SRH vs DC: ಡೆಲ್ಲಿ ವಿರುದ್ಧ ಅಬ್ಬರಿಸಿದ ಅಭಿಷೇಕ್; ಸ್ಫೋಟಕ ಅರ್ಧಶತಕ
Abhishek Sharma's Blazing Fifty: ಐಪಿಎಲ್ 2026 ರ 31ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಹೈದರಾಬಾದ್‌ನಲ್ಲಿ ಮುಖಾಮುಖಿಯಾಗಿವೆ. ಬೌಲಿಂಗ್ ಸ್ನೇಹಿ ಪಿಚ್ನಲ್ಲಿ ಆರಂಭಿಕ ಅಭಿಷೇಕ್ ಶರ್ಮಾ 25 ಎಸೆತಗಳಲ್ಲಿ ಅರ್ಧಶತಕ ಗಳಿಸಿ ತಂಡಕ್ಕೆ ನೆರವಾದರು. ಟ್ರಾವಿಸ್ ಹೆಡ್ ಅವರೊಂದಿಗೆ 97 ರನ್‌ಗಳ ಜೊತೆಯಾಟದ ಮೂಲಕ ಸನ್‌ರೈಸರ್ಸ್‌ಗೆ ಉತ್ತಮ ಅಡಿಪಾಯ ಹಾಕಿದರು, ಪಂದ್ಯದ ಗತಿಯನ್ನು ಬದಲಾಯಿಸಿದರು.
ಐಪಿಎಲ್ 2026 ರ 31 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ದೆಹಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಆರಂಭಿಕ ಅಭಿಷೇಕ್ ಶರ್ಮಾ ಮತ್ತೆ ನೆರವಾಗಿದ್ದಾರೆ. ಬೌಲಿಂಗ್ ಸ್ನೇಹಿ ಪಿಚ್ನಲ್ಲಿ ನಿಧಾನಗತಿಯ ಆರಂಭ ಪಡೆದುಕೊಂಡ ಅಭಿಷೇಕ್ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಈ ಪಂದ್ಯದಲ್ಲಿ ಸನ್‌ರೈಸರ್ಸ್‌ಗೆ ಸ್ಫೋಟಕ ಆರಂಭ ಸಿಗಲಿಲ್ಲ. ಮೊದಲ 6 ಓವರ್ಗಳಲ್ಲಿ ಸನ್‌ರೈಸರ್ಸ್ ತಂಡ 67 ರನ್ ಮಾತ್ರ ಕಲೆಹಾಕಿತು. ಆದರೆ ತಂಡ ಒಂದೇ ಒಂದು ವಿಕೆಟ್ ಕಳೆದುಕೊಂಡಿರಲಿಲ್ಲ. ಆದಾಗ್ಯೂ ಇಲ್ಲಿಂದ ಗೇರ್ ಬದಲಿಸಿದ ಅಭಿಷೇಕ್ 25 ಎಸೆತಗಳಲ್ಲಿ ಈ ಆವೃತ್ತಿಯ ಮೂರನೇ ಅರ್ಧಶತಕವನ್ನು ಪೂರೈಸಿದರು. ಇದರ ಜೊತೆಗೆ ಹೆಡ್ ಅವರೊಂದಿಗೆ ಮೊದಲ ವಿಕೆಟ್ಗೆ 97 ರನ್‌ಗಳ ಜೊತೆಯಾಟವನ್ನು ರಚಿಸಿದರು.
ಕಾನ್ಸ್ಟೇಬಲ್ ಜತೆ ಎಂಗೇಜ್ಮೆಂಟ್ ಆಗಿ ಮೂರೇ ತಿಂಗಳಿಗೆ ಯುವತಿ ದುರಂತ ಸಾವು
ತ್ರಿಶಾ ಜತೆ ಮೈತ್ರಿ ಮಾಡಿಕೊಂಡು ದಳಪತಿ ವಿಜಯ್ ಗೆದ್ದರು: ರಿಷಿಕಾ ಸಿಂಗ್
ಐಪಿಎಲ್ನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್ಮನ್ ಪ್ರಿಯಾಂಶ್ ಆರ್ಯ
ಬೆಂಗಳೂರಿಗರಿಗೆ ಬಂಪರ್ ಕೊಡುಗೆ: ಡಿಕೆ ಶಿವಕುಮಾರ್ ಮಹತ್ವದ ಘೋಷಣೆ

