ಇಸ್ರೇಲ್​​-ಇರಾನ್ ಮಧ್ಯೆ ಯುದ್ಧ: ದುಬೈ ಏರ್​ಪೋರ್ಟ್​​​ನಲ್ಲಿ ಕುಟುಂಬ ಸಮೇತ ಸಿಲುಕಿದ ​​ಭೋಜೇಗೌಡ

Edited By:

Updated on: Feb 28, 2026 | 6:18 PM

ಇಸ್ರೇಲ್-ಇರಾನ್ ಯುದ್ಧದ ಪರಿಣಾಮವಾಗಿ ಕನ್ನಡಿಗರಿಗೆ ಬಿಸಿ ತಟ್ಟಿದೆ. ಜೆಡಿಎಸ್ ಪರಿಷತ್ ಸದಸ್ಯ ಬೋಜೆ ಗೌಡ ಮತ್ತು ಅವರ ಕುಟುಂಬ ದುಬೈ ಏರ್‌ಪೋರ್ಟ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಬೆಂಗಳೂರಿಗೆ ಹೊರಟಿದ್ದ ಅವರ ವಿಮಾನ ಸೇವೆ ಯುದ್ಧದ ಕಾರಣದಿಂದ ಸ್ಥಗಿತಗೊಂಡಿದೆ. ಈ ಅನಿರೀಕ್ಷಿತ ಘಟನೆ ಅಂತರಾಷ್ಟ್ರೀಯ ಘರ್ಷಣೆಯು ಸಾಮಾನ್ಯ ಜನರ ಪ್ರಯಾಣ ಮತ್ತು ಸುರಕ್ಷತೆಯ ಮೇಲೆ ಬೀರುವ ಪರಿಣಾಮವನ್ನು ಎತ್ತಿ ತೋರಿಸುತ್ತದೆ.

ದುಬೈ, ಫೆಬ್ರವರಿ 28: ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಅತಿದೊಡ್ಡ ಕಾರ್ಯಾಚರಣೆಯನ್ನೇ ಆರಂಭಿಸಿದೆ. ಅಮೆರಿಕದ-ಇಸ್ರೇಲ್ ಸೇನೆ ಹಾರಿಸಿದ ಕ್ಷಿಪಣಿ, ಇರಾನ್ ರಾಜಧಾನಿ ಟೆಹರಾನ್​ಗೆ ಅಪ್ಪಳಿಸುತ್ತಲೇ ಮಧ್ಯಪ್ರಾಚ್ಯ ತಲ್ಲಣಗೊಂಡಿದೆ. ಸದ್ಯ ಈ ಯುದ್ಧದ ಕನ್ನಡಿಗರಿಗೂ ತಟ್ಟಿದೆ. ಯುದ್ಧ ಹಿನ್ನಲೆ ದುಬೈ ಏರ್​​​ಪೋರ್ಟ್​ನಲ್ಲಿ ವಿಮಾನ ಪ್ರಯಾಣ ಸ್ಥಗಿತವಾಗಿದೆ. ಹೀಗಾಗಿ ಕುಟುಂಬ ಸಮೇತರಾಗಿ ಜೆಡಿಎಸ್ ಪರಿಷತ್ ಸದಸ್ಯ ಭೋಜೇಗೌಡ ದುಬೈ ಏರ್​​​ಪೋರ್ಟ್​ನಲ್ಲಿ ಸಿಲುಕಿಕೊಂಡಿದ್ದಾರೆ. ದುಬೈನಿಂದ ಬೆಂಗಳೂರಿಗೆ ಹೊರಟಿದ್ದರು. ಈ ವೇಳೆ ವಿಮಾನ ಪ್ರಯಾಣ ಸ್ಥಗಿತವಾಗಿವೆ. ಈ ಬಗ್ಗೆ ಭೋಜೇಗೌಡ ಅವರು ವಿಡಿಯೋ ಹಂಚಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us