AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs SRH: ಈ ಅತ್ಯದ್ಭುತ ಕ್ಯಾಚ್ ಹಿಡಿದ ಸಾಲ್ಟ್​ಗೊಂದು ಸಲಾಂ ಹೊಡೆಯಲೇಬೇಕು

RCB vs SRH: ಈ ಅತ್ಯದ್ಭುತ ಕ್ಯಾಚ್ ಹಿಡಿದ ಸಾಲ್ಟ್​ಗೊಂದು ಸಲಾಂ ಹೊಡೆಯಲೇಬೇಕು

ಪೃಥ್ವಿಶಂಕರ
|

Updated on: Mar 28, 2026 | 10:17 PM

Share

Phil Salt's IPL 2026 Heroics: ಐಪಿಎಲ್ 2026 ರ ಮೊದಲ ಪಂದ್ಯದಲ್ಲಿ ಫಿಲ್ ಸಾಲ್ಟ್ ಆರ್​ಸಿಬಿ ಪರ ಅದ್ಭುತ ಫೀಲ್ಡಿಂಗ್ ಪ್ರದರ್ಶಿಸಿದರು. ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲಿ ಮೂರು ನಿರ್ಣಾಯಕ ಕ್ಯಾಚ್‌ಗಳನ್ನು ಹಿಡಿದು, ಅದರಲ್ಲೂ ವಿಶೇಷವಾಗಿ ಹೆನ್ರಿಕ್ ಕ್ಲಾಸೆನ್ ಅವರ ವಿಕೆಟ್ ಪಡೆದರು. ಕ್ಲಾಸೆನ್ ಕ್ಯಾಚ್ ವಿವಾದಾತ್ಮಕವಾಗಿದ್ದರೂ, ಸಾಲ್ಟ್ ಚಾಣಾಕ್ಷತೆ ಎಸ್‌ಆರ್‌ಎಚ್ ರನ್ ವೇಗಕ್ಕೆ ಕಡಿವಾಣ ಹಾಕಿತು.

ಐಪಿಎಲ್ 2026 ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆರ್​ಸಿಬಿ ಆಟಗಾರ ಫಿಲ್ ಸಾಲ್ಟ್ ತಮ್ಮ ಅಮೋಘ ಫಿಲ್ಡಿಂಗ್ ಪ್ರದರ್ಶನದ ಮೂಲಕ ಮೊದಲ ಪಂದ್ಯವನ್ನೇ ರೋಮಾಂಚನಗೊಳಿಸಿದರು. ಒಂದಲ್ಲ, ಎರಡಲ್ಲ.. ಈ ಪಂದ್ಯದಲ್ಲಿ ಸಾಲ್ಟ್ ಹಿಡಿದಿದ್ದು ಬರೋಬ್ಬರಿ 3 ಕ್ಯಾಚ್​ಗಳು. ಈ ಮೂರು ಕ್ಯಾಚ್​ಗಳು ಅಷ್ಟು ಸುಲಭದ ತುತ್ತಾಗಿರಲಿಲ್ಲ. ಹಾಗಿದ್ದರೂ ಫಿಲ್ ಸಾಲ್ಟ್ ಈ ಮೂರು ಕ್ಯಾಚ್ಗಳನ್ನು ಹಿಡಿದು ಎಸ್​ಆರ್​ಎಚ್ ರನ್​ ವೇಗಕ್ಕೆ ಕಡಿವಾಣ ಹಾಕಿದರು.

ಅದರಲ್ಲೂ ನಾಯಕ ಇಶಾನ್ ಕಿಶನ್ ಜೊತೆಗೂಡಿ ನಾಲ್ಕನೇ ವಿಕೆಟ್‌ಗೆ 53 ಎಸೆತಗಳಲ್ಲಿ 97 ರನ್‌ಗಳ ಪಾಲುದಾರಿಕೆಯನ್ನು ನಿರ್ಮಿಸಿದ್ದ ಸ್ಫೋಟಕ ದಾಂಡಿಗ ಹೆನ್ರಿಕ್ ಕ್ಲಾಸೆನ್ ಅವರ ವಿಕೆಟ್ ಉರುಳಿಸುವಲ್ಲಿ ಸಾಲ್ಟ್ ಅವರ ಚಾಣಾಕ್ಷತನದ ಫಿಲ್ಡಿಂಗ್ ಎಲ್ಲರ ಗಮನ ಸೆಳೆಯಿತು. 22 ಎಸೆತಗಳಲ್ಲಿ 31 ರನ್ ಬಾರಿಸಿ ತಾಳ್ಮೆಯ ಇನ್ನಿಂಗ್ಸ್ ಕಟ್ಟಲಾರಂಭಿಸಿದ ಕ್ಲಾಸೆನ್ ದೊಡ್ಡ ಇನ್ನಿಂಗ್ಸ್ ಆಡುವ ಸುಳಿವು ನೀಡಿದ್ದರು. ಇದಕ್ಕೆ ಪೂರಕವಾಗಿ ಕಿಶನ್ ಹಾಗೂ ಕ್ಲಾಸೆನ್ ಜೋಡಿ 13 ಓವರ್‌ಗಳಲ್ಲಿ ತಂಡವನ್ನು 126 ರನ್‌ಗಳ ಗಡಿ ದಾಟಿಸಿದ್ದರು. ಆದ್ದರಿಂದ, ಈ ಜೋಡಿ ಮುರಿಯದಿದ್ದರೆ, ಅದು 250 ರನ್‌ಗಳಾಗಬಹುದೆಂಬ ಭಯವಿತ್ತು. ಆದಾಗ್ಯೂ 14 ನೇ ಓವರ್‌ನಲ್ಲಿ ಈ ಜೋಡಿಯ ಜೊತೆಯಾಟ ಮುರಿದುಬಿತ್ತು. ಅದು ಸಾಲ್ಟ್ ಅವರ ಫಿಲ್ಡಿಂಗ್​ನಿಂದ.

14 ನೇ ಓವರ್ ಬೌಲ್ ಮಾಡಲು ಬಂದ ರೊಮಾರಿಯೊ ಶೆಫರ್ಡ್‌ ಅವರ ಮೊದಲ ಎಸೆತದಲ್ಲೇ ಹೆನ್ರಿಕ್ ಕ್ಲಾಸೆನ್ ಭರ್ಜರಿ ಸಿಕ್ಸರ್‌ ಹೊಡೆಯಲು ಪ್ರಯತ್ನಿಸಿದರು. ಆದರೆ ಬೌಂಡರಿ ಲೈನ್ ಬಳಿ ನಿಂತಿದ್ದ ಫಿಲ್ ಸಾಲ್ಟ್ ಅದ್ಭುತ ಕ್ಯಾಚ್ ಪಡೆದರು. ಆದರೆ ಕ್ಯಾಚ್ ಹಿಡಿಯುವ ಯತ್ನದಲ್ಲಿ ನಿಯಂತ್ರಣ ಕಳೆದುಕೊಂಡರು. ಹೀಗಾಗಿ ಕ್ಯಾಚ್ ಪಡೆದ ಬಳಿಕ ಸಾಲ್ಟ್ ನೆಲಕ್ಕುರುಳಿದರು. ಇದರಿಂದ ಕ್ಯಾಚ್ ಪೂರ್ಣಗೊಂಡಿದೆಯೇ ಎಂಬುದನ್ನು ತಿಳಿದುಕೊಳ್ಳಲು ಫಿಲ್ಡ್ ಅಂಪೈರ್, ಮೂರನೇ ಅಂಪೈರ್​ನ ಮೊರೆ ಹೋದರು.

ಕುಲಂಕುಶವಾಗಿ ಪರಿಶೀಲಿಸಿದ ಮೂರನೇ ಅಂಪೈರ್ ಫೇರ್ ಕ್ಯಾಚ್ ಎಂಬ ತೀರ್ಪು ನೀಡಿದರು. ಆದಾಗ್ಯೂ ಅಂಪೈರ್ ಅವರ ಈ ನಿರ್ಧಾರ ಎಸ್​ಆರ್​ಎಚ್ ಪಾಳಾಯದಲ್ಲಿ ಅಸಮಾಧಾನ ಮೂಡಿಸಿತು. ಏಕೆಂದರೆ ಸಾಲ್ಟ್ ಅವರ ದೇಹ ಬೌಂಡರಿ ಗೆರೆಗೆ ತಾಗಿದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಹೀಗಾಗಿ ಕ್ಲಾಸೆನ್ ಕೂಡ ನಾಲ್ಕನೇ ಅಂಪೈರ್ ಬಳಿ ಈ ಬಗ್ಗೆ ಚರ್ಚೆ ನಡೆಸಿದರಾದರೂ ಅದರಿಂದ ಯಾವ ಪ್ರಯೋಜನವೂ ಸಿಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us