಕೆಯ ಜೊತೆಗೆ ಕ್ರಿಯಾಶೀಲತೆಯೂ ಇರಬೇಕೆಂದು ಡಾ ಸೌಜನ್ಯ ಹೇಳುತ್ತಾರೆ. ಸೋಂಬೇರಿಗಳನ್ನು ಯಾರೂ ಇಷ್ಟಪಡುವುದಿಲ್ಲ. ನೀವು ಬುದ್ಧಿವಂತರಾಗಿದ್ದರೂ ಆಲಸಿಗಳಾಗಿದ್ದರೆ, ಅದು ಸಹಾಯವಾಗಲಾರದು ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ:  Shocking Video: ತನಗೆ ಮತ ಹಾಕದ ಯುವಕರಿಗೆ ಬಸ್ಕಿ ಹೊಡೆಸಿ, ಎಂಜಲು ನೆಕ್ಕಿಸಿದ ರಾಜಕಾರಣಿ; ಶಾಕಿಂಗ್ ವಿಡಿಯೋ ಇಲ್ಲಿದೆ

Follow us on

Click on your DTH Provider to Add TV9 Kannada