ನಿಷ್ಪ್ರಯೋಜಕ, ಲಜ್ಜೆಗೇಡಿ ಬಿಬಿಎಮ್​ಪಿ ಅಧಿಕಾರಿಗಳು ವಿವಿ ಪುರಂ ಸಂಚಾರಿ ಠಾಣೆ ಪೊಲೀಸರನ್ನು ಮಾದರಿಯಾಗಿಟ್ಟುಕೊಳ್ಳಬೇಕು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 17, 2021 | 7:29 PM

ಸರ್ಕಾರ ಅವರಿಗೆ ಸಂಬಳ ನೀಡೋದು ಈ ಕೆಲಸಕ್ಕಲ್ಲ ಅಥವಾ ಇದನ್ನು ಮಾಡಿದ್ದಕ್ಕೆ ತಮ್ಮ ಮೇಲಧಿಕಾರಿಗಳಿಂದ ಪ್ರಾಯಶಃ ಪ್ರಶಂಸೆಯೂ ಅವರಿಗೆ ಸಿಕ್ಕಲಾರದು. ಆದರೂ ಅವರು ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ

ಈ ವಿಡಿಯೋ ನಿರ್ಲಜ್ಯ, ಬೇಜವಾಬ್ದಾರಿ ಮತ್ತು ಕೇವಲ ಬಟ್ಟೆತೊಟ್ಟು ಕಚೇರಿಗೆ ಹೋಗಿ, ಸುಮಾರು 6-7 ತಾಸುಗಳ ಕಾಲ ತಮ್ಮ ಮೆತ್ತನೆಯ ಕುರ್ಚಿ ಮೇಲೆ ಕೂತು ಪ್ರತಿದಿನ ಬೇರೆ ಬೇರೆ ಕೆಲಸಗಳಿಗಾಗಿ ತಮ್ಮಲ್ಲಿಗೆ ಬರುವ ಸಾರ್ವಜನಿಕರಿಂದ ಹಣ ಪೀಕುವುದರ ಜೊತೆಗೆ ತಿಂಗಳು ಕೊನೆಗೊಂಡ ನಂತರ ಸರ್ಕಾರದಿಂದ ಸಂಬಳ ಪಡೆಯುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ಮುಖಕ್ಕೆ ಕ್ಯಾಕರಿಸಿ ಉಗಿಯುವಂತಿದೆ. ನಗರದ ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆಯ ಪೇದೆಗಳು ಬಿಬಿಎಮ್ ಪಿ ಅಧಿಕಾರಿಗಳು ಮಾಡಬೇಕಿರುವ ಕೆಲಸವನ್ನು ನಿಸ್ವಾರ್ಥ ಆದರೆ ಕೇವಲ ಸೇವಾ ಮನೋಭಾವನೆಯಿಂದ ಮಾಡುತ್ತಿದ್ದಾರೆ. ತಮ್ಮ ಠಾಣೆ ವ್ಯಾಪ್ತಿಯ ರಸ್ತೆಗಳಲ್ಲಿನ ಗುಂಡಿಗಳನ್ನು ಇಟ್ಟಿಗೆಗಳಿಂದ ಮುಚ್ಚಿ ಸಾರ್ವಜನಿಕರ ವಾಹನ ಓಡಾಟ ಸರಾಗ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಸರ್ಕಾರ ಅವರಿಗೆ ಸಂಬಳ ನೀಡೋದು ಈ ಕೆಲಸಕ್ಕಲ್ಲ ಅಥವಾ ಇದನ್ನು ಮಾಡಿದ್ದಕ್ಕೆ ತಮ್ಮ ಮೇಲಧಿಕಾರಿಗಳಿಂದ ಪ್ರಾಯಶಃ ಪ್ರಶಂಸೆಯೂ ಅವರಿಗೆ ಸಿಕ್ಕಲಾರದು. ಆದರೂ ಅವರು ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಅವರ ನಿಸ್ವಾರ್ಥ ಮನೋಭಾವಕ್ಕೆ ಒಂದು ಸಲಾಂ ಮಾರಾಯ್ರೇ.

ನಿಮಗೆ ಗೊತ್ತಿದೆ, ಬಿಬಿಎಮ್ ಪಿಯಲ್ಲಿ ಈಗ ಅಧಿಕಾರಿಗಳದ್ದೇ ದರ್ಬಾರು. ಕೋವಿಡ್-19 ಪಿಡುಗುನಿಂದಾಗಿ ಪಾಲಿಕೆಗೆ ಚುನಾವಣೆ ನಡೆದಿಲ್ಲ, ಇನ್ನು ಅದು ನಡೆಯೋದು ಮುಂದಿನ ವರ್ಷವೇ. ಹಾಗಾಗಿ, ರಸ್ತೆಗೆ ಗುಂಡಿಗಳು ಬೀಳಲಿ ಅಥವಾ ಗುಂಡಿಗಳ ಮಧ್ಯೆ ರಸ್ತೆ ಹುಡುಕುವಂಥ ಪ್ರಮೇಯ ಎದುರಾಗಲಿ, ಸರ್ಕಾರೀ ಬಾಬುಗಳನ್ನು ಯಾರೂ ಕೇಳುವಂತಿಲ್ಲ.

ನೀವೇನಾದರೂ ಸರ್ಕರವನ್ನೋ ಅಥವಾ ನಿಮ್ಮ ಭಾಗದ ಶಾಸಕನನ್ನೋ ಅವ್ಯವಸ್ಥೆ ಬಗ್ಗೆ ಕೇಳಿದರೆ, ಅವರು ತಮ್ಮ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ವರ್ಗಾಯಿಸುತ್ತಾರೆ. ಇನ್ನು ಅಧಿಕಾರಿಗಳು ಗೊತ್ತಲ್ಲ!?

ಇದನ್ನೂ ಓದಿ:   ಬೊಂಬೆ ಹೇಳುತೈತೆ ಹಾಡಿನ ಮುಖಾಂತರ ಪುನೀತ್​ಗೆ ನಮನ ಸಲ್ಲಿಸಿದ 50ಕ್ಕೂ ಹೆಚ್ಚು ಪುಟಾಣಿಗಳು; ವಿಡಿಯೋ ನೋಡಿ

Published on: Nov 17, 2021 05:10 PM