Viral Video: ವೀಕೆಂಡ್​ನಲ್ಲಿ ಮಳೆ ಬಂದು ಪ್ಲ್ಯಾನ್​​ ಎಲ್ಲಾ ಹಾಳಾಗಿದ್ದಕ್ಕೆ ಮಗುವಿನ ರಿಯಾಕ್ಷನ್ ಹೇಗಿತ್ತು ನೋಡಿ!

ಮಳೆ ಬಂದು ಪ್ಲ್ಯಾನ್​ ಎಲ್ಲಾ ಹಾಳಾಗಿದ್ದಕ್ಕೆ ಮಗುವಿನ ಮುಖ ಸಪ್ಪೆಯಾಗಿದೆ. ಅದರಲ್ಲಿಯೂ ವೀಕೆಂಡ್​ನಲ್ಲಿ ಮಳೆ ಬಂದ್ರೆ ಕೇಳ್ಬೇಕಾ? ಮಗು ಮಳೆಯನ್ನು ನೋಡಿ ಸಿಟ್ಟಾಗಿದ್ದಾಳೆ. ಮಗುವಿನ ಕ್ಯೂಟ್​ ರಿಯಾಕ್ಷನ್​ ಹೇಗಿತ್ತು? ವಿಡಿಯೊದಲ್ಲೇ ನೋಡಿ.

Viral Video: ವೀಕೆಂಡ್​ನಲ್ಲಿ ಮಳೆ ಬಂದು ಪ್ಲ್ಯಾನ್​​ ಎಲ್ಲಾ ಹಾಳಾಗಿದ್ದಕ್ಕೆ ಮಗುವಿನ ರಿಯಾಕ್ಷನ್ ಹೇಗಿತ್ತು ನೋಡಿ!
Follow us
TV9 Web
| Updated By: shruti hegde

Updated on: Nov 17, 2021 | 11:29 AM

ಮುದ್ದಾದ ಮಗುವಿನ ಆ ನಗು, ತುಂಟಾಟ ಎಲ್ಲವೂ ಮನಸ್ಸಿಗೆ ಬಹುಬೇಹ ಇಷ್ಟವಾಗುತ್ತವೆ. ಮಕ್ಕಳ ಆ ಸುಂದರ ನಗುವಿಗೆ ನಮ್ಮೆಲ್ಲಾ ಮನಸ್ಸಿನ ಬೇಸರವನ್ನು ಮರೆಸುವ ಶಕ್ತಿ ಇದೆ. ಕೆಲವು ಬಾರಿ ಪುಟ್ಟ ಮಕ್ಕಳ (Kids) ರಿಯಾಕ್ಷನ್ ಮಜವಾಗಿರುತ್ತವೆ. ಇದೀಗ ವೈರಲ್​ ಆಗಿರುವ ವಿಡಿಯೊ (Viral Video) ಕೂಡಾ ಅಂಥದ್ದೇ! ಮಳೆ ಬಂದು ಪ್ಲ್ಯಾನ್​ ಎಲ್ಲಾ ಹಾಳಾಗಿದ್ದಕ್ಕೆ ಮಗುವಿನ ಮುಖ ಸಪ್ಪೆಯಾಗಿದೆ. ಅದರಲ್ಲಿಯೂ ವೀಕೆಂಡ್​ನಲ್ಲಿ ಮಳೆ ಬಂದ್ರೆ ಕೇಳ್ಬೇಕಾ? ಮಗು ಮಳೆಯನ್ನು (Heavy Rain) ನೋಡಿ ಸಿಟ್ಟಾಗಿದ್ದಾಳೆ. ಜೋರಾಗಿ ಸುರಿಯುತ್ತಿರುವ ಮಳೆ ಕಂಡು ಬಾಲ್ಕನಿಯಲ್ಲಿ ನಿಂತು ಕೊಟ್ಟ ರಿಯಾಕ್ಷನ್ (Kid Reaction)​ ಇದೀಗ ಸಕತ್​ ವೈರಲ್​ ಆಗಿದೆ.

ವೀಕೆಂಟ್​ನಲ್ಲಿ ಜೋರಾದ ಮಳೆ ಬಂದಿದ್ದಕ್ಕೆ ಈ ಪುಟ್ಟ ಮಗು ಬೇಸರಗೊಂಡಿದೆ. ಹೊರಗಡೆ ಸ್ನೇಹಿತರೊಂದಿಗೆ ಆಟವಾಡಬೇಕು ಎಂದು ಖುಷಿಯಿಂದ ಇದ್ದ ಮಗುವಿನ ಆಸೆಯನ್ನೆಲ್ಲಾ ಈ ಮಳೆ ಹಾಳು ಮಾಡಿದ್ದರಿಂದ ಮಗುವಿನ ಮುಖ ಸಪ್ಪೆಯಾಗಿದೆ. ಮಗುವನ್ನು ನೋಡಿದ ತಕ್ಷಣ ಅಯ್ಯೋ ಪಾಪ ಅನ್ನುವಷ್ಟರ ಮಟ್ಟಿಗೆ ಮುದ್ದಾಗಿದೆ ಈ ಮಗುವಿನ ರಿಯಾಕ್ಷನ್. ವಿಡಿಯೊ ಇದೆ ನೀವೇ ನೋಡಿ.

ಬಾಲ್ಕನಿಯಲ್ಲಿ ನಿಂತ ಮಗು ಮಳೆ ಬರುತ್ತಿರುವುದನ್ನು ನೋಡುತ್ತಿದೆ. ವೀಕೆಂಡ್​ನ ಪ್ಲ್ಯಾನ್​ ಎಲ್ಲಾ ಹಾಳು ಮಾಡಿದ್ದಕ್ಕೆ ಸಿಟ್ಟಿನಲ್ಲಿ ಕೈಗಳನ್ನು ಬೀಸುತ್ತಿದ್ದಾಳೆ. ವಿಡಿಯೊವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. ಸುಮಾರು 23,600 ಕ್ಕೂ ಹೆಚ್ಚಿನ ಲೈಕ್ಸ್​ಗಳನ್ನು ಗಳಿಸಿಕೊಂಡಿದೆ.

ನೆಟ್ಟಿಗರು ಈ ತಮಾಷೆಯ ವಿಡಿಯೊವನ್ನು ಮೆಚ್ಚಿಕೊಂಡಿದ್ದಾರೆ. ತಮ್ಮ ಅನಿಸಿಕೆಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ತುಂಬಾ ಮುದ್ದಾದ ವಿಡಿಯೊ ಎಂದು ಓರ್ವರು ಹೇಳಿದ್ದಾರೆ. ಪುಟ್ಟ ಹುಡುಗಿಯನ್ನು ನೋಡಿದರೆ ಮನಸ್ಸಿಗೆ ಖುಷಿ ಅನಿಸುತ್ತದೆ ಎಂದು ಮತ್ತೋರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಆಟಿಕೆ ಮಾರುತ್ತಿದ್ದ ಮಗುವನ್ನು ನೋಡಿ ಅಪ್ಪಿಕೊಂಡ ಮತ್ತೊಂದು ಮುದ್ದಾದ ಮಗು; ಕ್ಯೂಟ್ ವಿಡಿಯೊ ವೈರಲ್

Viral Video: ಹನುಮಂತನ ಪಾದಕ್ಕೆ ನಮಸ್ಕರಿಸಿ ದೇವಸ್ಥಾನದ ಹುಂಡಿಯ ಹಣವನ್ನೇ ಕದ್ದೊಯ್ದ ಕಳ್ಳ! ವಿಡಿಯೊ ವೈರಲ್​