ಮಧ್ಯಪ್ರದೇಶದ ಈ ಯುವ ಪೊಲೀಸ್ ಅಧಿಕಾರಿ ತಮ್ಮ ಫಿಟ್ನೆಸ್ ಮತ್ತು ಲುಕ್ಸ್ ನಿಂದ ಜನಪ್ರಿಯರಾಗುತ್ತಿದ್ದಾರೆ!

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ್ ಸಚಿನ್ ವಾರದಲ್ಲಿ 5-6 ದಿನ ವ್ಯಾಯಾಮ ಮಾಡುತ್ತಾರೆ. ದೇಹದ ಎಲ್ಲಾ ಭಾಗಗಳನ್ನು ಅವರು ತಮ್ಮ ರಿಜೀಮ್ ನಲ್ಲಿ ದಂಡಿಸುತ್ತಾರೆ. ಇದಲ್ಲದೆ, ಅವರು ಯೋಗ ಮತ್ತು ಧ್ಯಾನವನ್ನು ಮಾಡುತ್ತಾರೆ

TV9kannada Web Team

| Edited By: Arun Belly

Dec 31, 2021 | 6:34 PM

ತಮ್ಮ ದಕ್ಷತೆ, ಕಾರ್ಯಕ್ಷಮತೆ ಮೂಲಕ ಜನಪ್ರಿಯರಾಗಿರುವ ಹಲವಾರು ಪೊಲೀಸ್ ಅಧಿಕಾರಿಗಳು ನಮ್ಮ ದೇಶದಲ್ಲಿ ಇದ್ದಾರೆ. ಕೇವಲ ತಮ್ಮ ಹೆಸರು ಕೇಳಿದರೆ ಸಾಕು ಅಪರಾಧಿಗಳಲ್ಲಿ ನಡುಕ ಹುಟ್ಟುವಂತೆ ಮಾಡುವ ಟಫ್ ಕಾಪ್ ಗಳೂ ಭಾರತದಲ್ಲಿದ್ದಾರೆ. ಆದರೆ, ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಎಸಿಪಿಯಾಗಿರುವ ಸಚಿನ್ ಅತುಲ್ಕರ್ ಐಪಿಎಸ್ ಬೇರೆ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಭೋಪಾಲ್ ನಗರದ ಎಸಿಪಿಯಾಗುವ ಮೊದಲು ಅವರು ಆ ರಾಜ್ಯದ ಅತ್ಯಂತ ಕಿರಿವಯಸ್ಸಿನ ಡಿಐಜಿ ಎನಿಸಿಕೊಂಡಿದ್ದರು. ಸಚಿನ್ ಅತುಲ್ಕರ್ ಪೊಲೀಸ್ ಇಲಾಖೆಯಲ್ಲಿ ಬಹಳ ಚಿರಪರಿಚಿತ ಹೆಸರು. ಅವರು ತಮ್ಮ ಕೆಲಸ ಮತ್ತು ಫಿಟ್ನೆಸ್ಗೆ ಹೆಸರುವಾಸಿಯಾಗಿದ್ದಾರೆ. ಅವರ ಫ್ಯಾನ್ ಫಾಲೋಯಿಂಗ್ ಬಹಳ ದೊಡ್ಡದು ಮಾರಾಯ್ರೇ.

ಉತ್ತಮ ಬಾಡಿ ಬಿಲ್ಡರ್ ಎನಿಸಿಕೊಂಡವರು ಸಹ ಸಚಿನ್ ಅವರ ಫಿಟ್ ನೆಸ್ ಮುಂದೆ ಪೇಲವ ಅನಿಸುತ್ತಾರೆ. ಉತ್ತಮ ದೇಹದಾರ್ಢ್ಯದೊಂದಿಗೆ ಅವರ ಲುಕ್ಸ್ ಕೂಡ ಹೆಂಗಳೆಯರ ಗಮನ ಸೆಳೆಯುತ್ತವೆ. ಅವರ ಫಿಟ್‌ನೆಸ್‌ನ ಮಂತ್ರವೆಂದರೆ ಆಹಾರಕ್ರಮ ಮತ್ತು ವ್ಯಾಯಾಮ. ಸಚಿನ್ ಪ್ರತಿದಿನ 1-2 ಗಂಟೆಗಳ ಕಾಲ ಜಿಮ್‌ನಲ್ಲಿ ಬೆವರು ಸುರಿಸುತ್ತಾರೆ.

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ್ ಸಚಿನ್ ವಾರದಲ್ಲಿ 5-6 ದಿನ ವ್ಯಾಯಾಮ ಮಾಡುತ್ತಾರೆ. ದೇಹದ ಎಲ್ಲಾ ಭಾಗಗಳನ್ನು ಅವರು ತಮ್ಮ ರಿಜೀಮ್ ನಲ್ಲಿ ದಂಡಿಸುತ್ತಾರೆ. ಇದಲ್ಲದೆ, ಅವರು ಯೋಗ ಮತ್ತು ಧ್ಯಾನವನ್ನು ಮಾಡುತ್ತಾರೆ, ಮನಸ್ಸನ್ನು ಶಾಂತವಾಗಿಡಲು ಇವು ಸಹಾಯ ಮಾಡುತ್ತವೆ ಎಂದು ಅವರು ಹೇಳುತ್ತಾರೆ.

ಸಚಿನ್ ವಾರದ ಮೊದಲ ದಿನವನ್ನು ಎದೆ ಮತ್ತು ಟ್ರೈಸ್ಪ್ಸ್ (ಎದೆ ಮತ್ತು ಹಿಂಭಾಗದ ತೋಳು) ವ್ಯಾಯಾಮಗಳೊಂದಿಗೆ ಪ್ರಾರಂಭಿಸುತ್ತಾರೆ, ಇದು 7-8 ಬಗೆಯ ವ್ಯಾಯಾಮಗಳನ್ನು ಒಳಗೊಂಡಿದೆ. ಎರಡನೇ ದಿನ, ಅವರು ಬೆನ್ನು ಮತ್ತು ಬೈಸೆಪ್ಸ್ (ಬೆನ್ನು ಮತ್ತು ತೋಳುಗಳು) ವ್ಯಾಯಾಮ ಮಾಡುತ್ತಾರೆ, ಮತ್ತು ಭಾರಿ ತೂಕವನ್ನು ಎತ್ತುತ್ತಾರೆ.

ಮೂರನೇ ದಿನ ಅವರು ಲೆಗ್ ವ್ಯಾಯಾಮ ಅಥವಾ ಕಾರ್ಡಿಯೋ (ಟ್ರೆಡ್ ಮಿಲ್, ಸೈಕ್ಲಿಂಗ್ ಇತ್ಯಾದಿ) ಮಾಡುತ್ತಾರೆ. ನಾಲ್ಕನೇ ದಿನ, ಭುಜದ ವ್ಯಾಯಾಮಗಳನ್ನು ಮಾಡುತ್ತಾರೆ ಮತ್ತು ಎಬಿಎಸ್ (ಹೊಟ್ಟೆ) ವ್ಯಾಯಾಮಗಳನ್ನು ಅದರೊಟ್ಟಿಗೆ ಸೇರಿಸುತ್ತಾರೆ. ಐದನೇ ದಿನ, ಅವರು ದೇಹದ ದುರ್ಬಲ ಭಾಗಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿ ಅವುಗಳನ್ನು ಬಲಪಡಿಸಲು ವ್ಯಾಯಾಮ ಮಾಡುತ್ತಾರೆ.

ಆರನೇ ದಿನ, ಸಚಿನ್ ಲೆಗ್ ವ್ಯಾಯಾಮವನ್ನು ಮಾಡುತ್ತಾರೆ, ಇಲ್ಲವೇ ನಿಧಾನವಾಗಿ ಕಾರ್ಡಿಯೋ ಮಾಡುತ್ತಾರೆ. ಏಳನೇ ದಿನ ಅಂದರೆ ಭಾನುವಾರ, ವಿಶ್ರಾಂತಿ ತೆಗೆದುಕೊಳ್ಳುತ್ತಾರೆ, ಇದರಿಂದ ದೇಹವು ಚೇತರಿಸಿಕೊಳ್ಳುತ್ತದೆ ಎಂದು ಅವರು ಹೇಳುತ್ತಾರೆ.

ಸಮಯಕ್ಕೆ ಅನುಗುಣವಾಗಿ, ಅವರು ತಮ್ಮ ವ್ಯಾಯಾಮದ ಅನುಕ್ರಮವನ್ನು ಬದಲಾಯಿಸುತ್ತಲೇ ಇರುತ್ತಾರೆ.

ಇದನ್ನೂ ಓದಿ:   IND vs SA: ಸೆಂಚುರಿಯನ್ ಟೆಸ್ಟ್ ಗೆಲುವಿನ ಬಳಿಕ ಹೋಟೆಲ್ ಸಿಬ್ಬಂದಿಗಳೊಂದಿಗೆ ಕುಣಿದು ಕುಪ್ಪಳಿಸಿದ ಕೊಹ್ಲಿ! ವಿಡಿಯೋ

Follow us on

Click on your DTH Provider to Add TV9 Kannada