Loading video

ಎಕ್ಸ್​ಪೋಸ್ಯಾಟ್ ಹೊತ್ತ ಪೋಲಾರ್ ಸ್ಯಾಟೆಲೈಟ್ ಲಾಂಚ್ ವೆಹಿಕಲ್ ಆಕಾಶಕ್ಕೆ ಹಾರಿಸಿದ ಇಸ್ರೋ ಸಾಧನೆಯ ಕಿರೀಟದಲ್ಲಿ ಮತ್ತೊಂದು ಗರಿ!

|

Updated on: Jan 01, 2024 | 11:29 AM

ಎಕ್ಸ್ ಪೋಸ್ಯಾಟ್ ಅಂತ ಕರೆಸಿಕೊಳ್ಳುವ ಎಕ್ಸ್-ರೇ ಪೊಲಾರಿ ಮೀಟರ್ ಉಪಗ್ರಹ ತನ್ನೊಂದಿಗೆ ವಿವಿಧೋದ್ದೇಶಗಳ 10 ಉಪಗ್ರಹಗಳನ್ನು ಅಂತರಿಕ್ಷಕ್ಕೆ ಹೊತ್ತೊಯ್ದಿದೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ ಉಪಗ್ರಹಗಳನ್ನು ರಾಷ್ಟ್ರದ ಸ್ಟಾರ್ಟ್ ಅಪ್, ಶೈಕ್ಷಣಿಕ ಕೇಂದ್ರ ಮತ್ತು ಇಸ್ರೋ ಕೇಂದ್ರಗಳು ನಿರ್ಮಾಣ ಮಾಡಿವೆ.

ಶ್ರೀಹರಿಕೋಟಾ: ಕಳೆದ ವರ್ಷ ಆಗಸ್ಟ್ ನಲ್ಲ್ಲಿ ಚಂದ್ರಯಾನ ಯಾನ-3 ಮೂಲಕ ವಿಕ್ರಮ ಲ್ಯಾಂಡರ್ ಅನ್ನು ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವೀಯಾಗಿ ಲ್ಯಾಂಡ್ ಮಾಡಿದ ಬಳಿಕ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) (ISRO) ವಿಶ್ವದಲ್ಲಿ ಸಾಟಿಯಿಲ್ಲದ ವೈಜ್ಞಾನಿಕ ಸಂಸ್ಥೆಯೆನಿಸಿದೆ ಅಂದರೆ ಉತ್ಪ್ರೇಕ್ಷೆ ಅನಿಸದು. ಇಸ್ರೋ ತನ್ನ ಹಿರಿಮೆಯನ್ನು ಪದೇಪದೆ ಸಾಬೀತು ಮಾಡುತ್ತಿದೆ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ಹೊಸ ವರ್ಷ ಆರಂಭವಾಗುತ್ತಿದ್ದ ತೆಯೇ ಅದು ಮತ್ತೊಂದು ಸಾಧನೆಯ ಗರಿಯನ್ನು ಮುಡಿಗೇರಿಸಿಕೊಂಡಿದೆ. ಅಂದರೆ 2024ರ ಮೊದಲ ದಿನದಂದೇ ಇಸ್ರೋ ಶ್ರೀಹರಿಕೋಟಾ ಬಾಹ್ಯಾಕಾಶ ಉಡ್ಡಯನ ಕೇಂದ್ರದಿಂದ ಪೋಲಾರ್ ಸ್ಯಾಟೆಲೈಟ್ ಲಾಂಚ್ ವೆಹಿಕಲ್ ಅನ್ನು (ಪಿಎಸ್ ಎಲ್ ವಿ) (PSLV) ಗಗನಕ್ಕೆ ಹಾರಿಸಿದೆ. ಎಕ್ಸ್ ಪೋಸ್ಯಾಟ್ (XPOSat)ಅಂತ ಕರೆಸಿಕೊಳ್ಳುವ ಈ ಎಕ್ಸ್-ರೇ ಪೊಲಾರಿ ಮೀಟರ್ ಉಪಗ್ರಹ ತನ್ನೊಂದಿಗೆ ವಿವಿಧೋದ್ದೇಶಗಳ 10 ಉಪಗ್ರಹಗಳನ್ನು ಅಂತರಿಕ್ಷಕ್ಕೆ ಹೊತ್ತೊಯ್ದಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಉಪಗ್ರಹಗಳನ್ನು ರಾಷ್ಟ್ರದ ಸ್ಟಾರ್ಟ್ ಅಪ್, ಶೈಕ್ಷಣಿಕ ಕೇಂದ್ರ ಮತ್ತು ಇಸ್ರೋ ಕೇಂದ್ರಗಳು ನಿರ್ಮಾಣ ಮಾಡಿವೆ. ಎಲ್ಲ ಭಾರತೀಯರನ್ನು ಮತ್ತೊಮ್ಮೆ ಹೆಮ್ಮೆ ಪಡುವ ಸಂದರ್ಭನ್ನು ಹೊಸವರ್ಷದ ಮೊದಲ ದಿನವೇ ನೀಡಿದ ಇಸ್ರೋ ಸಂಸ್ಥೆಗೆ ಕನ್ನಡಿಗರ ಅಭಿಮಾನ ಮತ್ತು ಕೃತಜ್ಞತೆಯ ಸಲಾಂ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ