ಗದಗ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಅಸ್ಪತ್ರೆಗೆ ಬರಲಾರದಷ್ಟು ಬ್ಯೂಸಿ, ಇಂಟರ್ನ್​ಗಳೇ ಪೂರ್ಣಾವಧಿ ವೈದ್ಯರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 16, 2022 | 1:35 PM

ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಜಿಮ್ಸ್ ನ ಎಲ್ಲ ವಿಭಾಗಗಳ ಒಪಿಡಿಗಳಲ್ಲಿ ಇಂಟರ್ನ್​ಗಳೇ ರೋಗಿಗಳ ತಪಾಸಣೆ ನಡೆಸುತ್ತಾರೆ. ಆರೋಗ್ಯ ಸಚಿವರು ದಯವಿಟ್ಟು ಗಮನ ಹರಿಸಬೇಕು.

ಗದಗ ಜಿಲ್ಲಾಸ್ಪತ್ರೆಯಲ್ಲಿ (ಜಿಮ್ಸ್) (Gadag Institute of Medical Sciences) ಕೆಲಸ ಮಾಡುವ ವೈದ್ಯಾಧಿಕಾರಿಗಳಿಗೆ (medical officer) ತಿಂಗಳ ಕೊನೆಯಲ್ಲಿ ಸಂಬಳ ಪಡೆಯಲು ಪ್ರತಿನಿತ್ಯ ಹಾಸ್ಪಿಟಲ್ ಹೋಗಿ ರೋಗಿಗಳ ತಪಾಸಣೆ (checkup) ಮಾಡಿ ಅವರಿಗೆ ವೈದ್ಯಕೀಯ ಸಲಹೆ ನೀಡಬೇಕು ಅಂತೇನಿಲ್ಲ. ಅದೇ ಸಮಯವನ್ನು ಅವರು ಖಾಸಗಿ ಪ್ರ್ಯಾಕ್ಟೀಸ್ ನಲ್ಲಿ ತೊಡಗಿಸಿಕೊಂಡರೆ ಬೇಕಾದಷ್ಟು ಹಣ ಗಳಿಸಬಹುದು. ಖಾಸಗಿ ಪ್ರ್ಯಾಕ್ಟೀಸ್ ಮತ್ತು ಸರ್ಕಾರದ ಸಂಬಳ-ಅಂದರೆ ದುಪ್ಟಟ್ಟು ಆದಾಯ! ಈ ವಿಡಿಯೋ ನೋಡಿ, ಜಿಮ್ಸ್ನಲ್ಲಿ ಮೆಡಿಕೊಗಳು ರೋಗಿಗಲ ತಪಸಣೆ ನಡೆಸಿ ಪ್ರಿಸ್ಕ್ರಿಪ್ಶನ್ ನೀಡುತ್ತಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಜಿಮ್ಸ್ ನ ಎಲ್ಲ ವಿಭಾಗಗಳ ಒಪಿಡಿಗಳಲ್ಲಿ ಇಂಟರ್ನ್​ಗಳೇ ರೋಗಿಗಳ ತಪಾಸಣೆ ನಡೆಸುತ್ತಾರೆ. ಆರೋಗ್ಯ ಸಚಿವರು ದಯವಿಟ್ಟು ಗಮನ ಹರಿಸಬೇಕು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.