ಐಫೋನ್ 13 ಡಿಸ್ಪ್ಲೇ ಟಚ್ ಐಡಿ ಫಿಂಗರ್ ಪ್ರಿಂಟ್ನೊಂದಿಗೆ ಲಾಂಚ್ ಆಗುವ ಸಾಧ್ಯತೆ ಕಡಿಮೆ ಎಂದ ಬ್ಲೂಮ್ಬರ್ಗ್
ಪವರ್ ಆನ್ ಎಂಬ ತನ್ನ ನ್ಯೂಸ್ಲೆಟರ್ನಲ್ಲಿ ಬ್ಲೂಮ್‌ಬರ್ಗ್‌ನ ಮಾರ್ಕ್ ಗುರ್ಮನ್ ಅವರು ಐಫೋನ್ 13 ಇನ್-ಡಿಸ್ಪ್ಲೇ ಟಚ್ ಐಡಿಯೊಂದಿಗೆ ಬರುವ ಆಪಲ್‌ನ ಮೊದಲ ಐಫೋನ್ ಎಂಬ ವದಂತಿಯನ್ನು ತಳ್ಳಿಹಾಕಿದರು.
ಹೊಸ ಐಫೋನ್ 13 ಡಿಸ್ಪ್ಲೇ ಅಡಿ ಟಚ್ ಐಡಿ ಫಿಂಗರ್ ಪ್ರಿಂಟ್ನೊಂದಿಗೆ ಬರಲಿದೆ ಎಂಬ ನಿರೀಕ್ಷೆ ಌಪಲ್ ಐಫೋನ್ಗಳ ಬಗ್ಗೆ ಅತೀವ ಕುತೂಹಲ ಉಳ್ಳವರಲ್ಲಿತ್ತು. ಅದರೆ ಅವರು ಇನ್ನಷ್ಟು ದಿನ ಕಾಯಬೇಕು. ಬ್ಲೂಮ್ಬರ್ಗ್ ಪ್ರಕಾರ ವಿಳಂಬಕ್ಕೆ ಕಾರಣವೆಂದರೆ, ಐಫೋನ್ ಉತ್ಪಾದಕ ಸಂಸ್ಥೆಯು ನಿಸ್ಸಂದೇಹವಾಗಿ, ತನ್ನ ಮುಂದಿನ ಮಾಡೆಲ್ ಐಪೋನ್ಗೆ ಇನ್-ಡಿಸ್ಪ್ಲೇ ಟಚ್ ಐಡಿ ಟೆಕ್ನಾಲಜಿಯ ಪರೀಕ್ಷೆ ನಡೆಸಿದೆಯಾದರೂ, ಮುಂದಿನ ವರ್ಷದವರೆಗೆ ಅದನ್ನು ಅಳವಡಿಸಿಕೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದೆ. ಅಷ್ಟಾಗಿಯೂ, ಌಪಲ್ ಸಂಸ್ಥೆಯು, ಸೆಟ್ ಅನ್ನು ಅನ್ಲಾಕ್ ಮಾಡಲು ಒಂದು ಸುಧಾರಿತ ತಂತ್ರಜ್ಞಾನದೊಂದಿಗೆ ಐಪೋನ್ ಲಾಂಚ್ ಮಾಡುವ ದೀರ್ಘಕಾಲಿಕ ಗುರಿ ಹೊಂದಿದೆ ಎಂದು ಬ್ಲೂಮ್ಬರ್ಗ್ ಹೇಳಿದೆ.
ಪವರ್ ಆನ್ ಎಂಬ ತನ್ನ ನ್ಯೂಸ್ಲೆಟರ್ನಲ್ಲಿ ಬ್ಲೂಮ್‌ಬರ್ಗ್‌ನ ಮಾರ್ಕ್ ಗುರ್ಮನ್ ಅವರು ಐಫೋನ್ 13 ಇನ್-ಡಿಸ್ಪ್ಲೇ ಟಚ್ ಐಡಿಯೊಂದಿಗೆ ಬರುವ ಆಪಲ್‌ನ ಮೊದಲ ಐಫೋನ್ ಎಂಬ ವದಂತಿಯನ್ನು ತಳ್ಳಿಹಾಕಿದರು.
ಐಫೋನ್ 13 ತನ್ನ ಈ ಮೊದಲ ಮಾಡೆಲ್ಗಳಂತೆಯೇ ಫೇಸ್ ಐಡಿ ಅನ್‌ಲಾಕಿಂಗ್ ವ್ಯವಸ್ಥೆಯೊಂದಿಗೆ ಬರುವ ಸಾಧ್ಯತೆಯಿದೆ. ಐಫೋನ್ 13 ಡಿಸ್ಪ್ಲೇ ಅಡಿಯಲ್ಲಿ ಆಪಲ್ ಟಚ್ ಐಡಿಯನ್ನು ತರುವ ಸಾಧ್ಯತೆಯಿದೆ ಎಂದು ಈ ಹಿಂದೆ ಹೇಳಿದ್ದ ಬಾರ್ಕ್ಲೇಸ್ ವರದಿಗೆ ಇದು ತದ್ವಿರುದ್ಧವಾಗಿದೆ. ಆದಾಗ್ಯೂ, ಸದರಿ ತಂತ್ರಜ್ಞಾನವನ್ನು ಅಳವಡಿಸಲು ಆಪಲ್ ಹಿಂಜರಿಯುತ್ತಿದೆ ಅರ್ಥೈಸಬೇಕಿಲ್ಲ ಎಂದು ಗುರ್ಮನ್ ಹೇಳಿದ್ದಾರೆ.
‘ಮುಂದಿನ ಫ್ಲ್ಯಾಗ್‌ಶಿಪ್ ಐಫೋನ್‌ಗಳಿಗಾಗಿ ಆಪಲ್ ಸ್ಕ್ರೀನ್ ಟಚ್ ಐಡಿಯನ್ನು ಪರೀಕ್ಷಣೆ ಮಾಡಿದ್ದರೂ, ಅದು ಈ ವರ್ಷ ಅದನ್ನು ಸಂಸ್ಥೆ ಲಾಂಚ್ ಮಾಡುವುದಿಲ್ಲ, ಎಂದು ಗುರ್ಮನ್ ಹೇಳಿದ್ದಾರೆ.
ಇದನ್ನೂ ಓದಿ: Shocking Video: ಪೊಲೀಸ್ ಎದುರೇ ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ; ವಿಡಿಯೋ ವೈರಲ್