ಬಿಡುಗಡೆ ವೇಳೆ ಹಮಾಸ್ ಕಾರ್ಯಕರ್ತರ ಹಣೆಗೆ ಮುತ್ತಿಟ್ಟ ಇಸ್ರೇಲಿ ಒತ್ತೆಯಾಳು
ಇತ್ತೀಚೆಗೆ ಗಾಜಾದಲ್ಲಿ ನಡೆದ ಕೈದಿಗಳ ವಿನಿಮಯದ ಸಂದರ್ಭದಲ್ಲಿ ಒತ್ತೆಯಾಳಾಗಿದ್ದ ಇಸ್ರೇಲಿ ವ್ಯಕ್ತಿಯೊಬ್ಬರು ಹಮಾಸ್ ಕಾರ್ಯಕರ್ತರ ಬಗ್ಗೆ ಪ್ರೀತಿಯ ಸೂಚಕವಾಗಿ ಅವರ ಹಣೆಯ ಮೇಲೆ ಚುಂಬಿಸುತ್ತಿರುವುದನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿವಿಧ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಒಮರ್ ಶೆಮ್ ಟೋವ್ ಎಂದು ಗುರುತಿಸಲ್ಪಟ್ಟ ಇಸ್ರೇಲಿ ಒತ್ತೆಯಾಳು ವೇದಿಕೆಯ ಮೇಲೆ ಕೈ ಬೀಸುತ್ತಾ ಇಬ್ಬರು ಹಮಾಸ್ ಸದಸ್ಯರ ಹಣೆಗೆ ಮುತ್ತಿಟ್ಟಿದ್ದಾರೆ.
ನವದೆಹಲಿ: ಇಂದು ನಡೆದ ಒತ್ತೆಯಾಳುಗಳ ವಿನಿಮಯದಲ್ಲಿ, ಹಮಾಸ್ ಉಗ್ರಗಾಮಿ ಗುಂಪಿನ ನಿಯಂತ್ರಣದಲ್ಲಿದ್ದ ಇನ್ನೂ ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಹಸ್ತಾಂತರಿಸಲಾಯಿತು. ಕೇಂದ್ರ ಪಟ್ಟಣವಾದ ನುಸೈರಾತ್‌ನಲ್ಲಿ ನೂರಾರು ಪ್ಯಾಲೆಸ್ಟೀನಿಯನ್ನರು ನೋಡುತ್ತಿದ್ದಂತೆ ಮೂವರು ಇಸ್ರೇಲಿ ಪುರುಷರಾದ ಓಮರ್ ವೆಂಕರ್ಟ್, ಓಮರ್ ಶೆಮ್ ಟೋವ್ ಮತ್ತು ಎಲಿಯಾ ಕೊಹೆನ್ ಅವರನ್ನು ವೇದಿಕೆಯ ಮೇಲೆ ಪೋಸ್ ನೀಡುವಂತೆ ಮಾಡಲಾಯಿತು. ಆಗ ಓಮರ್ ಶೆಮ್ ಟೋವ್ ಮತ್ತು ವೆಂಕರ್ಟ್ ಮುಗುಳ್ನಗುತ್ತಾ ಜನರತ್ತ ಕೈ ಬೀಸಿದರು. ಓಮರ್ ಶೆಮ್ ಟೋವ್ ಹಮಾಸ್ ಕಾರ್ಯಕರ್ತರೊಬ್ಬರ ಹಣೆಗೆ ಮುತ್ತಿಟ್ಟಿರುವ ವಿಡಿಯೋ ವೈರಲ್ ಆಗಿದೆ.
ಬಳಿಕ ಆ ಮೂವರನ್ನು ರೆಡ್‌ಕ್ರಾಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಇಸ್ರೇಲಿ ಒತ್ತೆಯಾಳು ಓಮರ್ ಶೆಮ್ ಟೋವ್ ವೇದಿಕೆಯ ಮೇಲೆ ಕೈ ಬೀಸುತ್ತಾ ಇಬ್ಬರು ಹಮಾಸ್ ಸದಸ್ಯರ ಹಣೆಗೆ ಮುತ್ತಿಟ್ಟಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಮ್ಮ ಮಗ ಅತಿಯಾದ ಸಂತೋಷವನ್ನು ಈ ರೀತಿ ಅಭಿವ್ಯಕ್ತಪಡಿಸಿದ್ದಾನೆ ಎಂದು ಆತನ ತಂದೆ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ