ನಾವು ಸಿನಿಮಾ ಹೀರೋ, ಇವರೇ ನಿಜವಾದ ಹೀರೋ: ಹೆಮ್ಮೆಯ ಕನ್ನಡತಿ ಬಗ್ಗೆ ಧ್ರುವ ಸರ್ಜಾ ಮಾತು
ಇಡೀ ನಾಡನ್ನು ಹಸಿರಾಗಿಸಲು ಪರಿಸರ ಪ್ರೇಮಿ ಸರಸ್ವತಿ ಅವರು ಮಾಡಿದ ಕೆಲಸವನ್ನು ಗುರುತಿಸಲಾಗಿದೆ. ಅವರಿಗೆ ಹೆಮ್ಮೆಯ ಕನ್ನಡತಿ ಪ್ರಶಸ್ತಿ ನೀಡಲಾಗಿದೆ. ಈ ವೇಳೆ ಸಾಧಕಿ ಸರಸ್ವತಿ ಅವರು ಮಾತನಾಡಿದರು. ಅವರಿಗೆ ಈ ಪ್ರಶಸ್ತಿ ನೀಡಿದ ಟಿವಿ9 ವಾಹಿನಿಗೆ ಶರವಣನ್ ಮತ್ತು ಧ್ರುವ ಸರ್ಜಾ ಅವರು ಧನ್ಯವಾದ ಹೇಳಿದ್ದಾರೆ.
ಪರಿಸರ ಪ್ರೇಮಿ ಸರಸ್ವತಿ ಅವರಿಗೆ ‘ಟಿವಿ9 ಹೆಮ್ಮೆಯ ಕನ್ನಡತಿ’ ಪ್ರಶಸ್ತಿ ಸಿಕ್ಕಿದೆ. ಈ ವೇದಿಕೆಯಲ್ಲಿ ನಟ ಧ್ರುವ ಸರ್ಜಾ ಅವರು ಮಾತನಾಡಿದ್ದಾರೆ. ‘ಹೆಮ್ಮೆಯ ಕನ್ನಡತಿ ಎಂದರೆ.. ನಾವು ತೆರೆ ಮೇಲೆ ಮಾತ್ರ ಹೀರೋ. ರಿಯಲ್ ಲೈಫ್ನಲ್ಲಿ ಇವರೇ ಹೀರೋ. ಇಂಥ ಕಾರ್ಯಕ್ರಮ ಮಾಡಿ ಪ್ರೋತ್ಸಾಹ ನೀಡುತ್ತಿರುವ ಟಿವಿ9 ವಾಹಿನಿಗೆ ಆಲ್ ದಿ ಬೆಸ್ಟ್’ ಎಂದು ಧ್ರುವ ಸರ್ಜಾ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರು ‘ಕೆಡಿ’ ಸಿನಿಮಾದ ಡೈಲಾಗ್ ಕೂಡ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.