ಶಾಲಾ ಕ್ರೀಡೆಗಳ ಭವಿಷ್ಯಕ್ಕೆ ಅಜೆಂಡಾ ರೂಪಿಸಿದ ಐಎಸ್ಎಸ್ಒ ಸಮಿಟ್ 2025
ISSO Summit and Awards 2025: ಇಂಟರ್ನ್ಯಾಷನಲ್ ಸ್ಕೂಲ್ ಸ್ಪೋರ್ಟ್ಸ್ ಆರ್ಗನೈಸೇಶನ್ (ಐಎಸ್ಎಸ್ಒ) ಮೊದಲ ಐಎಸ್ಎಸ್ಒ ಸಮಿಟ್ ಮತ್ತು ಅವಾರ್ಡ್ 2025 ಕಾರ್ಯಕ್ರಮವನ್ನು ಮುಂಬೈನ ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್ನಲ್ಲಿ ಇಂದು ಆಯೋಜಿಸಿತು. ಅಂತಾರಾಷ್ಟ್ರೀಯ ಪಠ್ಯಕ್ರಮದ ಶಾಲೆಗಳು, ಒಲಿಂಪಿಯನ್ಗಳು, ರಾಷ್ಟ್ರಮಟ್ಟದ ಅಥ್ಲೀಟ್ಗಳು, ಕ್ರೀಡಾ ವೃತ್ತಿಪರರು ಹೀಗೆ 300ಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮುಂಬೈ, ಆಗಸ್ಟ್ 14: ಇಂಟರ್ನ್ಯಾಷನಲ್ ಸ್ಕೂಲ್ ಸ್ಪೋರ್ಟ್ಸ್ ಆರ್ಗನೈಸೇಶನ್ (ಐಎಸ್ಎಸ್ಒ) ಮೊದಲ ಐಎಸ್ಎಸ್ಒ ಸಮಿಟ್ ಮತ್ತು ಅವಾರ್ಡ್ 2025 ಕಾರ್ಯಕ್ರಮವನ್ನು (ISSO Summit & Awards) ಮುಂಬೈನ ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್ನಲ್ಲಿ ಇಂದು ಆಯೋಜಿಸಿತು. ಅಂತಾರಾಷ್ಟ್ರೀಯ ಪಠ್ಯಕ್ರಮದ ಶಾಲೆಗಳು, ಒಲಿಂಪಿಯನ್ಗಳು, ರಾಷ್ಟ್ರಮಟ್ಟದ ಅಥ್ಲೀಟ್ಗಳು, ಕ್ರೀಡಾ ವೃತ್ತಿಪರರು ಹೀಗೆ 300ಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೆಪಿಎಂಜಿ, ಡ್ರಿಮ್ ಸೆಟ್ ಗೋ ಮತ್ತು ಲೆಸ್ ರೋಚಸ್ ಈ ಕಾರ್ಯಕ್ರಮ ಆಯೋಜನೆಯಲ್ಲಿ ಕೈ ಜೋಡಿಸಿದ್ದವು. ಅದಾನಿ ಗ್ರೂಪ್ನ ನಮ್ರತಾ ಅದಾನಿ ಅವರು ಐಎಸ್ಎಸ್ಒದ ಅಡ್ವೈಸರಿ ಬೋರ್ಡ್ಗೆ ಸೇರ್ಪಡೆ ಆಗಿರುವುದನ್ನು ಈ ಸಂದರ್ಭದಲ್ಲಿ ಘೋಷಿಸಲಾಯಿತು. ‘ಅಂತಾರಾಷ್ಟ್ರೀಯ ಶಾಲೆಗಳಲ್ಲಿ ಕ್ರೀಡೆಯನ್ನು ಕಡ್ಡಾಯವಾದ ಪ್ರಮುಖ ಸಬ್ಜೆಕ್ಟ್ ಆಗಿಸಬೇಕಾ?’ ಎನ್ನುವ ವಿಚಾರದ ಬಗ್ಗೆ ಪ್ಯಾನಲ್ ಚರ್ಚೆ ನಡೆಯಿತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ