International Yoga Day 2023: ವಿಧಾನಸೌಧ ಮುಂಭಾಗ ಸಚಿವರಿಂದ ಯೋಗ, ವಿಡಿಯೋ ನೋಡಿ

|

Updated on: Jun 21, 2023 | 9:11 AM

ವಿಧಾನಸೌಧ ಮುಂಭಾಗ ಆಯುಷ್ ಇಲಾಖೆ ವತಿಯಿಂದ ಇಂದು 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಣೆ ಮಾಡಲಾಯ್ತು.

ಬೆಂಗಳೂರು: ವಿಧಾನಸೌಧ ಮುಂಭಾಗ ಆಯುಷ್ ಇಲಾಖೆ ವತಿಯಿಂದ ಇಂದು 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಣೆ ಮಾಡಲಾಯ್ತು. ರಾಜ್ಯಪಾಲ ಗೆಹ್ಲೋಟ್​​​​​ ಅವರು ಯೋಗ ದಿನಾಚರಣೆಗೆ ಚಾಲನೆ ನೀಡಿದ್ದು, ವಿವಿಧ ಸಂಘಸಂಸ್ಥೆಗಳ ಸದಸ್ಯರು ಸಾಮೂಹಿಕ ಯೋಗ ಪ್ರದರ್ಶನ ಮಾಡಿದರು. ಇನ್ನು ಯೋಗ ಕಾರ್ಯಕ್ರಮದಲ್ಲಿ ಸಚಿವ ದಿನೇಶ್ ಗುಂಡೂರಾವ್​​​, ಸ್ಪೀಕರ್ ಯು.ಟಿ.ಖಾದರ್, ಮಾಜಿ ಕ್ರಿಕೆಟರ್ ವೆಂಕಟೇಶ್​ ಪ್ರಸಾದ್, ಜೆಡಿಎಸ್​ ನಾಯಕ ಶರವಣ ಸೇರಿ ಹಲವು ಗಣ್ಯರು ಯೋಗ ಮಾಡಿದರು.