ಶಿವಮೊಗ್ಗದಲ್ಲಿ ಪೌರ ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ; ಎಸ್​ಪಿ ಕಾಲ್ ಮಾಡಿ ಪೊಲೀಸರು ದನ ಕಾಯುತ್ತಿದ್ರಾ ಎಂದು ಗರಂ ಆದ ಈಶ್ವರಪ್ಪ

ಪೌರ ಕಾರ್ಮಿಕ ದೇವರಾಜ್ ಮತ್ತು ಮಂಜುನಾಥ್ ಮೇಲೆ ಜೆಪಿ ನಗರದಲ್ಲಿ ಹಲ್ಲೆ ನಡೆದಿತ್ತು. ಕಸ ವಿಲೇವಾರಿ ವೇಳೆ ಗುಂಪು ಬಂದು ಹಲ್ಲೆ ಮಾಡಿತ್ತು. ಈ ಪ್ರಕರಣ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಶಿವಮೊಗ್ಗದಲ್ಲಿ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸುವಂತೆ ಸಚಿವ ಕೆಎಸ್ ಈಶ್ವರಪ್ಪ ಎಸ್​ಪಿಗೆ ಸೂಚನೆ ನೀಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಪೌರ ಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪೌರ ಕಾರ್ಮಿಕರ ಆರೋಗ್ಯವನ್ನು ವಿಚಾರಿಸಿದ ಸಚಿವ ಈಶ್ವರಪ್ಪ, ಆರೋಪಿಗಳನ್ನು ಅರೆಸ್ಟ್ ಮಾಡುವಂತೆ ಖಡಕ್ ಸೂಚನೆ ನೀಡಿದ್ದಾರೆ. ಇದೇ ವೇಳೆ ತುಂಗಾನಗರ ಠಾಣೆ ಪೊಲೀಸರ ವಿರುದ್ಧ ಸಚಿವರು ಕಿಡಿಕಾರಿದರು. ಪೊಲೀಸರು ದನ ಕಾಯುತ್ತಿದ್ರಾ ಅಂತ ಈಶ್ವರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಜೆ ವೇಳೆಗೆ ಎಲ್ಲ ಆರೋಪಿಗಳನ್ನು ಬಂಧಿಸಬೇಕೆಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

ಮೊನ್ನೆ ಪೌರ ಕಾರ್ಮಿಕ ದೇವರಾಜ್ ಮತ್ತು ಮಂಜುನಾಥ್ ಮೇಲೆ ಜೆಪಿ ನಗರದಲ್ಲಿ ಹಲ್ಲೆ ನಡೆದಿತ್ತು. ಕಸ ವಿಲೇವಾರಿ ವೇಳೆ ಗುಂಪು ಬಂದು ಹಲ್ಲೆ ಮಾಡಿತ್ತು. ಈ ಪ್ರಕರಣ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೌರ ಕಾರ್ಮಿಕರ ಆರೋಗ್ಯವನ್ನು ಈಶ್ವರಪ್ಪ ವಿಚಾರಿಸಿದರು. ಅಲ್ಲದೇ ಎಸ್​ಪಿಗೆ ಕಾಲ್ ಮಾಡಿ ಹಲ್ಲೆ ಮಾಡಿದವರನ್ನು ಬಂಧಿಸಬೇಕು. ತುಂಗಾ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಏನು ದನ ಕಾಯುತ್ತಿದ್ರಾ ಅಂತ ಗರಂ ಆಗಿದ್ದಾರೆ.

ಇದನ್ನೂ ಓದಿ

Viral Video: ವೀಕೆಂಡ್​ನಲ್ಲಿ ಮಳೆ ಬಂದು ಪ್ಲ್ಯಾನ್​​ ಎಲ್ಲಾ ಹಾಳಾಗಿದ್ದಕ್ಕೆ ಮಗುವಿನ ರಿಯಾಕ್ಷನ್ ಹೇಗಿತ್ತು ನೋಡಿ!

Viral Video: ಯುವತಿಯನ್ನು ಬಿಗಿಯಾಗಿ ಅಪ್ಪಿಕೊಂಡ ದೈತ್ಯ ಮೊಸಳೆ: ಮುಂದೇನಾಯ್ತು? ವಿಡಿಯೊ ನೋಡಿ

Click on your DTH Provider to Add TV9 Kannada