ದರ್ಶನ್ ಕಾರು ಚಾಮರಾಜನಗರದಲ್ಲಿ ಪತ್ತೆ:ಪೊಲೀಸರಿಗೆ ಶರಣಾಗದೇ ಕಣ್ತಿಪ್ಪಿಸಿ ಓಡಾಡುತ್ತಿದ್ದಾರಾ ದಾಸ?
ರೇಣುಕಾಸ್ವಾಮಿ ಕೇಸ್ನಲ್ಲಿ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಏಳು ಮಂದಿ ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಅನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಏಳು ಮಂದಿಯೂ ಮತ್ತೆ ಜೈಲು ಪಾಲಾಗಬೇಕಾಗಿದೆ. ಈಗಾಗಲೇ ಪವಿತ್ರಾ ಗೌಡ ಸೇರಿದಂತೆ ಕೆಲ ಆರೋಪಿಗಳನ್ನು ಪೊಲೀಸ್ ಬಂಧಿಸಿದ್ದಾರೆ. ಆದ್ರೆ, ಮುಖ್ಯವಾಗಿ ದರ್ಶನ್ ಇನ್ನೂ ಪತ್ತೆಯೇ ಇಲ್ಲ. ಎಲ್ಲಿದ್ದಾರೆ? ಎನ್ನುವುದೇ ಯಾರಿಗೂ ಗೊತ್ತಿಲ್ಲ. ಆದ್ರೆ, ಇದೀಗ ದರ್ಶನ್ ಕಾರು ಚಾಮರಾಜನಗರ ತಾಲೂಕಿನ ಸುವರ್ಣಾವತಿ ಟೋಲ್ ಗೇಟ್ ನಲ್ಲಿ ಪಾಸಾಗಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ
ಚಾಮರಾಜನಗರ, )ಆಗಸ್ಟ್ 14): ರೇಣುಕಾಸ್ವಾಮಿ ಕೇಸ್ನಲ್ಲಿ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಏಳು ಮಂದಿ ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಅನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಏಳು ಮಂದಿಯೂ ಮತ್ತೆ ಜೈಲು ಪಾಲಾಗಬೇಕಾಗಿದೆ. ಈಗಾಗಲೇ ಪವಿತ್ರಾ ಗೌಡ ಸೇರಿದಂತೆ ಕೆಲ ಆರೋಪಿಗಳನ್ನು ಪೊಲೀಸ್ ಬಂಧಿಸಿದ್ದಾರೆ. ಆದ್ರೆ, ಮುಖ್ಯವಾಗಿ ದರ್ಶನ್ ಇನ್ನೂ ಪತ್ತೆಯೇ ಇಲ್ಲ. ಎಲ್ಲಿದ್ದಾರೆ? ಎನ್ನುವುದೇ ಯಾರಿಗೂ ಗೊತ್ತಿಲ್ಲ. ಆದ್ರೆ, ಇದೀಗ ದರ್ಶನ್ ಕಾರು ಚಾಮರಾಜನಗರ ತಾಲೂಕಿನ ಸುವರ್ಣಾವತಿ ಟೋಲ್ ಗೇಟ್ ನಲ್ಲಿ ಪಾಸಾಗಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದರ್ಶನ್ ಗೆ ಸೇರಿದ ರ್ಯಾಂಗ್ಲರ್ ಜೀಪ್ ಹಾಗೂ ಫಾರ್ಚೂನರ್ ಕಾರು ಸುವರ್ಣಾವತಿ ಟೋಲ್ ನಲ್ಲಿ ಪಾಸ್ ಆಗಿದೆ. ಇಂದು (ಆಗಸ್ಟ್ 14) ಬೆಳಗ್ಗೆ 6.11 ನಿಮಿಷಕ್ಕೆ KA 03 ME 1123 ನಂಬರಿನ ಫಾರ್ಚೂನರ್ ಕಾರು ಹಾಗೂ ಜೀಪು ಟೋಲ್ ಪಾಸಾಗಿದ್ದು, ಈ ಬಗ್ಗೆ ಪೊಲೀಸರು ದಾಸನ ಬಂಧನಕ್ಕೆ ಬಲೆ ಬೀಸಿದ್ದಾರೆ.

