ಅರೆಸ್ಟ್ ಆಗಿರುವ ದರ್ಶನ್ ನೋಡಲು ಬಂದ ಅಭಿಮಾನಿಗಳಿಗೆ ಪೊಲೀಸ್ ಲಾಠಿ ರುಚಿ
ಬೇಲ್ ರದ್ದಾದ ಬಳಿಕ ದರ್ಶನ್ ತೂಗುದೀಪ ಅವರನ್ನು ಬಂಧಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಬರಲಾಯಿತು. ಠಾಣೆಯ ಮುಂಭಾಗ ದರ್ಶನ್ ಫ್ಯಾನ್ಸ್ ಜಮಾಯಿಸಿದ್ದರು. ‘ಬಾಸ್ ಬಾಸ್ ಡಿ ಬಾಸ್’ ಎಂದು ಜೈಕಾರ ಕೂಗಿದರು. ಈ ವೇಳೆ ನೂಕು ನುಗ್ಗಲು ಉಂಟಾಯಿತು. ಗುಂಪು ಚದುರಿಸಲು ಪೊಲೀಸರು ಲಾಠಿ ಬೀಸಿದ್ದಾರೆ.
ಜಾಮೀನು ರದ್ದಾದ ಬಳಿಕ ನಟ ದರ್ಶನ್ (Darshan) ಅವರನ್ನು ಬಂಧಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಬರಲಾಗಿದೆ. ಠಾಣೆ ಮುಂಭಾಗ ದರ್ಶನ್ ಅಭಿಮಾನಿಗಳು (Darshan Fans) ಜಮಾಯಿಸಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಜೈಕಾರ ಕೂಗಿದ್ದಾರೆ. ಈ ವೇಳೆ ನೂಕು ನುಗ್ಗಲು ಉಂಟಾಗಿದೆ. ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ್ದಾರೆ. ದರ್ಶನ್ ಮೇಲಿನ ಅಭಿಮಾನದಿಂದ ಬಂದಿದ್ದ ಅನೇಕರು ಲಾಠಿ ರುಚಿ ನೋಡುವಂತಾಗಿದೆ. ಇಷ್ಟು ದಿನ ಜಾಮೀನಿನ ಮೇಲೆ ಆರಾಮಾಗಿದ್ದ ದರ್ಶನ್ ಈಗ ಮತ್ತೆ ಜೈಲು ವಾಸ ಅನುಭವಿಸಬೇಕಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅವರಿಗೆ ಪುನಃ ಸಂಕಷ್ಟ ಶುರು ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

